Updated on: Jun 05, 2023 | 12:07 PM
ಅಂಬರೀಷ್ ಕುಟುಂಬಕ್ಕೆ ಯಶ್ ತುಂಬಾನೇ ಆಪ್ತರು. ಅಂಬರೀಷ್ ಅವರನ್ನು ಕಂಡರೆ ಯಶ್ಗೆ ಅಚ್ಚುಮೆಚ್ಚು. ಈಗ ಅವರು ಅಂಬಿ ಮಗ ಅಭಿಷೇಕ್ ಮದುವೆಗೆ ಆಗಮಿಸಿ ವಿಶ್ ಮಾಡಿದ್ದಾರೆ.
ಅಭಿಷೇಕ್-ಅವಿವಾ ಮದುವೆ ಇಂದು (ಜೂನ್ 5) ನಡೆದಿದೆ. ಈ ವಿವಾಹ ಸಮಾರಂಭಕ್ಕೆ ಯಶ್ ಆಗಮಿಸಿ ನವದಂಪತಿಗೆ ಶುಭ ಕೋರಿದ್ದಾರೆ.
ಯಶ್ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಅವರ ಲುಕ್ ಎಲ್ಲರ ಗಮನ ಸೆಳೆದಿದೆ. ‘ಕೆಜಿಎಫ್ 2’ ಲುಕ್ನ ಹಾಗೆಯೇ ಉಳಿಸಿಕೊಂಡಿದ್ದಾರೆ.
ಕಾಲಿವುಡ್ ನಟ ರಜನಿಕಾಂತ್, ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಈ ಮದುವೆಗೆ ಆಗಮಿಸಿ ಹಾರೈಸಿದ್ದಾರೆ.
ನವ ದಂಪತಿಗೆ ವಿಶ್ ಮಾಡಿದ ಪುನೀತ್ ಪತ್ನಿ ಅಶ್ವಿನಿ
ಬೆಳಿಗ್ಗೆ 9.30 ಸುಮಾರಿಗೆ ಅಭಿಷೇಕ್-ಅವಿವಾ ವಿವಾಹ ನಡೆದಿದೆ. ಸುಮಲತಾ ಅವರು ಮಗನ ಮದುವೆ ಕಣ್ತುಂಬಿಕೊಂಡಿದ್ದಾರೆ.