- Kannada News Photo gallery Yash Looks Like A handsome hunk in His New Photoshoot Ahead of his birthday
ಬರ್ತ್ಡೇಗೂ ಮೊದಲು ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿದ ಯಶ್; ಇಲ್ಲಿವೆ ಚಿತ್ರಗಳು
ನಟ ಯಶ್ ಅವರಿಗೆ ಜನವರಿ 8 ಜನ್ಮದಿನ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಬಾರಿ ಟಾಕ್ಸಿಕ್ ರಿಲೀಸ್ ಇದೆ. ಹೀಗಾಗಿ, ಅವರ ಜನ್ಮದಿನ ಸ್ವಲ್ಪ ಜೋರಾಗಿಯೇ ಇದೆ. ಬರ್ತ್ಡೇಗೂ ಮೊದಲು ಅವರು ಭರ್ಜರಿ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.
Updated on: Jan 07, 2026 | 6:55 AM

ನಟ ಯಶ್ ಅವರಿಗೆ ಜನವರಿ 8 ಜನ್ಮದಿನ. ಹುಟ್ಟುಹಬ್ಬಕ್ಕೂ ಮೊದಲು ಅವರು ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಅವರು ಹ್ಯಾಂಡ್ಸಮ್ ಹಂಕ್ ರೀತಿ ಕಾಣಿಸಿದ್ದಾರೆ. ಅವರ ಈ ಫೋಟೋಗಳಿಗೆ ಮಹಿಳಾ ಅಭಿಮಾನಿಗಳು ಮನಸೋತಿದ್ದಾರೆ.

ಯಶ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ಗಳನ್ನು ಹೆಚ್ಚಿಸಲು ಸೆಲೆಬ್ರಿಟಿಗಳು ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಯಶ್ ಕೂಡ ಇದಕ್ಕೆ ಹೊರತಾಗಿಲ್ಲ.

ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಇದಕ್ಕಾಗಿ ಯಶ್ ಬರ್ತ್ಡೇನ ಫ್ಯಾನ್ಸ್ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಮೆಟ್ರೋದಲ್ಲಿ ಯಶ್ ಅವರ ಫೋಟೋ ಹಾಗೂ ಟಾಕ್ಸಿಕ್ ಸಿನಿಮಾ ಪೋಸ್ಟರ್ ರಾರಾಜಿಸುತ್ತಿದೆ. ಅಭಿಮಾನಿಗಳು ಮೆಟ್ರೋಗೆ ಜಾಹೀರಾತು ನೀಡಿದ್ದಾರೆ.

ಯಶ್ ಅವರು ಸಮಯ ಸಿಕ್ಕಾಗ ಕುಟುಂಬದ ಜೊತೆ ಕಳೆಯಲು ಇಷ್ಟಪಡುತ್ತಾರೆ. ಆದರೆ, ‘ಟಾಕ್ಸಿಕ್’ ಕೆಲಸಗಳು ಹೆಚ್ಚಿರುವುದರಿಂದ ಅವರಿಗೆ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಉತ್ತಮ ರೀತಿಯಲ್ಲಿ ಸಿನಿಮಾ ತರುವ ಪ್ಲ್ಯಾನ್ ಅಲ್ಲಿ ತಂಡ ಇದೆ.

‘ಕೆಜಿಎಫ್ 2’ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ‘ಟಾಕ್ಸಿಕ್’. ಎರಡೂ ಸಿನಿಮಾ ಮಧ್ಯೆ 4 ವರ್ಷಗಳ ಅಂತರ ಇದೆ. ಈ ಚಿತ್ರವನ್ನು ‘ಕೆವಿಎನ್’ ನಿರ್ಮಾಣ ಮಾಡಿದೆ. ಯಶ್ ಅವರು ಕೂಡ ಈ ಚಿತ್ರಕ್ಕೆ ನಿರ್ಮಾಪಕರು. ಕನ್ನಡದ ಜೊತೆ ಇಂಗ್ಲಿಷ್ನಲ್ಲೂ ಸಿನಿಮಾ ಶೂಟ್ ಆಗಿದೆ.




