ಕೂದಲ ಪೋಷಣೆ: ಪ್ಲಾಸ್ಟಿಕ್ ಬಾಚಣಿಗೆ ಬಿಸಾಕಿ, ಮರದ ಬಾಚಣಿಗೆ ಬಳಸಿ

ನಿಮ್ಮ ಕೂದಲನ್ನು ಬಾಚಲು ನೀವು ಯಾವ ಬಾಚಣಿಗೆ ಬಳಸ್ತಾ ಇದ್ದೀರಾ? ಅಫ್‌ಕೋರ್ಸ್‌ ಪ್ಲಾಸ್ಟಿಕ್‌ನಿಂದ ತಯಾರಿಸಿದ್ದೇ ಆಗಿರುತ್ತೆ. ಯಾಕಂದ್ರೆ ಹೆಚ್ಚಿನವು ದೊಡ್ಡ ದೊಡ್ಡ ಕಂಪೆನಿಯ ಬಾಚಣಿಗೆ ಕೂಡ ಪ್ಲಾಸ್ಟಿಕ್‌ನಿಂದಲೇ ತಯಾರಿಸಿರ್ತಾರೆ. ಇಲ್ಲ ಅಂದ್ರೆ ಮೆಟಲ್‌ನಿಂದ ತಯಾರಿಸಿದ ಕೂಂಬ್‌ಗಳಾಗಿರುತ್ತೆ. ಆದ್ರೆ ಇವುಗಳಿಗಿಂತ ಬೆಸ್ಟ್‌ ಮರದಿಂದ ತಯಾರಿಸಿರುವ ಬಾಚಣಿಗೆಗಳು. ಮರದ ಬಾಚಣಿಗೆಗಳು ನಿಮ್ಮ ಕೂದಲಿಗೆ ಅತ್ಯಂತ ಉಪಯೋಗಕಾರಿ ಅನ್ನೋದು ಸಂಶೋಧನೆಗಳಿಂದಲೇ ತಿಳಿದುಬಂದಿದೆ. ಪ್ಲಾಸ್ಟಿಕ್‌ ಬಾಚಣಿಗೆಗೂ ಮರದ ಬಾಚಣಿಗೆಗೂ ಇದೇ ವ್ಯತ್ಯಾಸ: ಮೆಟಲ್‌ ಅಥ್ವಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕೂಂಬ್‌ಗಳು ನಿಮ್ಮ ಸ್ಕಾಲ್ಪ್‌ಗಳಿಗೆ ರಫ್‌ […]

ಕೂದಲ ಪೋಷಣೆ: ಪ್ಲಾಸ್ಟಿಕ್ ಬಾಚಣಿಗೆ ಬಿಸಾಕಿ, ಮರದ ಬಾಚಣಿಗೆ ಬಳಸಿ
sadhu srinath

|

Nov 02, 2019 | 5:17 PM

ನಿಮ್ಮ ಕೂದಲನ್ನು ಬಾಚಲು ನೀವು ಯಾವ ಬಾಚಣಿಗೆ ಬಳಸ್ತಾ ಇದ್ದೀರಾ? ಅಫ್‌ಕೋರ್ಸ್‌ ಪ್ಲಾಸ್ಟಿಕ್‌ನಿಂದ ತಯಾರಿಸಿದ್ದೇ ಆಗಿರುತ್ತೆ. ಯಾಕಂದ್ರೆ ಹೆಚ್ಚಿನವು ದೊಡ್ಡ ದೊಡ್ಡ ಕಂಪೆನಿಯ ಬಾಚಣಿಗೆ ಕೂಡ ಪ್ಲಾಸ್ಟಿಕ್‌ನಿಂದಲೇ ತಯಾರಿಸಿರ್ತಾರೆ. ಇಲ್ಲ ಅಂದ್ರೆ ಮೆಟಲ್‌ನಿಂದ ತಯಾರಿಸಿದ ಕೂಂಬ್‌ಗಳಾಗಿರುತ್ತೆ. ಆದ್ರೆ ಇವುಗಳಿಗಿಂತ ಬೆಸ್ಟ್‌ ಮರದಿಂದ ತಯಾರಿಸಿರುವ ಬಾಚಣಿಗೆಗಳು. ಮರದ ಬಾಚಣಿಗೆಗಳು ನಿಮ್ಮ ಕೂದಲಿಗೆ ಅತ್ಯಂತ ಉಪಯೋಗಕಾರಿ ಅನ್ನೋದು ಸಂಶೋಧನೆಗಳಿಂದಲೇ ತಿಳಿದುಬಂದಿದೆ.

ಪ್ಲಾಸ್ಟಿಕ್‌ ಬಾಚಣಿಗೆಗೂ ಮರದ ಬಾಚಣಿಗೆಗೂ ಇದೇ ವ್ಯತ್ಯಾಸ: ಮೆಟಲ್‌ ಅಥ್ವಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕೂಂಬ್‌ಗಳು ನಿಮ್ಮ ಸ್ಕಾಲ್ಪ್‌ಗಳಿಗೆ ರಫ್‌ ಫೀಲಿಂಗ್‌ ನೀಡುತ್ತೆ. ಆದ್ರೆ ಮರದಿಂದ ತಯಾರಿಸಿದ ಬಾಚಣಿಗೆ ಸಾಫ್ಟ್‌ ಆಗಿರುತ್ತೆ ಮತ್ತು ಪಾಲಿಶ್ಡ್‌ ಆಗಿರುತ್ತೆ. ಅವು ಪ್ಲಾಸ್ಟಿಕ್‌ ಮತ್ತು ಮೆಟಲ್‌ನಿಂದ ತಯಾರಿಸಿರುವ ಕೂಂಬ್‌ಗಳಿಗಿಂತ ಸ್ಕಾಲ್ಪ್‌ಗೆ ಹೆಚ್ಚು ಹಿತವಾದ ಅನುಭವವನ್ನು ನೀಡಬಲ್ಲದು, ಅದ್ರಲ್ಲೂ ನಿಮ್ಮದು ಸೆನ್ಸಿಟೀವ್‌ ಸ್ಕಾಲ್ಪ್‌ ಆಗಿದ್ರೆ ವುಡನ್‌ ಬಾಚಣಿಗೆಗಳು ಸ್ಕಾಲ್ಪ್‌ ಸ್ಕ್ರಾಚ್‌ ಆಗೋದು ಅಥ್ವಾ ಸ್ಕಾಲ್ಪ್‌ ಹಾನಿಯಾಗುವ ಎಲ್ಲಾ ಅಂಶಗಳಿಂದ ದೂರವಿರುವಂತೆ ಮಾಡುತ್ತೆ.

ತಲೆಗೆ ಎಣ್ಣೆ ಹಚ್ಚಿದಾಗ ಪ್ಲಾಸ್ಲಿಕ್‌ ಬಾಚಣಿಗೆ ಸ್ಕಾಲ್ಪ್ ಮತ್ತು ಕೂದಲಿಗೆ ಸರಿಯಾಗಿ ಎಣ್ಣೆಯನ್ನು ಅಪ್ಲೈ ಆಗುವಂತೆ ಮಾಡುವುದಿಲ್ಲ. ಬದಲಾಗಿ ಮರದ ಬಾಚಣಿಗೆ ಬಳಸಿದ್ರೆ ನಿಮ್ಮ ಕೂದಲು ಮತ್ತು ಚರ್ಮದ ಭಾಗಕ್ಕೆ ಸರಿಯಾಗಿ ಎಣ್ಣೆ ಹರಡುವಂತೆ ಮಾಡುತ್ತೆ. ಮರದ ಬಾಚಣಿಗೆಯಿಂದ ಎಣ್ಣೆ ಸವರಿಕೊಳ್ಳೋದ್ರಿಂದ ಸ್ಕಾಲ್ಪ್‌ ಗ್ರೀಸಿಗ್ರೀಸಿ ಆಗಿ ತುರಿಕೆ ಮತ್ತಿತರ ಕಾಯಿಲೆಗಳು ಬರದಂತೆ ತಡೆಯಲು ಈ ಮರದ ಬಾಚಣಿಗೆಗಳು ನೆರವಾಗುತ್ತೆ.

ಪರಿಣಾಮಗಳು: ಪ್ಲಾಸ್ಟಿಕ್ ಮತ್ತು ಮೆಟಲ್‌ ಬಾಚಣಿಗೆಗಳ ಎಲೆಕ್ಟ್ರಿಕ್‌ ಕಂಡಕ್ಟರ್‌ ಗುಣಗಳಿಂದಾಗಿ ಕೂದಲು ಆರೋಗ್ಯಪೂರ್ಣವಾಗಿ ಇರೋದಿಲ್ಲ. ಬದಲಾಗಿ ಕೂದಲು ಡ್ಯಾಮೇಜ್ ಆಗುವ ಸಾಧ್ಯತೆ ಇರುತ್ತೆ. ಆದ್ರೆ ಮರ ನಿಮ್ಗೆ ಗೊತ್ತಿರೋ ಹಾಗೆ ಒಂದು ಅವಾಹಕ. ಅಂದ್ರೆ ವಿದ್ಯುತ್ ಪ್ರವಹಿಸಲು ಬಿಡೋದಿಲ್ಲ. ಹಾಗಂತ ಕೂದಲಲ್ಲಿ ವಿದ್ಯುತ್‌ ಪ್ರವಹಿಸುತ್ತಾ ಅಂತ ಪ್ರಶ್ನೆ ಕೇಳ್ಬೇಡಿ. ಇದೊಂದು ನ್ಯಾಚುರಲ್ ಪ್ರಕ್ರಿಯೆ ಅಷ್ಟೇ, ಒಟ್ಟಿನಲ್ಲಿ ಮರದ ಬಾಚಣಿಗೆಯ ಅವಾಹಕ ಗುಣದಿಂದಾಗಿ ಕೂದಲು ಡ್ಯಾಮೇಜ್‌ ಆಗೋದನ್ನ ತಡೆಯುತ್ತೆ.

ಉದ್ದ ಕೂದಲಿರುವವರಿಗೆ ಕೂದಲು ಸಿಕ್ಕಾಗುವುದು, ಬಾಚುವಾಗ ನೋವಾಗುವ ಸಮಸ್ಯೆ ಕಾಡುತ್ತೆ. ಆದ್ರೆ ಮರದ ಬಾಚಣಿಗೆ ಬಳಸೋದ್ರಿಂದ ಈ ಸಮಸ್ಯೆ ಕಡಿಮೆಯಾಗುತ್ತೆ. ಅಷ್ಟೇ ಅಲ್ಲ, ಕೂದಲಿನ ಲೆಂಥ್ ಮತ್ತು ನೀವು ಕೂದಲಿಗೆ ಅಪ್ಲೈ ಮಾಡುವ ಎಣ್ಣೆಯನ್ನು ಸರಿಯಾಗಿ ಡಿಸ್ಟ್ರಿಬ್ಯೂಟ್ ಮಾಡಿ ಎಲ್ಲಾ ಕೂದಲೂ ಆರೋಗ್ಯಪೂರ್ಣಗೊಳ್ಳಲು ಇದು ಸಹಕಾರಿಯಾಗಿದೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ.

ಇನ್ನು ನೀವು ಯಾವ ಮರದ ಬಾಚಣಿಗೆ ಬಳಸ್ತಾ ಇದ್ದೀರಿ ಅನ್ನೋದನ್ನೂ ಪರಿಶೀಲಿಸಿಕೊಳ್ಳಲು ಸಾಧ್ಯವಿದ್ರೆ ಪರಿಶೀಲಿಸಿಕೊಳ್ಳಿ. ಬೇವಿನ ಮರದ ಬಾಚಣಿಗೆಯನ್ನು ಬಳಸಿದ್ರೆ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತೆ. ಕೂದಲಲ್ಲಿ ಅಥ್ವಾ ತಲೆಯಲ್ಲಿ ಆಗುವ ಅಲರ್ಜಿಗಳನ್ನು ನಿವಾರಿಸಲು ಈ ಬೇವಿನ ಮರದ ಬಾಚಣಿಗೆ ಹೆಚ್ಚು ಪರಿಣಾಮಕಾರಿ. ಇನ್ನು ಮರದ ಬಾಚಣಿಗೆಯನ್ನು ಆಗಾಗ ಕ್ಲೀನ್ ಮಾಡ್ಕೊಳ್ತಾ ಇರಿ. ಆದ್ರೆ ನೀರಿನಿಂದ ತೊಳೆದು ಕ್ಲೀನ್ ಮಾಡ್ಬೇಡಿ. ನ್ಯಾಚುರಲ್ ಆಯಿಲ್ ಬಳಸಿ ಕ್ಲೀನ್ ಮಾಡಿಕೊಳ್ಳಬಹುದು. ಮರದ ಬಾಚಣಿಗೆ ಕ್ಲೀನ್ ಮಾಡಲು ಜೋಜೋಬಾ ಆಯಿಲ್ ತುಂಬಾ ಒಳ್ಳೆಯದಂತೆ.

ಇತ್ತೀಚೆಗೆ ಬೇರೆಬೇರೆ ಡಿಸೈನಿನ ಮರದ ಬಾಚಣಿಗೆಗಳು ಲಭ್ಯವಿರೋದ್ರಿಂದ ಎಲ್ಲಾ ಲೇಡಿಸ್ ತಮ್ಮ ವ್ಯಾನಿಟಿಯಲ್ಲಿ ಇಟ್ಟುಕೊಳ್ಳಲೇಬೇಕಾದ ಒಂದು ಬೆಸ್ಟ್ ಆಕ್ಸಸರಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಪ್ಲಾಸ್ಟಿಕ್ ಅಥ್ವಾ ಮೆಟಲ್‌ ಬಾಚಣಿಗೆಗಳಿಗಿಂತ ಮರದ ಬಾಚಣಿಗೆಗಳು ನಿಮಗೆ ಹೆಚ್ಚು ಪ್ರಯೋಜನಕಾರಿ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada