ಜಗ ಸೋಜಿಗ! ಗರ್ಭವತಿಯಾದ ಹದಿನೆಂಟರ ಹುಡುಗ..

ಬಾಸ್ಟನ್: ನಮ್ಮ ಸುತ್ತಮುತ್ತಲೂ ದಿನಕ್ಕೊಂದಾದರೂ ಹೊಸ ಘಟನೆ ಘಟಿಸುತ್ತಲೇ ಇರುತ್ತೆ. ವೈದ್ಯ ಲೋಕ, ವಿಜ್ಞಾನ ಲೋಕದಲ್ಲಿ ಎಷ್ಟೇ ಸಂಶೋಧನೆಗಳು ನಡೆಯುತ್ತಿದ್ದರೂ ಅಚ್ಚರಿಗಳಿಗೆ ಕೊನೆಯಿಲ್ಲ. ಈಗ ಇಂತಹದ್ದೇ ಒಂದು ಪ್ರಕರಣ ಅಮೆರಿಕಾದ ಬಾಸ್ಟನ್ ನಗರದಲ್ಲಿ ನಡೆದಿದೆ. ಹುಡುಗನಾಗಿ ಹುಟ್ಟಿ, ಹುಡುಗನಾಗಿಯೇ ಬೆಳೆದವನೊಬ್ಬ ತನ್ನ 18ನೇ ವಯಸ್ಸಿನಲ್ಲಿ ಗರ್ಭ ಧರಿಸಿ ಅಚ್ಚರಿಗೆ ಕಾರಣನಾಗಿದ್ದಾನೆ. ಬಾಸ್ಟನ್ ನಗರದ ಮೈಕೀ ಶನಲ್ ಎಂಬಾತನೇ ಗರ್ಭ ಧರಿಸಿದ ಯುವಕ. ಆತನಿಗೆ ಪುರುಷ ಜನನಾಂಗ ಹಾಗೂ ಪುರುಷರ ಎಲ್ಲಾ ಬಾಹ್ಯ ಗುಣಗಳೂ ಇದ್ದವು. ಆದರೆ, ಇತ್ತೀಚೆಗೆ […]

ಜಗ ಸೋಜಿಗ! ಗರ್ಭವತಿಯಾದ ಹದಿನೆಂಟರ ಹುಡುಗ..
Follow us
ಸಾಧು ಶ್ರೀನಾಥ್​
|

Updated on: Nov 18, 2020 | 3:07 PM

ಬಾಸ್ಟನ್: ನಮ್ಮ ಸುತ್ತಮುತ್ತಲೂ ದಿನಕ್ಕೊಂದಾದರೂ ಹೊಸ ಘಟನೆ ಘಟಿಸುತ್ತಲೇ ಇರುತ್ತೆ. ವೈದ್ಯ ಲೋಕ, ವಿಜ್ಞಾನ ಲೋಕದಲ್ಲಿ ಎಷ್ಟೇ ಸಂಶೋಧನೆಗಳು ನಡೆಯುತ್ತಿದ್ದರೂ ಅಚ್ಚರಿಗಳಿಗೆ ಕೊನೆಯಿಲ್ಲ. ಈಗ ಇಂತಹದ್ದೇ ಒಂದು ಪ್ರಕರಣ ಅಮೆರಿಕಾದ ಬಾಸ್ಟನ್ ನಗರದಲ್ಲಿ ನಡೆದಿದೆ.

ಹುಡುಗನಾಗಿ ಹುಟ್ಟಿ, ಹುಡುಗನಾಗಿಯೇ ಬೆಳೆದವನೊಬ್ಬ ತನ್ನ 18ನೇ ವಯಸ್ಸಿನಲ್ಲಿ ಗರ್ಭ ಧರಿಸಿ ಅಚ್ಚರಿಗೆ ಕಾರಣನಾಗಿದ್ದಾನೆ. ಬಾಸ್ಟನ್ ನಗರದ ಮೈಕೀ ಶನಲ್ ಎಂಬಾತನೇ ಗರ್ಭ ಧರಿಸಿದ ಯುವಕ. ಆತನಿಗೆ ಪುರುಷ ಜನನಾಂಗ ಹಾಗೂ ಪುರುಷರ ಎಲ್ಲಾ ಬಾಹ್ಯ ಗುಣಗಳೂ ಇದ್ದವು. ಆದರೆ, ಇತ್ತೀಚೆಗೆ ವೈದ್ಯರ ಬಳಿ ಟೆಸ್ಟ್ ಮಾಡಿಸುವಾಗ ಸ್ಕ್ಯಾನಿಂಗ್ ವೇಳೆ ಆತನಲ್ಲಿ ಗರ್ಭಕೋಶ ಪತ್ತೆಯಾಗಿದ್ದು ಆತನಲ್ಲಿ ಗರ್ಭ ಧರಿಸುವ ಸಾಮರ್ಥ್ಯವೂ ಇರುವುದಾಗಿ ವೈದ್ಯರು ತಿಳಿಸಿದ್ದಾರೆ.

ವೈದ್ಯರ ಮಾತನ್ನು ಮೈಕೀ ಶನೆಲ್ ಆರಂಭದಲ್ಲಿ ತಮಾಷೆಯಾಗಿ ಪರಿಗಣಿಸಿದ್ದನಂತೆ. ಆದರೆ, ವೈದ್ಯರು ಆತನಿಗೆ ಸಾಕ್ಷ್ಯ ಸಮೇತ ಮಾಹಿತಿ ನೀಡಿದಾಗ ಆತನಿಗೂ ಶಾಕ್​ ಆಗಿದೆ. ಇದೊಂದು ವಿರಳ ಪ್ರಕರಣ. ಬೇಡವೆಂದರೆ ಗರ್ಭಕೋಶವನ್ನು ತೆಗೆದು ಹಾಕಬಹುದು ಎಂದು ವೈದ್ಯರು ತಿಳಿಸಿದಾಗ ಆತ ಅದನ್ನು ನಿರಾಕರಿಸಿ ಕೃತಕ ಗರ್ಭಧಾರಣೆ ಮಾಡಿಸಿಕೊಂಡಿದ್ದಾನೆ!

ಬಾಲ್ಯದಿಂದಲೂ ತನಗೆ ಮಹಿಳೆಯಂತೆ ವರ್ತಿಸುವ ಆಸೆಯಾಗುತ್ತಿತ್ತು. ಅಮ್ಮನ ಲಿಪ್​ಸ್ಟಿಕ್​ ಹಚ್ಚಿಕೊಂಡು ಸುಮ್ಮನೇ ಖುಷಿಪಡುತ್ತಿದ್ದೆ. ಆದರೆ, ನನಗೆ ನನ್ನ ಕುರಿತು ಏನನ್ನೂ ಅರ್ಥ ಮಾಡಿಕೊಳ್ಳಲು ಆಗಿರಲಿಲ್ಲ. 13ನೇ ವರ್ಷದಲ್ಲಿ ನಾನು ಸಲಿಂಗಿಯಾಗಿ ಪರಿವರ್ತಿತನಾದೆ. ಆದರೂ ನನ್ನ ಒಳಮನಸ್ಸು ನನ್ನನ್ನು ಹೆಣ್ಣೆಂದೇ ಪರಿಗಣಿಸಿತ್ತು. ಟೆಸ್ಟ್ ಮಾಡಿ ಗರ್ಭಕೋಶ ಇದೆಯೆಂದು ವೈದ್ಯರು ತಿಳಿಸಿದಾಗ ನಂಬುವುದೇ ಅಸಾಧ್ಯವಾಗಿತ್ತು ಎಂದಿದ್ದಾನೆ.

ಅಲ್ಲದೇ, ಕೃತಕ ಗರ್ಭಧಾರಣೆ ಮಾಡಿದರೂ ಗರ್ಭ ಧರಿಸುವ ಸಾಧ್ಯತೆ ಕಡಿಮೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಆದರೆ ಇದೀಗ ನಾನು ಗರ್ಭಿಣಿಯಾಗುವ ಮೂಲಕ ಹೆಣ್ತನವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿರುವ ಆತ, ತಾನು ಮಗು ಹೆರುವ ಮೂಲಕ ಎಲ್ಜಿಬಿಟಿ ಸಮುದಾಯದ ಮನೋಬಲ ಹೆಚ್ಚಿದರೆ ಅದಕ್ಕಿಂತಲೂ ದೊಡ್ಡ ಖುಷಿ ಇಲ್ಲ ಎಂದು ತಿಳಿಸಿದ್ದಾನೆ.

ವೈದ್ಯಕೀಯ ಭಾಷೆಯಲ್ಲಿ ಈ ಸಮಸ್ಯೆಯನ್ನು ಪರ್ಸಿಸ್ಟೆಂಟ್ ಮುಲೇರಿಯನ್ ಡಕ್ಟ್ ಸಿಂಡ್ರೋಮ್ (ಪಿಎಂಡಿಸಿ) ಎಂದು ಕರೆಯಲಾಗುತ್ತಿದ್ದು ಬೆರಳೆಣಿಕೆ ಸಂಖ್ಯೆಯಲ್ಲಿ ಈ ಪ್ರಕರಣಗಳು ಕಂಡುಬರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.