AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Hockey Junior Asia Cup 2023: ಚೊಚ್ಚಲ ಏಷ್ಯಾಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ವೀರ ವನಿತೆಯರು..!

Women’s Hockey Junior Asia Cup 2023: ಫೈನಲ್ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತದ ಮಹಿಳಾ ತಂಡ ಚೊಚ್ಚಲ ಬಾರಿಗೆ ಹಾಕಿ ಜೂನಿಯರ್ ಏಷ್ಯಾಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಪೃಥ್ವಿಶಂಕರ
|

Updated on:Jun 12, 2023 | 8:51 AM

Share
ಜೂನ್ 3 ರಿಂದ 11 ರ ನಡುವೆ 10 ತಂಡಗಳ ನಡುವೆ ನಡೆದ ಜೂನಿಯರ್ ಮಹಿಳಾ ಹಾಕಿ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತದ ಮಹಿಳಾ ತಂಡ ಚೊಚ್ಚಲ ಬಾರಿಗೆ ಹಾಕಿ ಜೂನಿಯರ್ ಏಷ್ಯಾಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

1 / 7
ಇನ್ನೊಂದು ಪ್ರಮುಖ ವಿಚಾರದವೆಂದರೆ ಭಾರತದ ಜೂನಿಯರ್ ಮಹಿಳಾ ಹಾಕಿ ತಂಡ ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ಜೂನಿಯರ್ ಮಹಿಳಾ ಹಾಕಿ ತಂಡ ಇಡೀ ಟೂರ್ನಿಯಲ್ಲಿ ಒಟ್ಟು 40 ಗೋಲು ಗಳಿಸಿದ್ದು, ಎದುರಾಳಿ ತಂಡಗಳಿಗೆ ಕೇವಲ 4 ಗೋಲು ಗಳಿಸಲು ಮಾತ್ರ ಅವಕಾಶ ನೀಡಿದೆ.

2 / 7
ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ನಡೆದ ಈ ಫೈನಲ್ ಪಂದ್ಯದ ಮೊದಲ 20 ನಿಮಿಷಗಳಲ್ಲಿ ಒಂದೇ ಒಂದು ಗೋಲು ದಾಖಲಾಗಲಿಲ್ಲ. 22ನೇ ನಿಮಿಷದಲ್ಲಿ ಅಣ್ಣು ಪೆನಾಲ್ಟಿ ಸ್ಟ್ರೋಕ್ ಗೋಲು ಗಳಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. 3 ನಿಮಿಷಗಳ ನಂತರ ಕೊರಿಯಾಗೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ಕೊರಿಯಾ ಆಟಗಾರ್ತಿಯರು ಪಂದ್ಯದಲ್ಲಿ 1-1ರ ಸಮಬಲ ಸಾಧಿಸಿದರು.

3 / 7
ಆ ಬಳಿಕ 41ನೇ ನಿಮಿಷದಲ್ಲಿ ಭಾರತ ತಂಡಕ್ಕೆ ಕಾರ್ನರ್ ಸಿಕ್ಕಿತು. ಟೀಂ ಇಂಡಿಯಾ ಆಟಗಾರ್ತಿಯರು ಕೂಡ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ 2-1 ರ ಮುನ್ನಡೆ ನೀಡಿದರು. ಆ ಬಳಿಕ ಎದುರಾಳಿಗೆ ಯಾವುದೇ ಗೋಲು ಗಳಿಸಲು ಭಾರತ ಅವಕಾಶ ನೀಡಲಿಲ್ಲ. ಅಂತಿಮವಾಗಿ ಭಾರತ 2-1 ಅಂತರದಿಂದ ಗೆದ್ದು ಬೀಗಿತು.

4 / 7
ಭಾರತೀಯ ಜೂನಿಯರ್ ಮಹಿಳಾ ತಂಡದ ಈ ಐತಿಹಾಸಿಕ ಗೆಲುವಿನ ನಂತರ ಇಡೀ ತಂಡ ಏಷ್ಯಾಕಪ್‌ನ ಚಿನ್ನದ ಪದಕ ಮತ್ತು ಟ್ರೋಫಿಯನ್ನು ಸ್ವೀಕರಿಸಿ ಸಂಭ್ರಮಿಸಿತು. ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ತಂಡದ ಪ್ರತಿ ಜೂನಿಯರ್ ಮಹಿಳಾ ಆಟಗಾರ್ತಿಗೆ ತಲಾ 2 ಲಕ್ಷ ಬಹುಮಾನ ಸಿಕ್ಕಿದ್ದು, ತಂಡದ ಸಹಾಯಕ ಸಿಬ್ಬಂದಿಗಳಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.

5 / 7
ಇದು ಮಹಿಳೆಯರ ಜೂನಿಯರ್ ಏಷ್ಯಾ ಕಪ್ ಟೂರ್ನಿಯ 8ನೇ ಸೀಸನ್ ಆಗಿತ್ತು. ಭಾರತ ಈ ಟೂರ್ನಿಯಲ್ಲಿ ಗೆದ್ದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಟೂರ್ನಿಯಲ್ಲಿ ದಕ್ಷಿಣ ಕೊರಿಯಾ ತಂಡ ಅತಿ ಹೆಚ್ಚು 4 ಬಾರಿ ಚಾಂಪಿಯನ್ ಆಗಿದೆ. ಇನ್ನು ಚೀನಾ 3 ಬಾರಿ ಗೆದ್ದಿದೆ. ಕರೋನಾದಿಂದಾಗಿ 2021 ರಲ್ಲಿ ಈ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗಿರಲಿಲ್ಲ.

6 / 7
ಇನ್ನೊಂದು ಹೆಮ್ಮೆಯ ವಿಚಾರವೆಂದರೆ ವನಿತಾ ಜೂನಿಯರ್ ಹಾಕಿ ಏಷ್ಯಾಕಪ್​ಗೂ ಮುನ್ನ ನಡೆದ ಪುರುಷರ ಜೂನಿಯರ್ ಹಾಕಿ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕ್ ತಂಡವನ್ನು ಮಣಿಸುವ ಮೂಲಕ ಭಾರತ ಪುರುಷರ ತಂಡವೂ ಕೂಡ ಚಾಂಪಿಯನ್ ಆಗಿತ್ತು.

7 / 7

Published On - 8:47 am, Mon, 12 June 23

ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ

ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್

ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ

ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?

ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!

ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ

ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ

ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ

ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!

ಫ್ಯಾನ್ಸ್ ಮಧ್ಯ ಸಿಲುಕಿ ಹೊರಬರಲಾಗದೆ ಒದ್ದಾಡಿದ ವಿರಾಟ್ ಕೊಹ್ಲಿ