ಸಂಶೋಧನೆಗಾಗಿ.. ದಿನಾ 5 ಸಾವಿರ ಸೊಳ್ಳೆಗಳಿಂದ ಕಚ್ಚಿಸಿಕೊಳ್ತಾನೆ ಈ ವಿಜ್ಞಾನಿ!
ದಿನವೆಲ್ಲಾ ದುಡಿದು ಸುಸ್ತಾಗಿ ಮನೆಗೆ ಬಂದ ಮೇಲೆ ಹಾಯಾಗಿ ಮಲಗಬೇಕೆಂದು ಬಯಸೋ ಪ್ರತಿಯೊಬ್ಬ ವ್ಯಕ್ತಿಯ ಪರಮ ವೈರಿ ಅಂದ್ರೆ ಅದು ಸೊಳ್ಳೆ. ನೆಮ್ಮದಿಯಾಗಿ ನಿದ್ದೆ ಮಾಡೋಣ ಅಂತಾ ದಿಂಬಿನ ಮೇಲೆ ತಲೆ ಇಟ್ಟರೇ ಸಾಕು ಗುಯ್ ಅಂತಾ ಕಿವಿಗಳ ಬಳಿ ಕೇಳಿ ಬರುವ ಸೊಳ್ಳೆಗಳ ನಿನಾದ ಶುರು. ಸಾಕಪ್ಪಾ ಸಾಕು ಈ ಸೊಳ್ಳೆಕಾಟ ಎಂದು ಹಲವರು ಬೇಸಗೊಳ್ಳುವುದೂ ಉಂಟು. ಆದರೆ, ಇಲ್ಲೊಬ್ಬ ವಿಜ್ಞಾನಿ ತನ್ನ ಸಂಶೋಧನೆಗೋಸ್ಕರ ಪ್ರತಿ ನಿತ್ಯ ಒಂದಲ್ಲ, ಎರಡಲ್ಲ ಸರಿಸುಮಾರು 5 ಸಾವಿರ ಸೊಳ್ಳೆಗಳಿಂದ […]
ದಿನವೆಲ್ಲಾ ದುಡಿದು ಸುಸ್ತಾಗಿ ಮನೆಗೆ ಬಂದ ಮೇಲೆ ಹಾಯಾಗಿ ಮಲಗಬೇಕೆಂದು ಬಯಸೋ ಪ್ರತಿಯೊಬ್ಬ ವ್ಯಕ್ತಿಯ ಪರಮ ವೈರಿ ಅಂದ್ರೆ ಅದು ಸೊಳ್ಳೆ. ನೆಮ್ಮದಿಯಾಗಿ ನಿದ್ದೆ ಮಾಡೋಣ ಅಂತಾ ದಿಂಬಿನ ಮೇಲೆ ತಲೆ ಇಟ್ಟರೇ ಸಾಕು ಗುಯ್ ಅಂತಾ ಕಿವಿಗಳ ಬಳಿ ಕೇಳಿ ಬರುವ ಸೊಳ್ಳೆಗಳ ನಿನಾದ ಶುರು. ಸಾಕಪ್ಪಾ ಸಾಕು ಈ ಸೊಳ್ಳೆಕಾಟ ಎಂದು ಹಲವರು ಬೇಸಗೊಳ್ಳುವುದೂ ಉಂಟು.
ಆದರೆ, ಇಲ್ಲೊಬ್ಬ ವಿಜ್ಞಾನಿ ತನ್ನ ಸಂಶೋಧನೆಗೋಸ್ಕರ ಪ್ರತಿ ನಿತ್ಯ ಒಂದಲ್ಲ, ಎರಡಲ್ಲ ಸರಿಸುಮಾರು 5 ಸಾವಿರ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಾನೆ ಗೊತ್ತಾ. ಹೌದು, ಆಸ್ಟ್ರೇಲಿಯಾದ ವಿಜ್ಞಾನಿ ಪೆರಾನ್ ರಾಸ್ ತನ್ನ ವೈಜ್ಞಾನಿಕ ಸಂಶೋಧನೆಗಾಗಿ ಸೊಳ್ಳೆಗಳ ಕೈಯಲ್ಲಿ ಕಚ್ಚಿಸಿಕೊಳ್ಳುತ್ತಾನೆ.
ಅಂದ ಹಾಗೆ, ತನ್ನ ಸಂಶೋಧನೆಗಾಗಿ ರಾಸ್ ಬಳಸುವ ಸೊಳ್ಳೆಗಳು ಅಂತಿಂಥದ್ದು ಅಲ್ಲ. ಈ ಸೊಳ್ಳೆಗಳು ವೋಲ್ಬ್ಯಾಖಿಯಾ (Wolbachia) ಎಂಬ ಬ್ಯಾಕ್ಟೀರಿಯಾ ಅಥವಾ ಕೀಟಾಣುವನ್ನು ಹೊಂದಿದೆ. ಈ ವೋಲ್ಬ್ಯಾಖಿಯಾ ಕೀಟಾಣು ಸೊಳ್ಳೆಗಳ ಮೂಲಕ ಹರಡುವ ಡೆಂಗಿ ರೋಗವನ್ನು ತಡೆಗಟ್ಟಲು ಬಹಳ ಪರಿಣಾಮಕಾರಿ.
ಹಾಗಾಗಿ, ರಾಸ್ ಈ ಪ್ರಜಾತಿಯ ಸೊಳ್ಳೆಗಳ ಮೊಟ್ಟೆಗಳಲ್ಲಿ ಈ ಕೀಟಾಣುವನ್ನು ಅಳವಡಿಸಿ ಬೆಳೆಸುತ್ತಿದ್ದಾರೆ. ಆದ್ದರಿಂದ, ಡೆಂಗಿ ರೋಗದ ಹರಡುವಿಕೆಯನ್ನು ಮೊಳಕೆಯಲ್ಲಿ ಚಿವುಟಬಹುದು ಅನ್ನೋ ಯೋಚನೆಯಲ್ಲಿ ಪೆರಾನ್ ಈ ಸಂಶೋಧನೆಗೆ ಮುಂದಾಗಿದ್ದಾರೆ. ಹಾಗಾಗಿ, ಪೆರಾನ್ ರಾಸ್ ಈ ರೀತಿ ವೋಲಬ್ಯಾಖಿಯಾ ಇರುವ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಡೆಂಗಿಯ ವಿರುದ್ಧ ಈ ಕೀಟಾಣು ಎಷ್ಟು ಪರಿಣಾಮಕಾರಿ ಎಂದು ಪ್ರಯೋಗ ನಡೆಸುತ್ತಿದ್ದಾರೆ.
Published On - 5:57 pm, Thu, 1 October 20