- TV9 Kannada Photo gallery World Cancer Day 2023: Add these foods in your Daily Diet, which will help protect you from the risk of cancer, Kannada Health Tips
World Cancer Day 2023: ಕ್ಯಾನ್ಸರ್ ಅಪಾಯದಿಂದ ನಿಮ್ಮನ್ನು ದೂರವಿರಿಸಲು ಈ ಆಹಾರ ಕ್ರಮ ರೂಡಿಸಿಕೊಳ್ಳಿ
ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಮತ್ತು ಅದರ ತಡೆಗಟ್ಟುವಿಕೆಯನ್ನು ಉತ್ತೇಜಿಸಲು, ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಕ್ಯಾನ್ಸರ್ ಅಪಾಯದಿಂದ ನಿಮ್ಮನ್ನು ದೂರವಿಡಲು ಈ ಆಹಾರಕ್ರಮವನ್ನು ರೂಡಿಸಿಕೊಳ್ಳಿ.
Updated on:Feb 04, 2023 | 10:50 AM

ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಮತ್ತು ಅದರ ತಡೆಗಟ್ಟುವಿಕೆಯನ್ನು ಉತ್ತೇಜಿಸಲು, ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಕ್ಯಾನ್ಸರ್ ಅಪಾಯದಿಂದ ನಿಮ್ಮನ್ನು ದೂರವಿಡಲು ಈ ಆಹಾರಕ್ರಮವನ್ನು ರೂಡಿಸಿಕೊಳ್ಳಿ.

ಈರುಳ್ಳಿ: ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧನೆಗಳು ತಿಳಿಸಿವೆ.

ಟೊಮೆಟೊ: ಟೊಮೆಟೊಗಳು ಕ್ಯಾನ್ಸರ್ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ಹಲವಾರು ಅಧ್ಯಯನಗಳ ಪ್ರಕಾರ, ಟೊಮೆಟೊದಲ್ಲಿರುವ ಲೈಕೋಪೀನ್-ಭರಿತ ಅಂಶ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಅರಿಶಿನ: ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಎಂಬ ಅಂಶವು ಸ್ತನ, ಜಠರಗರುಳಿನ, ಶ್ವಾಸಕೋಶ ಮತ್ತು ಚರ್ಮದ ಕ್ಯಾನ್ಸರ್‌ಗೆ ಕಾರಣವಾದ ಕ್ಯಾನ್ಸರ್ ಕೋಶಗಳನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವಲ್ಲಿ ಸಹಾಯಕವಾಗಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಬೀನ್ಸ್: ಬೀನ್ಸ್ನಂತಹ ಫೈಬರ್ ಭರಿತ ಆಹಾರಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಪ್ರಯೋಗಾಲಯ ಪರೀಕ್ಷೆಗಳ ಪ್ರಕಾರ, ಬೀನ್ಸ್ ಫೀನಾಲಿಕ್ ಆಮ್ಲಗಳು ಮತ್ತು ಆಂಥೋಸಯಾನಿನ್‌ಗಳಂತಹ ಕ್ಯಾನ್ಸರ್-ತಡೆಗಟ್ಟುವ ಅಂಶವನ್ನು ಹೊಂದಿರುತ್ತದೆ.

ವಾಲ್‌ನಟ್ಸ್(ಆಕ್ರೋಟ್): ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಟೋಕೋಫೆರಾಲ್‌ಗಳು, ಜೈವಿಕ ಸಕ್ರಿಯ ಪದಾರ್ಥಗಳು ನಿಮ್ಮ ದೇಹದಲ್ಲಿ ಗೆಡ್ಡೆಗಳು ಬೆಳೆಯದಂತೆ ಸಹಕರಿಸುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ.

ಬ್ರಾಕಲಿ: ಪ್ರಾಸ್ಟೇಟ್, ಕೊಲೊನ್ ಮತ್ತು ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ತಡೆಯುವಲ್ಲಿ ಇದು ಉತ್ತಮ ಆಹಾರವಾಗಿದೆ. ಇದು ದೇಹದ ರಕ್ಷಣಾ ಕಾರ್ಯವಿಧಾನಗಳನ್ನು ಹೆಚ್ಚಿಸುವ ಮತ್ತು ಕ್ಯಾನ್ಸರ್ ಅಪಾಯದಿಂದ ನಿಮ್ಮನ್ನು ದೂರವಿರಿಸುತ್ತದೆ.
Published On - 10:50 am, Sat, 4 February 23

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More



