How to link Aadhaar to PAN card: ಆಧಾರ್ ಜತೆಗೆ ಪ್ಯಾನ್ ಕಾರ್ಡ್ ಜೋಡಣೆ ಹೇಗೆ?
ಪ್ಯಾನ್- ಆಧಾರ್ ಕಾರ್ಡ್ ಜೋಡಣೆಗೆ ಮಾರ್ಚ್ 31, 2021 ಕೊನೆ ದಿನ. ಅಷ್ಟರ ತನಕ ಕಾಯದೆ ಆದಷ್ಟು ಶೀಘ್ರದಲ್ಲಿ ಜೋಡಣೆ ಮಾಡುವುದು ಉತ್ತಮ. ಆಧಾರ್ ಕಾರ್ಡ್- ಪ್ಯಾನ್ ಕಾರ್ಡ್ ಜೋಡಣೆ ಹೇಗೆ ಎಂಬ ವಿವರಣೆ ಇಲ್ಲಿದೆ.
ಪ್ಯಾನ್- ಆಧಾರ್ ಕಾರ್ಡ್ ಜೋಡಣೆಗೆ ಗಡುವು ಸಮೀಪಿಸುತ್ತಿದೆ. ಕೊನೆ ಕ್ಷಣದ ತನಕ ಕಾಯದೆ ಆದಷ್ಟು ಬೇಗ ಇದನ್ನು ಮಾಡಿ ಮುಗಿಸುವುದು ಉತ್ತಮ. ಆಧಾರ್- ಪ್ಯಾನ್ ಕಾರ್ಡ್ ಜೋಡಣೆಗೆ ಮಾರ್ಚ್ 31, 2021 ಕೊನೆ ದಿನ. ಒಂದು ವೇಳೆ ನೀವಿನ್ನೂ ಈ ಜವಾಬ್ದಾರಿಯನ್ನು ಮುಗಿಸಿಲ್ಲ ಎಂದಾದರೆ, ಇಲ್ಲಿ ನೀಡಿರುವ ವಿವಿಧ ಹಂತಗಳನ್ನು ಅನುಸರಿಸಿ, ಪೂರ್ಣಗೊಳಿಸಿ.
1. ಮೊದಲಿಗೆ ಆದಾಯ ತೆರಿಗೆಯ ಇ- ಫೈಲಿಂಗ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. 2. ಲಾಗ್ ಇನ್ ಐಡಿ, ಪಾಸ್ವರ್ಡ್ ಹಾಗೂ ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್ ಪೋರ್ಟಲ್ಗೆ ಲಾಗ್ಇನ್ ಆಗಬೇಕು. 3. ಮಾಹಿತಿಯನ್ನು ಭರ್ತಿ ಮಾಡಿದ ಮೇಲೆ ಕೋಡ್ ಸಹ ನಮೂದಿಸಬೇಕು. 4. ವೆಬ್ಸೈಟ್ನಲ್ಲಿ ಲಾಗ್ಇನ್ ಆದ ಮೇಲೆ ಒಂದು ವಿಂಡೋ ತೆರೆದುಕೊಳ್ಳುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜತೆಗೆ ಜೋಡಣೆ ಮಾಡುವಂತೆ ಸಂದೇಶ ತೋರಿಸುತ್ತದೆ. 5. ಒಂದು ವೇಳೆ ತೋರಿಸದಿದ್ದಲ್ಲಿ ಪ್ರೊಫೈಲ್ ಸೆಟ್ಟಿಂಗ್ಗೆ ತೆರಳಿ Link Adhaar ಎಂಬ ಬಟನ್ ಆಯ್ಕೆ ಮಾಡಿಕೊಳ್ಳಬೇಕು. 6. ಹೆಸರು, ಜನ್ಮ ದಿನಾಂಕ ಮತ್ತು ಲಿಂಗ ಮೊದಲಾದ ಮಾಹಿತಿಯನ್ನು ನಮೂದಿಸಬೇಕು. ಇ-ಫೈಲಿಂಗ್ ಪೋರ್ಟಲ್ನಲ್ಲಿ ನೋಂದಣಿ ವೇಳೆ ಭರ್ತಿ ಮಾಡಿದ್ದ ಮಾಹಿತಿ ಸರಿಯಾಗಿರಬೇಕು. 7. ಆಧಾರ್ ಕಾರ್ಡ್ನಲ್ಲಿ ಇರುವ ಮಾಹಿತಿಯು ತೆರೆ (ಸ್ಕ್ರೀನ್) ಮೇಲೆ ತೋರಿಸುತ್ತಿರುವುದರ ಜತೆಗೆ ತಾಳೆಯಾಗುತ್ತಿದೆಯಾ ಎಂದು ದೃಢೀಕರಿಸಿಕೊಳ್ಳಬೇಕು. 8. ಮಾಹಿತಿ ಹೊಂದಾಣಿಕೆ ಆಗುತ್ತಿದ್ದಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, link now (ಲಿಂಕ್ ನೌ) ಬಟನ್ ಮೇಲೆ ಕ್ಲಿಕ್ ಮಾಡಬೇಕು. 9. ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಯಶಸ್ವಿಯಾಗಿ ಜೋಡಣೆ ಆಗಿದೆ ಎಂಬ ಸಂದೇಶ ಬರುತ್ತದೆ.
ಇದನ್ನೂ ಓದಿ: Income Tax Return: ಆದಾಯ ತೆರಿಗೆ ಸಂಬಂಧಿತ ಈ 5 ಜವಾಬ್ದಾರಿಗಳನ್ನು ಮುಗಿಸಲು ಮಾರ್ಚ್ 31 ಗಡುವು