ಬಿಜೆಪಿ-ಕಾಂಗ್ರೆಸ್ ನಡುವೆ ಟ್ವೀಟ್ ವಾರ್: ಟ್ವೀಟ್ ಮೂಲಕ ಪರಸ್ಪರ ಕಾಲೆಳೆದ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಘಟಕ

ಬಿಜೆಪಿ-ಕಾಂಗ್ರೆಸ್ ನಡುವೆ ಟ್ವೀಟ್ ವಾರ್: ಟ್ವೀಟ್ ಮೂಲಕ ಪರಸ್ಪರ ಕಾಲೆಳೆದ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಘಟಕ
ಕಾಂಗ್ರೆಸ್, ಬಿಜೆಪಿ ಪಕ್ಷದ ಚಿಹ್ನೆಗಳು

ಬಿಜೆಪಿ ವಿರುದ್ಧ ಟ್ವಿಟ್ ಮಾಡಿದ ಕಾಂಗ್ರೆಸ್ ಬಿಜೆಪಿಯ ಅಸಲಿ ಹಿಂದೂ ವಿರೋಧಿ ಧೋರಣೆ ಬಯಲಾಗಿದೆ. ರಾಜಕೀಯ ಕುಹಕಗಳಿಗೆ ಹಿಂದೂ ದೇವತೆಗಳನ್ನು ಬಳಸಿಕೊಂಡಿದ್ದಾರೆ. ರಾಜ್ಯದ ಜನರ ಮುಂದೆ ಕಟೀಲು ಮಂಡಿಯೂರಿ ಕ್ಷಮೆ ಕೇಳಬೇಕು.

TV9kannada Web Team

| Edited By: Vivek Biradar

May 26, 2022 | 9:34 AM

ಬೆಂಗಳೂರು: ಬಿಜೆಪಿ-ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಶುರುವಾಗಿದ್ದು, ಎರಡು ರಾಷ್ಟ್ರೀಯ ಪಕ್ಷಗಳು ಪರಸ್ಪರ ಟ್ವೀಟ್ ಮಾಡುವ ಮೂಲಕ ಕಾಲೆಳೆಯುತ್ತಿವೆ. ಬಿಜೆಪಿ (BJP) ವಿರುದ್ಧ ಟ್ವಿಟ್ ಮಾಡಿದ ಕಾಂಗ್ರೆಸ್ (Congress) ಬಿಜೆಪಿಯ ಅಸಲಿ ಹಿಂದೂ ವಿರೋಧಿ ಧೋರಣೆ ಬಯಲಾಗಿದೆ. ರಾಜಕೀಯ ಕುಹಕಗಳಿಗೆ ಹಿಂದೂ ದೇವತೆಗಳನ್ನು ಬಳಸಿಕೊಂಡಿದ್ದಾರೆ. ರಾಜ್ಯದ ಜನರ ಮುಂದೆ ಕಟೀಲು ಮಂಡಿಯೂರಿ ಕ್ಷಮೆ ಕೇಳಬೇಕು. ಧಾರ್ಮಿಕತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಲ್ಲದೆ, ದೇವತೆಗಳ ಹೆಸರಲ್ಲಿ ಕೀಳು ಟೀಕೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ರಾಜ್ಯ ಕಾಂಗ್ರೆಸ್ ಹಿಂದೂ ವಿರೋಧಿ ಬಿಜೆಪಿ ಎಂದು ಟ್ವೀಟ್​ ಮಾಡಿದೆ.

ವಿಧಾನಪರಿಷತ್ ಟಿಕೆಟ್’ ಕದನ ಬಿಜೆಪಿಯನ್ನು ಸುಡುತ್ತಿದೆ. ಇದು ಬಿ.ಎಸ್. ಯಡಿಯೂರಪ್ಪ (B.S Yadiyurappa) ಅರನ್ನು ಮೂಲೆಗೆ ಎತ್ತಿ ಬಿಸಾಡುವ ತಂತ್ರಗಾರಿಕೆ ಭಾಗವಾಗಿದೆ. ಭಾರತೀಯ ಜನತಾ ಪಕ್ಷದ್ದು ಮಹಿಳಾ ಮನ್ನಣೆ ಅಲ್ಲ . ಬಿ.ಎಸ್​.ಯಡಿಯೂರಪ್ಪ ಮುಕ್ತ ಬಿಜೆಪಿಯ ಚಿತಾವಣೆ ಅಷ್ಟೇ. ರಾಜ್ಯ ಬಿಜೆಪಿ ‘ಜೀ’ ಹುಜೂರ್ ಎನ್ನುತ್ತಿದೆ . ಬಿ.ಎಸ್.ಯಡಿಯೂರಪ್ಪನವರನ್ನು ‘ದುರಂತ ನಾಯಕ’ನನ್ನಾಗಿಸಿದೆ. ಟ್ವೀಟ್ ಮೂಲಕ ಕರ್ನಾಟಕ ಕಾಂಗ್ರೆಸ್ ಘಟಕ ಬಿಜೆಪಿ ಕಾಲೆಳೆದಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ IKEA ಕಂಪನಿ ಮಳಿಗೆ ತೆರೆಯಲಿದೆ; ಟ್ವೀಟ್ ಮೂಲಕ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ರಾಜ್ಯ ಬಿಜೆಪಿ ಘಟಕ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದ ಹೇಮಲತಾ ನಾಯಕ್ ಅವರನ್ನು ಬಿಜೆಪಿ ಗುರುತಿಸಿದೆ. ತಳಮಟ್ಟದ ಕಾರ್ಯಕರ್ತರನ್ನು ನಮ್ಮ ಪಕ್ಷ ಮುಂಚೂಣಿಯಲ್ಲಿ ನಿಲ್ಲಿಸಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು ನಮಗೆ ಕೇವಲ ಬಾಯಿಮಾತಿನ ಘೋಷಣೆಯಲ್ಲ. ಡಿಕೆಶಿ (DK Shivakumar) ಬಣಕ್ಕೆ ಮಹಿಳಾ ಸಬಲೀಕರಣ ಅಂದರೆ ಬೆಳಗಾವಿಯ ಬೇನಾಮಿ ಅಧ್ಯಕ್ಷೆ ಮಾತ್ರ. ಮಾನ್ಯ ಡಿ.ಕೆ. ಶಿವಕುಮಾರ ಅವರೇ, ಲಕ್ಷ್ಮೀ ಜಪ ಮಾಡುವುದೇ ಮಹಿಳಾ ಸಬಲೀಕರಣವೇ? ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ಬೆಲೆಯೇ ಇಲ್ಲ. ಇವರಿಗೆ ಮಹಿಳೆಯರು ನೆನಪಾಗುವುದು, ಚುನಾವಣೆಯ ಸಂದರ್ಭದಲ್ಲಿ ಅಥವಾ ಪ್ರತಿಭಟನೆ ಮಾಡುವಾಗ ಮಾತ್ರ. ಕಾರ್ಯಾಧ್ಯಕ್ಷರಲ್ಲೂ ಮಹಿಳೆಯರಿಗೆ ಸ್ಥಾನವಿಲ್ಲ, ಪರಿಷತ್‌ ಚುನಾವಣೆಗೂ ಮಹಿಳಾ ಅಭ್ಯರ್ಥಿ ಇಲ್ಲ. ಮಹಿಳಾ ಸಬಲೀಕರಣ ಬರೇ ಬೂಟಾಟಿಕೆಯೇ?

ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿ ಸಹನೆಗೆ ಸೀತೆ, ವಿದ್ಯೆಗೆ ಸರಸ್ವತಿ, ಎಂದು ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವ. ಇದು ಮಹಿಳಾ ಸಬಲೀಕರಣ ವಿಚಾರಕ್ಕೆ ಕಾಂಗ್ರೆಸ್‌ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು? ಉತ್ತರಪ್ರದೇಶ – ಮೈ ಲಡ್ಕಿ ಹೂ, ಮೈ ಲಡ್ ಸಕ್ತಿ ಹೂ ಕರ್ನಾಟಕ – ನಾ ನಾಯಕಿ ಮಹಿಳಾ ಸಬಲೀಕರಣ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಒಬ್ಬ ಮಹಿಳಾ ಅಭ್ಯರ್ಥಿಯನ್ನೂ ಪರಿಷತ್ತಿಗೆ ಆಯ್ಕೆ ಮಾಡಿಲ್ಲ. ಮಹಿಳಾ ಸಬಲೀಕರಣ ಬರೇ ಭಾಷಣಕ್ಕೆ ಸೀಮಿತವೇ ಎಂದು ಟ್ವೀಟ್ ಮಾಡಿದೆ.

ಇದನ್ನು ಓದಿ: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರಜತ್ ಪಟಿದಾರ್: ಏನು ಹೇಳಿದ್ರು ಕೇಳಿ

ಇನ್ನು ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಮತ್ತಷ್ಟು ಜನರು ಬಂದು ಸೇರಲಿದ್ದಾರೆ ಎಂದೆನ್ನುವ ನಾಯಕರೇ ಮೊದಲು ನಿಮ್ಮ ಬಾಗಿಲು ಮುಚ್ಚಿಕೊಳ್ಳಿ. ಬರುವುದಿರಲಿ, ಹೋಗುವವರ ಸಂಖ್ಯೆಯನ್ನೇ ನಿಮ್ಮಿಂದ ತಡೆಯಲು ಸಾಧ್ಯವಾಗುತ್ತಿಲ್ಲ. ಅಂದು Quit India ಇಂದು Quit CONgress ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲಿಯವರೆಗೂ ನಕಲಿ ಗಾಂಧಿ ಕುಟುಂಬದ ಪಾದ ಪೂಜೆ ನಡೆಯುತ್ತದೆಯೋ ಅಲ್ಲಿಯವರೆಗೆ ಇದೆಲ್ಲಾ ಸಾಮಾನ್ಯ ಎಂದು ಕಾಲೆಳದಿದ್ದಾರೆ.

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada