- Kannada News Photo gallery Varalakshmi Sarathkumar engaged to her long time boyfriend Nicholai Sachdev
ನಿಶ್ಚಿತಾರ್ಥ ಮಾಡಿಕೊಂಡ ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್ಕುಮಾರ್, ವರ ಯಾರು?
Varalaxmi Sarathkumar: ಕನ್ನಡದ ಕೆಲ ಸಿನಿಮಾಗಳಲ್ಲಿಯೂ ನಟಿಸಿರುವ ನಟಿ ವರಲಕ್ಷ್ಮಿ ಶರತ್ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರ ಯಾರು?
Updated on: Mar 03, 2024 | 2:57 PM

ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ವರಲಕ್ಷ್ಮಿ ಶರತ್ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬಾಯ್ಫ್ರೆಂಡ್ ನಿಖೋಲಯ್ ಸಚ್ದೇವ್ ಜೊತೆಗೆ ವರಲಕ್ಷ್ಮಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇಬ್ಬರ ಕುಟುಂಬದವರು ಸಮಾರಂಭದಲ್ಲಿ ಹಾಜರಿದ್ದರು.

ವರಲಕ್ಷ್ಮಿ ಹಾಗೂ ನಿಖೋಲಯ್ ಸಚ್ದೇವ್ ಅವರ ನಿಶ್ಚಿತಾರ್ಥವು ಮುಂಬೈನಲ್ಲಿ ನಡೆದಿದ್ದು, ಚಿತ್ರಗಳನ್ನು ನಟಿ ವರಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿಖೋಲಯ್ ಸಚ್ದೇವ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಅವರುಗಳು 14 ವರ್ಷಗಳಿಂದಲೂ ಪರಿಚಿತರಂತೆ, ಹಲವು ವರ್ಷದ ಪ್ರೀತಿಯ ಬಳಿಕ ಈಗ ವಿವಾಹವಾಗುವ ನಿಶ್ಚಯ ಮಾಡಿದ್ದಾರೆ.

ವರಲಕ್ಷ್ಮಿ ಶರತ್ಕುಮಾರ್, ನಟ ಶರತ್ಕುಮಾರ್ ಹಾಗೂ ಚಾಯಾ ಅವರ ಪುತ್ರಿ. ಜನಿಸಿದ್ದು ಬೆಂಗಳೂರಿನಲ್ಲಿ, ಕನ್ನಡದ ‘ಮಾಣಿಕ್ಯ’, ‘ರನ್ನ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವರಲಕ್ಷ್ಮಿ ವಿವಾಹವಾಗುತ್ತಿರುವ ನಿಖೋಲಯ್ ಸಚ್ದೇವ್ ಮುಂಬೈನಲ್ಲಿ ಆರ್ಟ್ ಗ್ಯಾಲರಿ ಹೊಂದಿದ್ದಾರೆ. ಉದ್ಯಮಿಯೂ ಹೌದು.

ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಹನುಮಾನ್’ನಲ್ಲಿ ವರಲಕ್ಷ್ಮಿ ಶರತ್ಕುಮಾರ್ ನಟಿಸಿದ್ದಾರೆ. ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ.



















