ಶಾಮನೂರು ಶಿವಶಂಕರಪ್ಪ ನಡೆಯನ್ನ ಖಂಡಿಸಿದ ಎಂಎಲ್ಸಿ ಪ್ರಕಾಶ್ ರಾಥೋಡ್; ಹೇಳಿದ್ದಿಷ್ಟು
‘ಶಾಮನೂರು ಶಿವಶಂಕರಪ್ಪ ಅವರಿಗೆ ಈಗ 92 ವರ್ಷ ವಯಸ್ಸು, ಅವರ ಮುಕ್ಕಾಲು ಪ್ರತಿಶತ ವಯಸ್ಸನ್ನು ಕಾಂಗ್ರೆಸ್ ಮನೆಯಲ್ಲಿಯೇ ಬೆಳೆದಿದ್ದಾರೆ. ಹೀಗಾಗಿ ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಜೀವಾಳ ಎನ್ನುವುದನ್ನ ಶಾಮನೂರು ಅವರಿಗೆ ಯಾರೂ ತಿಳಿ ಹೇಳುವ ಅಗತ್ಯವಿಲ್ಲ ಎಂದು ಎಂಎಲ್ಸಿ ಪ್ರಕಾಶ್ ರಾಥೋಡ್ ಹೇಳಿದರು.

ಬೆಂಗಳೂರು, ಅ.06: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಹೇಳಿಕೆ ವಿಚಾರ‘ ಸಿದ್ದರಾಮಯ್ಯ (Siddaramaiah) ಬೆಂಬಲಿಗ ಎಂಎಲ್ಸಿ ಪ್ರಕಾಶ್ ರಾಥೋಡ್ (Prakash Rathod) ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಹೌದು, ಸಮೀಕ್ಷೆಯೊಂದರ ಪ್ರಕಾರ ಕಾಂಗ್ರೆಸ್ ಪರ ಅತ್ಯಧಿಕ ಅಂದರೆ ಶೇ.88 ರಷ್ಟು ಮತ ಚಲಾಯಿಸಿದವರು ಮುಸ್ಲಿಂರು, ಅದಕ್ಕೆ ಹೊಲಿಸಿದರೆ, ಲಿಂಗಾಯತ ಕಡೆಯಿಂದ ಶೇ.20 ರಷ್ಟು ಮಾತಗಳು ಮಾತ್ರ ಬಂದಿದೆ. ಹೀಗಿದ್ದರೂ ರಾಜ್ಯ ಸಂಪುಟದಲ್ಲಿ 7 ಸ್ಥಾನಗಳನ್ನು ನೀಡಲಾಗಿದೆ. ಆದರೆ, ಮುಸ್ಲಿಂ ಸಮುದಾಯದವರಿಗೆ ಕೇವಲ 2 ಸ್ಥಾನ ಮಾತ್ರ ನೀಡಲಾಗಿದೆ ಎಂದರು.
ಇನ್ನು ಲಂಬಾಣಿ ಸಮುದಾಯ ಶೇ.80ರಷ್ಟು ಮತಗಳನ್ನು ಕಾಂಗ್ರೆಸ್ಗೆ ನೀಡಿದೆ. ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಪ್ರಮುಖ ಪಾತ್ರ ಕೂಡ ವಹಿಸಿದೆ. ಆದರೂ, ಲಂಬಾಣಿ ಸಮುದಾಯದವರಿಗೆ ಸಚಿವ ಸ್ಥಾನವೇ ಸಿಕ್ಕಿಲ್ಲ. ಉಪ್ಪಾರ, ಬಣಜಿಗ, ಯಾದವ ಸಮುದಾಯಕ್ಕೂ ಮಂತ್ರಿಸ್ಥಾನ ನೀಡಿಲ್ಲ. ದಾವಣಗೆರೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಮುಸ್ಲಿಮರ 40% ಮತಗಳು ಇದ್ದು, ಎಲ್ಲ ಕ್ಷೇತ್ರಗಳಲ್ಲಿ ಶೇ.20ರಷ್ಟು SC ಮತ್ತು ST ಮತಗಳಿವೆ. ಜೊತೆಗೆ ಹಿಂದುಳಿದ ವರ್ಗಗಳ ಶೇ.15ರಷ್ಟು ಮತಗಳಿಂದ 6 ಶಾಸಕರು ಗೆದ್ದಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವಂತಹ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ: ಈ ಸಂಬಂಧ ನಾನು ನೀಡಿರುವ ಹೇಳಿಕೆಗೆ ಬದ್ಧ: ಶಾಸಕ ಶಾಮನೂರು
ಹೌದು, 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವಂತಹ ವಾತಾವರಣ ಸೃಷ್ಟಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುತ್ತಿದ್ದಾರೆ. ಈ ಪರಿಶ್ರಮಕ್ಕೆ ಶಾಸಕರು, ನಾಯಕರು ಸಕ್ರಿಯವಾಗಿ ಬೆಂಬಲಿಸಬೇಕು. ಇನ್ನು ಶಾಮನೂರು ಶಿವಶಂಕರಪ್ಪ ಅವರಿಗೆ ಈಗ 92 ವರ್ಷ ವಯಸ್ಸು, ಅವರ ಮುಕ್ಕಾಲು ಪ್ರತಿಶತ ವಯಸ್ಸನ್ನು ಕಾಂಗ್ರೆಸ್ ಮನೆಯಲ್ಲಿಯೇ ಬೆಳೆದಿದ್ದಾರೆ. ಹೀಗಾಗಿ ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಜೀವಾಳ ಎನ್ನುವುದನ್ನ ಶಾಮನೂರು ಅವರಿಗೆ ಯಾರೂ ತಿಳಿ ಹೇಳುವ ಅಗತ್ಯವಿಲ್ಲ ಎಂದು ಮಾಧ್ಯಮ ಪ್ರಕಟಣೆ ಮೂಲಕ ಶಾಮನೂರು ಅವರ ನಡೆಯನ್ನ ಪ್ರಕಾಶ್ ರಾಥೋಡ್ ಖಂಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ