Swara Samrat Festival 2023: ಭಾರತದ ಅತಿದೊಡ್ಡ ಶಾಸ್ತ್ರೀಯ ಸಂಗೀತ ಉತ್ಸವ, ವಿವಿಧ ಕಾರ್ಯಕ್ರಮಗಳ ವೈಭವ

ಭಾರತ ಸರ್ಕಾರದ ಸಂಸ್ಕತಿ ಸಚಿವಾಲಯ ಆಯೋಜನೆ ಮಾಡಿರುವ ಸ್ವರ ಸಾಮ್ರಾಟ್ ಹಬ್ಬ(SSF) ಇದೇ ಜನವರಿ 14 ಮತ್ತು 15 ರಂದು ಇನ್‍ಕ್ರೆಡಿಬಲ್ ಇಂಡಿಯಾದ ಪ್ರಯೋಜಕತ್ವದಲ್ಲಿ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಲಿದೆ.

Swara Samrat Festival 2023: ಭಾರತದ ಅತಿದೊಡ್ಡ ಶಾಸ್ತ್ರೀಯ ಸಂಗೀತ ಉತ್ಸವ, ವಿವಿಧ ಕಾರ್ಯಕ್ರಮಗಳ ವೈಭವ
Swara Samrat Festival 2023Image Credit source: TV9 kannada
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 13, 2023 | 5:52 PM

ಭಾರತ ಸರ್ಕಾರದ ಸಂಸ್ಕತಿ ಸಚಿವಾಲಯ ಆಯೋಜನೆ ಮಾಡಿರುವ ಸ್ವರ ಸಾಮ್ರಾಟ್ ಹಬ್ಬ 2023 (Swara Samrat Festival 2023) (SSF) ಇದೇ ಜನವರಿ 14 ಮತ್ತು 15 ರಂದು ಇನ್‍ಕ್ರೆಡಿಬಲ್ ಇಂಡಿಯಾದ ಪ್ರಯೋಜಕತ್ವದಲ್ಲಿ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಲಿದೆ. ಭಾರತದ ಅತಿದೊಡ್ಡ ಶಾಸ್ತ್ರೀಯ ಸಂಗೀತದ ಉತ್ಸವ ಇದಾಗಿದ್ದು, ಜನವರಿ 14ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ, ಸಂಗೀತ ವಿದ್ವಾಂಸರ ಸಾರಥ್ಯದಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. PT. ವೆಂಕಟೇಶ್ ಕುಮಾರ್(ಹಿಂದೂಸ್ಥಾನಿ ಶೈಲಿ ಗಾಯಕ), PT. ರವೀಂದ್ರ ಯಾವಗಲ್(ತಬಲಾ), PT. ರವೀಂದ್ರ ಕಟೋಟಿ(ಹಾರ್ಮೋನಿಯಂ) ಭಾಗವಹಿಸಲಿದ್ದಾರೆ.

ಜುಗಲ್‍ಬಂದಿ ಕಾರ್ಯಕ್ರಮವನ್ನು PT. ಪುರ್‍ಬಯಾನ್ ಚಟರ್ಜಿ (ಸಿತಾರ್), ವಿದ್ವಾನ್ ಶಶಾಂಕ್ ಸುಬ್ರಮಣ್ಯಮ್ (ಕರ್ನಾಟಿಕ್ ಕೊಳಲು), ಓಜಸ್ ಆಧಿಯಾ(ತಬಲಾ), ವಿದ್ವಾನ್ ಪರುಪಲ್ಲಿ ಫಲ್ಗುಣ್(ಮೃದಂಗ), ವಿದ್ವಾನ್ ಅಭಿಷೇಕ್ ರಘುರಾಮ್(ಕರ್ನಾಟಿಕ್ ಗಾಯಕ), ಸೌಗತ ರಾಯ್ ಚೌಧರಿ (ಸರೋದ್), ಇಂದ್ರಾಣಿಲ್ ಮಲ್ಲಿಕ್ (ತಬಲಾ) ಇವರು ನಡೆಸಿಕೊಡಲಿದ್ದಾರೆ.

ಇದನ್ನು ಓದಿ:Special Story: ನೆಮ್ಮದಿಯ ಜೀವನಕ್ಕೆ ಪರಿಸರ ಸಂರಕ್ಷಣೆ ಅತ್ಯಗತ್ಯ

ಜನವರಿ 15ರಂದು ಸಂಜೆ 4 ಗಂಟೆಗೆ ವಿದುಷಿ ಮಾಳವಿಕ ಸರುಕ್ಕೈ (ಭರತನಾಟ್ಯ), ವಿದುಷಿ ಬಾಂಬೆ ಜಯಶ್ರೀ (ಕರ್ನಾಟಿಕ್ ಗಾಯಕ) ಇವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ತಾಳವಾದ್ಯದಲ್ಲಿ PT. ಯೋಗೇಶ್ ಸಮ್ಸಿ (ತಬಲಾ), ವಿದ್ವಾನ್ ಪ್ಯಾಟ್ರಿ ಸತೀಶ್ ಕುಮಾರ್(ಮೃದಂಗ), ವಿದ್ವಾನ್ ಗಿರಿಧರ್ ಉಡುಪ(ಘಟಮ್), ಮಿಲಿಂದ್ ಕುಲಕರ್ಣಿ(ಹಾರ್ಮೋನಿಯಂ) ಇರಲಿದ್ದಾರೆ.

ಜುಗಲ್‍ಬಂದಿಯಲ್ಲಿ ದೇಬಪ್ರಿಯ ಅಧಿಕಾರಿ(ಹಿಂದುಸ್ಥಾನಿ ಗಾಯಕ), ಸಮನ್ವಯ ಸರ್ಕಾರ್(ಸಿತಾರ್), ರಾಜೇಂದ್ರ ನಾಕೋಡ್(ತಬಲಾ) ಇರಲಿದ್ದಾರೆ. ಈ ಕಾರ್ಯಕ್ರಮದ ಟಿಕೇಟ್ ದರವನ್ನು 500,1000, 2000, 3000(3rd row), 4000(2nd row), 5000(1st row) (ಒಂದು ದಿನಕ್ಕೆ) ಕೂಡ ನಿಗದಿ ಮಾಡಲಾಗಿದೆ.

ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Fri, 13 January 23