ಮುಖದಲ್ಲಿ ನೆರಿಗೆ, ಗೆರೆಗಳು ಮೂಡುತ್ತಿವೆಯಾ? ಚಿಂತೆ ಹೆಚ್ಚಾಯ್ತಾ? ಹಾಗಾದ್ರೆ ಈ ಎಣ್ಣೆ ಬಳಸಿ ನೋಡಿ
ನಿಮ್ಮ ಮುಖದಲ್ಲಿ ಕೂಡ ನೆರಿಗೆ ಹಾಗೂ ಗೆರೆಗಳು ಮೂಡುತ್ತಿದೆಯಾ? ಚರ್ಮಕ್ಕೆ ಪೋಷಣೆ ನೀಡಲು ತೆಂಗಿನ ಎಣ್ಣೆಯು ಅದ್ಭುತವಾದ ಸಾಮಗ್ರಿ ಎಂದು ಪರಿಗಣಿಸಲಾಗಿದೆ ಮತ್ತು ಇದು ನೆರಿಗೆ ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆಯು ಚರ್ಮವನ್ನು ಮೊಶ್ಚಿರೈಸ್ ಆಗಿ ಇಡುತ್ತದೆ ಮತ್ತು ಇದು ಚರ್ಮವನ್ನು ತೇವಾಂಶದಿಂದ ಇಟ್ಟು ನಯ ಹಾಗೂ ಸುಂದರವಾಗಿಸುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ನೆರಿಗೆ ಹಾಗೂ ಗೆರೆಗಳ ನಿವಾರಣೆ ಮಾಡಿ, ಚರ್ಮಕ್ಕೆ ಪುನಃಶ್ಚೇತನ ನೀಡುವುದು. ಇದು ಚರ್ಮದಲ್ಲಿನ ಕಾಲಜನ್ […]
ನಿಮ್ಮ ಮುಖದಲ್ಲಿ ಕೂಡ ನೆರಿಗೆ ಹಾಗೂ ಗೆರೆಗಳು ಮೂಡುತ್ತಿದೆಯಾ? ಚರ್ಮಕ್ಕೆ ಪೋಷಣೆ ನೀಡಲು ತೆಂಗಿನ ಎಣ್ಣೆಯು ಅದ್ಭುತವಾದ ಸಾಮಗ್ರಿ ಎಂದು ಪರಿಗಣಿಸಲಾಗಿದೆ ಮತ್ತು ಇದು ನೆರಿಗೆ ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆಯು ಚರ್ಮವನ್ನು ಮೊಶ್ಚಿರೈಸ್ ಆಗಿ ಇಡುತ್ತದೆ ಮತ್ತು ಇದು ಚರ್ಮವನ್ನು ತೇವಾಂಶದಿಂದ ಇಟ್ಟು ನಯ ಹಾಗೂ ಸುಂದರವಾಗಿಸುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ನೆರಿಗೆ ಹಾಗೂ ಗೆರೆಗಳ ನಿವಾರಣೆ ಮಾಡಿ, ಚರ್ಮಕ್ಕೆ ಪುನಃಶ್ಚೇತನ ನೀಡುವುದು. ಇದು ಚರ್ಮದಲ್ಲಿನ ಕಾಲಜನ್ ಉತ್ಪತ್ತಿ ಹೆಚ್ಚಿಸುವುದು ಮತ್ತು ಚರ್ಮವು ಯೌವನಯುತ ಹಾಗೂ ಬಿಗಿಯಾಗಿಸುವುದು.
ತೆಂಗಿನ ಎಣ್ಣೆಯ ಜೊತೆಗೆ ಅರಿಶಿನ ಬೆರೆಸಿ. ಚರ್ಮಕ್ಕೆ ಶಮನ ನೀಡಲು ಒಂದು ಪರಿಣಾಮಕಾರಿ ಸಾಮಗ್ರಿಯಾಗಿರುವುದು. ಅರಶಿನವು ಚರ್ಮದಲ್ಲಿ ಕಾಲಜನ್ ಉತ್ಪತ್ತಿಗೆ ನೆರವಾಗುವುದು. ಇದರಿಂದ ಚರ್ಮದ ಸ್ಥಿತಿಸ್ಥಾಪಕತ್ವ ಉತ್ತಮವಾಗುವುದು ಮತ್ತು ಅದು ಬಿಗಿಯಾಗುವುದು. ಇದರಿಂದ ನೆರಿಗೆ ನಿವಾರಣೆ ಮಾಡಲು ನೆರವಾಗುವುದು. ಬೇಕಾಗುವ ಸಾಮಗ್ರಿಗಳೆಂದರೆ 1 ಚಮಚ ತೆಂಗಿನ ಎಣ್ಣೆ ಒಂದು ಚಿಟಿಕೆ ಅರಶಿನ. ತೆಂಗಿನ ಎಣ್ಣೆಯನ್ನು ಪಿಂಗಾಣಿಗೆ ಹಾಕಿ. ಇದಕ್ಕೆ ಅರಿಶಿನ ಹಾಕಿ ಮತ್ತು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಡಿ. ಇದನ್ನು ಬಳಿಕ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಈ ಮನೆಮದ್ದನ್ನು ಪ್ರತಿನಿತ್ಯ ಬಳಸಿ.
ಚರ್ಮಕ್ಕೆ ಮೊಯಿಶ್ಚರೈಸರ್ ನೀಡುವಂತಹ ಜೇನುತುಪ್ಪದಲ್ಲಿ ಆ್ಯಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಚರ್ಮದ ರಕ್ಷಣೆ, ಶಮನ ಮತ್ತು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು ಮತ್ತು ನೆರಿಗೆ ಮೂಡುವುದನ್ನು ತಡೆಯುವುದು. ಇದಕ್ಕೆ ಬೇಕಾಗುವ ಸಾಮಗ್ರಿಗಳೆಂದರೆ 1 ಚಮಚ ಸಾವಯವ ತೆಂಗಿನ ಎಣ್ಣೆ ½ ಚಮಚ ಜೇನುತುಪ್ಪ. ಬಳಸುವ ವಿಧಾನ ಪಿಂಗಾಣಿಗೆ ತೆಂಗಿನ ಎಣ್ಣೆ ಹಾಕಿ. ಇದಕ್ಕೆ ಜೇನುತುಪ್ಪ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ತೊಳೆಯಿರಿ.
ಆ್ಯಂಟಿಆಕ್ಸಿಡೆಂಡ್ ಸಮೃದ್ಧವಾಗಿರುವ ವಿಟಮಿನ್ ಇ ಚರ್ಮದ ರಕ್ಷಣೆ ಮತ್ತು ಪೋಷಣೆ ಮಾಡುವುದು. ಇದರಿಂದ ಆರೋಗ್ಯಕಾರಿ, ನಯ ಹಾಗೂ ಯೌವನಯುತ ಚರ್ಮವು ನಿಮ್ಮದಾಗುವುದು. ಇಲ್ಲಿ ಬೇಕಾಗುವ ಸಾಮಗ್ರಿಗಳೆಂದರೆ 1 ಚಮಚ ತೆಂಗಿನ ಎಣ್ಣೆ 1 ವಿಟಮಿನ್ ಇ ಕ್ಯಾಪ್ಸೂಲ್. ಮಾಡುವ ವಿಧಾನ ಹೀಗಿದೆ. ತೆಂಗಿನ ಎಣ್ಣೆಯನ್ನು ಪಿಂಗಾಣಿಗೆ ಹಾಕಿ. ವಿಟಮಿನ್ ಇ ಕ್ಯಾಪ್ಸೂಲ್ ನ್ನು ತುಂಡು ಮಾಡಿ ಅದನ್ನು ಪಿಂಗಾಣಿಗೆ ಹಾಕಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಮುಖ ತೊಳೆದು ಸರಿಯಾಗಿ ಒರೆಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ನಿಧಾನವಾಗಿ ಮುಖಕ್ಕೆ ಕೆಲವು ನಿಮಿಷ ಕಾಲ ಮಸಾಜ್ ಮಾಡಿ. ಒಂದು ಗಂಟೆ ಕಾಲ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ನೀವು ಎರಡು ದಿನಕ್ಕೊಮ್ಮೆ ಈ ವಿಧಾನವನ್ನು ಬಳಸಿಕೊಳ್ಳಿ.
ಹರಳೆಣ್ಣೆಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣವು ಚರ್ಮವನ್ನು ರಕ್ಷಿಸುವುದು ಮತ್ತು ಶಮನಗೊಳಿಸುವುದು. ಚರ್ಮವು ತೇವಾಂಶದಿಂದ ಇರುವಂತೆ ಮಾಡುವುದು ಮತ್ತು ನೆರಿಗೆ ಮೂಡುವುದನ್ನು ಇದು ಕಡಿಮೆ ಮಾಡುವುದು. ಈ ಮನೆಮದ್ದಿಗೆ ಬೇಕಾಗುವ ಸಾಮಗ್ರಿಗಳೆಂದರೆ 1ಚಮಚ ತೆಂಗಿನ ಎಣ್ಣೆ, 1ಚಮಚ ಹರಳೆಣ್ಣೆ. ವಿಧಾನ, ಪಿಂಗಾಣಿಯಲ್ಲಿ ಎರಡನ್ನು ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಮುಖಕ್ಕೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ. ಬೆಳಗ್ಗೆ ಎದ್ದ ಬಳಿಕ ತೊಳೆಯಿರಿ. ನೆರಿಗೆ ನಿವಾರಣೆ ಮಾಡಲು ಇದನ್ನು ದಿನನಿತ್ಯ ಬಳಸಿ.
ವಿನೇಗರ್ ಆ್ಯಪಲ್ ಸೀಡರ್ ವಿನೇಗರ್ ಚರ್ಮವನ್ನು ಸಂಕುಚಿತಗೊಳಿಸುವುದು ಮತ್ತು ಚರ್ಮಕ್ಕೆ ಪೋಷಣೆ ನೀಡಿ, ಶುದ್ಧ ಮಾಡುವುದು. ಇದನ್ನು ತೆಂಗಿನ ಎಣ್ಣೆ ಜತೆ ಸೇರಿಸಿದರೆ ಮತ್ತಷ್ಟು ಪರಿಣಾಮಕಾರಿ. ಈ ಮನೆಮದ್ದಿಗೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಇಲ್ಲಿದೆ. 6 ರಿಂದ 7 ಹನಿ ತೆಂಗಿನ ಎಣ್ಣೆ, 1 ಚಮಚ ಆ್ಯಪಲ್ ಸೀಡರ್ ವಿನೇಗರ್, 1 ಚಮಚ ನೀರು. ವಿಧಾನ, ನೀರು ಹಾಕಿಕೊಂಡು ಆ್ಯಪಲ್ ಸೀಡರ್ ವಿನೇಗರ್ ನ್ನು ಕಲಸಿಕೊಳ್ಳಿ. ಹತ್ತಿ ಉಂಡೆ ಬಳಸಿಕೊಂಡು ಆ್ಯಪಲ್ ಸೀಡರ್ ವಿನೇಗರ್ ನ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಒಣಗುವ ತನಕ ಹಾಗೆ ಬಿಡಿ. ಕೆಲವು ನಿಮಿಷಗಳ ಕಾಲ ನೀವು ತೆಂಗಿನ ಎಣ್ಣೆ ಬಳಸಿಕೊಂಡು ಮುಖಕ್ಕೆ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೆ ಬಿಡಿ. ಬೆಳಗ್ಗೆ ನೀವು ಇದನ್ನು ತೊಳೆಯಿರಿ. ಈ ವಿಧಾನವನ್ನು ನೀವು ಪ್ರತಿನಿತ್ಯ ಬಳಸಿಕೊಂಡು ಸುಧಾರಣೆ ಕಾಣಬಹುದು.
ಹಾಲಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದ ನೋಟವನ್ನು ಉತ್ತಮಪಡಿಸುವುದು ಮತ್ತು ನೆರಿಗೆ ಹಾಗೂ ಗೆರೆಗಳಂತಹ ಚಿಹ್ನೆಗಳನ್ನು ಇದು ಕಡಿಮೆ ಮಾಡುವುದು. ಲಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಇದು ಶ್ರೇಷ್ಠ ಆ್ಯಂಟಿಆಕ್ಸಿಡೆಂಟ್ ಆಗಿದೆ ಮತ್ತು ಕಾಲಜನ್ ಉತ್ಪತ್ತಿಗೆ ಇದು ನೆರವಾಗುವುದು ಮತ್ತು ನೆರಿಗೆ ನಿವಾರಣೆ ಮಾಡುವುದು. ಈ ಮನೆಮದ್ದಿಗೆ ಬೇಕಾಗುವ ಸಾಮಗ್ರಿಗಳೆಂದರೆ 1 ಚಮಚ ತೆಂಗಿನ ಎಣ್ಣೆ, 1 ಚಮಚ ಹಸಿ ಹಾಲು, ಕೆಲವು ಹನಿ ಲಿಂಬೆ ರಸ . ಇದನ್ನು ತಯಾರಿಸುವ ವಿಧಾನ ಹೀಗಿದೆ.. ಪಿಂಗಾಣಿಗೆ ಹಾಲು ಹಾಕಿ. ಇದಕ್ಕೆ ಲಿಂಬೆರಸ ಹಾಕಿ ಮತ್ತು ಅದನ್ನು ತಿರುಗಿಸುತ್ತಾ ಇರಿ ಮತ್ತು ಹಾಲು ದಪ್ಪಗಾಗಲಿ. ಇದಕ್ಕೆ ಈಗ ತೆಂಗಿನ ಎಣ್ಣೆ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. 15 ನಿಮಿಷ ಹಾಗೆ ಬಿಡಿ.
Published On - 3:34 pm, Fri, 11 October 19