ಕೈ ಸ್ಪರ್ಶ ಇಲ್ಲದೆಯೇ ಮೊಳಗುತ್ತೆ.. ದೇವಸ್ಥಾನದ ಘಂಟೆ! ಕೊರೊನಾ ಕಾಲದಲ್ಲಿ ಇದು ಅನಿವಾರ್ಯ
ಕೊರೊನಾ ಬಂದ ಮೇಲಂತೂ ದೇವರ ಪೂಜೆಗೂ ಕುತ್ತು ಬಂದಿದೆ ಅಂತ ಬೇಸರ ಮಾಡಿಕೊಂಡ ಭಕ್ತರನ್ನು ಕಂಡಿದ್ದೇವೆ. ದೇವಸ್ಥಾನಕ್ಕೆ ಹೋಗಬೇಕು. ಆದ್ರೆ ಕೊರೊನಾ ಸುರಕ್ಷತೆ ಕೂಡಾ ಕಾಪಾಡಬೇಕಂದ್ರೆ ಹೇಗೆ ಅಂತ ಆಲೋಚಿಸುವ ಹಾಗಾಗಿದ್ದು ಈ ಸಂಕಷ್ಟ ಕಾಲದಲ್ಲೇ..! ಅದಕ್ಕಾಗಿ ದೇವಸ್ಥಾನದಲ್ಲಿ ಸುರಕ್ಷತೆ ಹೆಚ್ಚಿಸಲಾಯ್ತು. ಜನರ ನಡುವೆ ಅಂತರ ಇರಬೇಕೆಂದು ಕಾಲಂಗಳನ್ನು ಬರೆದಿದ್ದಾಯ್ತು. ದೇವಸ್ಥಾನದಲ್ಲಿ ತೀರ್ಥಪ್ರಸಾದ ಇರೋದಿಲ್ಲ ಅಂತ ಕಟ್ಟು ನಿಟ್ಟಾಗಿ ಹೇಳಿದ್ದಾಯ್ತು.. ಅನಿವಾರ್ಯ ಅಂತ ಜನ ಒಪ್ಕೊಂಡ್ರು. ಜನ ದೇವರನ್ನು ನೋಡಬೇಕು.. ಹಾಗೆ ಮುಂದಕ್ಕೆ ಹೋಗಬೇಕು. ಹಾಗೆ ಹೋಗುವಾಗಲೂ […]
ಕೊರೊನಾ ಬಂದ ಮೇಲಂತೂ ದೇವರ ಪೂಜೆಗೂ ಕುತ್ತು ಬಂದಿದೆ ಅಂತ ಬೇಸರ ಮಾಡಿಕೊಂಡ ಭಕ್ತರನ್ನು ಕಂಡಿದ್ದೇವೆ. ದೇವಸ್ಥಾನಕ್ಕೆ ಹೋಗಬೇಕು. ಆದ್ರೆ ಕೊರೊನಾ ಸುರಕ್ಷತೆ ಕೂಡಾ ಕಾಪಾಡಬೇಕಂದ್ರೆ ಹೇಗೆ ಅಂತ ಆಲೋಚಿಸುವ ಹಾಗಾಗಿದ್ದು ಈ ಸಂಕಷ್ಟ ಕಾಲದಲ್ಲೇ..! ಅದಕ್ಕಾಗಿ ದೇವಸ್ಥಾನದಲ್ಲಿ ಸುರಕ್ಷತೆ ಹೆಚ್ಚಿಸಲಾಯ್ತು.
ಜನರ ನಡುವೆ ಅಂತರ ಇರಬೇಕೆಂದು ಕಾಲಂಗಳನ್ನು ಬರೆದಿದ್ದಾಯ್ತು. ದೇವಸ್ಥಾನದಲ್ಲಿ ತೀರ್ಥಪ್ರಸಾದ ಇರೋದಿಲ್ಲ ಅಂತ ಕಟ್ಟು ನಿಟ್ಟಾಗಿ ಹೇಳಿದ್ದಾಯ್ತು.. ಅನಿವಾರ್ಯ ಅಂತ ಜನ ಒಪ್ಕೊಂಡ್ರು. ಜನ ದೇವರನ್ನು ನೋಡಬೇಕು.. ಹಾಗೆ ಮುಂದಕ್ಕೆ ಹೋಗಬೇಕು. ಹಾಗೆ ಹೋಗುವಾಗಲೂ ನಡುವೆ ಅಂತರವಿರಲಿ ಸೂತ್ರ ಪಾಲಿಸಬೇಕು. ಇದೆಲ್ಲವೂ ಆಯ್ತು.. ಆದ್ರೆ ಜನ ಮಾತ್ರ ದೇವಸ್ಥಾನದಲ್ಲಿ ತೂಗು ಹಾಕಿದ್ದ ಘಂಟೆಯನ್ನು ಬಾರಿಸೋದು ಬಿಡಲೇ ಇಲ್ಲ..
ದೇವಸ್ಥಾನಕ್ಕೆ ಹೋದರೆ ಕೈ ಮುಟ್ಟಿಸದೇ ಘಂಟೆ ಬಾರಿಸಿ..! ಎಲ್ಲದಕ್ಕೂ ಪರಿಹಾರ ಕಂಡುಕೊಂಡಿದ್ದ ದೇವಸ್ಥಾನ, ಜನ ಘಂಟೆ ಮುಟ್ಟದ ಹಾಗೆ ಮಾಡೋದು ಹೇಗೆ ಅಂತ ತಲೆ ಕೆಡಿಸಿಕೊಳ್ಳ ತೊಡಗಿತ್ತು. ಪೂಜೆಗೆ ಬಂದ ಜನ ಪೂಜೆ ಮಾಡಬೇಕು ಘಂಟೆನೂ ಬಾರಿಸಬೇಕು. ಆದ್ರೆ, ಅದೇ ಸೋಂಕು ಹರಡೋಕೆ ಕಾರಣವಾಗಬಾರದು.
ಅದಕ್ಕೆ ಮಧ್ಯಪ್ರದೇಶದ ಪ್ರಸಿದ್ಧ ಪಶುಪತಿನಾಥ ದೇವಾಸ್ಥಾನದಲ್ಲಿ ಒಂದು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಅಲ್ಲಿ ವಿಶೇಷವಾಗಿರುವ ಸೆನ್ಸಾರ್ ಘಂಟೆಗಳನ್ನು ಅಳವಡಿಸಲಾಗಿದೆ. ಅದರಂತೆ ಅಲ್ಲಿ ಸೆನ್ಸಾರ್ ಟೆಕ್ನಾಲಜಿ ಬಳಸಿ ಘಂಟೆಯ ನಾದ ಬರುವ ಹಾಗೆ ಮಾಡಿದ್ದಾರೆ ತಂತ್ರಜ್ಞರು.
ಅದಕ್ಕಾಗಿ ತಂತ್ರಜ್ಞರು ತುಂಬಾನೇ ಶ್ರಮಿಸಿದ್ದಾರೆ. ದೇವಸ್ಥಾನಕ್ಕೆ ಬಂದ ಮೇಲೆ ಭಕ್ತರಿಗೆ ತಮ್ಮದೇ ಆದ ರೀತಿ ರಿವಾಜುಗಳಿವೆ. ತಾವು ನಮಸ್ಕಾರ ಹಾಕಬೇಕು, ಘಂಟೆ ಬಾರಿಸಬೇಕು ಅನ್ನುವ ಬಯಕೆ ಇರುತ್ತೆ. ಇದನ್ನೆಲ್ಲಾ ಗಮನದಲ್ಲಿಟ್ಟು ಇದೊಂದು ಸೆನ್ಸಾರ್ ಗಂಟೆ ತಯಾರಾಗಿದೆ. ಈಗ ದೇವರ ಮುಂದೆ ಘಂಟೆ ಬಾರಿಸಿದ ಹಾಗೂ ಆಯ್ತು… ಅಂತರ ಕಾಪಾಡಿದ ಹಾಗೂ ಆಯ್ತು.. ಸೋಂಕು ಹರಡದ ಹಾಗೆ ಎಚ್ಚರ ವಹಿಸಿದ ಹಾಗೂ ಆಯ್ತು..! -ರಾಜೇಶ್ ಶೆಟ್ಟಿ
Published On - 4:57 pm, Mon, 15 June 20