ಇಷ್ಟಾರ್ಥ ಸಿದ್ಧಿಗಾಗಿ ಹೀಗೆ ವ್ರತ ಮಾಡಿದ್ರೆ ಫಲ ಲಭಿಸುತ್ತೆ
ನಮ್ಮ ಭಾರತ ಧರ್ಮಭೂಮಿ ಎಂದೇ ಪ್ರಖ್ಯಾತಿ ಪಡೆದಿರೋ ದೇಶ. ಭಾರತದಲ್ಲಿ ಆಚರಿಸುವಷ್ಟು ಧಾರ್ಮಿಕ ಆಚರಣೆಗಳು ಬೇರೆಲ್ಲೂ ಕಂಡು ಬರುವುದಿಲ್ಲ. ವ್ಯಕ್ತಿಯ ಆಧ್ಯಾತ್ಮ ಸಾಧನೆಗೆ ವ್ರತಾಚರಣೆಗಳು ನೆರವಾಗುತ್ತವೆ. ಇಷ್ಟಕ್ಕೂ ವ್ರತ ಎಂದರೇನು? ಏಕೆ ಮಾಡಬೇಕು ಗೊತ್ತಾ? ಯಾವುದಾದರೊಂದು ಇಷ್ಟಾರ್ಥ ಸಿದ್ಧಿಗಾಗಿ ಕೈಗೊಳ್ಳುವ ಧಾರ್ಮಿಕ ವಿಧಿ ವಿಧಾನವನ್ನು ವ್ರತ ಎನ್ನಲಾಗುತ್ತೆ. ಪುರಾಣದಲ್ಲಿ ಮತ್ತು ಧರ್ಮಗ್ರಂಥಗಳಲ್ಲಿ ಯಾವ ಇಷ್ಟಾರ್ಥಕ್ಕಾಗಿ ಯಾವ ಉಪಾಸನೆಯನ್ನು ಮಾಡಬೇಕೆನ್ನುವುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಸತ್ಯನಾರಾಯಣ ವ್ರತ ಇಷ್ಟಾರ್ಥವನ್ನು ಬೇಗ ಪೂರೈಸುತ್ತೆ ಎನ್ನುವ ನಂಬಿಕೆ ಇದೆ. ಹೀಗಾಗೇ ಬಹಳಷ್ಟು ಜನರು […]
ನಮ್ಮ ಭಾರತ ಧರ್ಮಭೂಮಿ ಎಂದೇ ಪ್ರಖ್ಯಾತಿ ಪಡೆದಿರೋ ದೇಶ. ಭಾರತದಲ್ಲಿ ಆಚರಿಸುವಷ್ಟು ಧಾರ್ಮಿಕ ಆಚರಣೆಗಳು ಬೇರೆಲ್ಲೂ ಕಂಡು ಬರುವುದಿಲ್ಲ. ವ್ಯಕ್ತಿಯ ಆಧ್ಯಾತ್ಮ ಸಾಧನೆಗೆ ವ್ರತಾಚರಣೆಗಳು ನೆರವಾಗುತ್ತವೆ. ಇಷ್ಟಕ್ಕೂ ವ್ರತ ಎಂದರೇನು? ಏಕೆ ಮಾಡಬೇಕು ಗೊತ್ತಾ? ಯಾವುದಾದರೊಂದು ಇಷ್ಟಾರ್ಥ ಸಿದ್ಧಿಗಾಗಿ ಕೈಗೊಳ್ಳುವ ಧಾರ್ಮಿಕ ವಿಧಿ ವಿಧಾನವನ್ನು ವ್ರತ ಎನ್ನಲಾಗುತ್ತೆ. ಪುರಾಣದಲ್ಲಿ ಮತ್ತು ಧರ್ಮಗ್ರಂಥಗಳಲ್ಲಿ ಯಾವ ಇಷ್ಟಾರ್ಥಕ್ಕಾಗಿ ಯಾವ ಉಪಾಸನೆಯನ್ನು ಮಾಡಬೇಕೆನ್ನುವುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.
ಸತ್ಯನಾರಾಯಣ ವ್ರತ ಇಷ್ಟಾರ್ಥವನ್ನು ಬೇಗ ಪೂರೈಸುತ್ತೆ ಎನ್ನುವ ನಂಬಿಕೆ ಇದೆ. ಹೀಗಾಗೇ ಬಹಳಷ್ಟು ಜನರು ಸತ್ಯನಾರಾಯಣ ವ್ರತವನ್ನು ಆಚರಿಸ್ತಾರೆ. ನಿಮಗೆ ಗೊತ್ತಾ? ವ್ರತದಿಂದ ಆಯಾ ವ್ರತದ ಅಧಿಷ್ಠಾನ ದೇವತೆಗಳು ಪ್ರಸನ್ನರಾಗ್ತಾರೆ. ಮತ್ತು ಅವರ ಕೃಪೆಯಿಂದ ವ್ರತಕ್ಕೆ ತಕ್ಕ ಫಲ ಲಭಿಸುತ್ತೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇನ್ನು ವ್ರತಾಚರಣೆಯಲ್ಲಿ ಹಲವು ವಿಧಗಳಿವೆ. ಆ ಬಗ್ಗೆ ಧರ್ಮಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾದ್ರೆ ವ್ರತದ ವಿಧಿಗಳು ಯಾವುವು?
ವ್ರತಗಳ ವಿಧಗಳು * ಶಾರೀರಿಕ ವ್ರತಗಳು: ಉಪವಾಸ ಮಾಡುವುದು, ಒಂದು ಹೊತ್ತು ಮಾತ್ರ ಊಟ ಮಾಡುವುದು, ಹಿಂಸೆ ಮಾಡದಿರುವುದು. * ಮಾನಸಿಕ ವ್ರತಗಳು: ಬ್ರಹ್ಮಚರ್ಯಪಾಲನೆ, ಮನಸ್ಸಿನಿಂದಲೂ ಹಿಂಸೆಯನ್ನು ಮಾಡದಿರುವುದು, ಕೋಪಗೊಳ್ಳದಿರುವುದು. * ವಾರ ವ್ರತಗಳು: ಸೋಮ, ಮಂಗಳ, ಶುಕ್ರ ಮತ್ತು ಶನಿವಾರಗಳಂದು ಸಂಬಂಧಿಸಿದ ದೇವರ ಆರಾಧನೆ ಮಾಡೋದು. * ದೇವತೆಗಳಿಗನುಸಾರವಾಗಿ ಮಾಡುವ ವ್ರತ: ಗಣೇಶ ವ್ರತ, ಸೂರ್ಯ ವ್ರತ, ಶಿವ ವ್ರತ, ವಿಷ್ಣು ವ್ರತ, ದೇವೀ ವ್ರತ ಇತ್ಯಾದಿ.
ಹೀಗೆ ನಮ್ಮ ಇಷ್ಟಾರ್ಥ ಸಿದ್ಧಿಗಾಗಿ ವ್ರತ ಮಾಡುವಾಗ ವ್ರತಗಳು ಶುಕ್ಲ ಪ್ರತಿಪದೆಯಿಂದ ಸಪ್ತಮಿ ಅಥವಾ ಅಷ್ಟಮಿಯವರೆಗೆ ಇರುವಂತೆ ಮಾಡಬೇಕು. ಏಕೆಂದರೆ ಆಗ ವೃದ್ಧ್ಧಿಸುತ್ತಿರುವ ಚಂದ್ರನು ಕಾಣಿಸುತ್ತ್ತಾನೆ ಹಾಗೂ ವ್ರತದ ಉದ್ದೇಶವು ಸಫಲವಾಗುವ ಅವಕಾಶ ಹೆಚ್ಚಾಗುತ್ತಾ ಹೋಗುತ್ತೆ ಅನ್ನೋ ನಂಬಿಕೆ ಇದೆ.
ನಾವು ಆಚರಿಸುವ ವ್ರತಗಳು ಯಾವುದೇ ಕಾಲಕ್ಕೆ ಸೀಮಿತವಾಗಿರದೇ ನಿತ್ಯ ಆಚಾರಗಳಂತೆ ಸಾಮಾನ್ಯವಾಗಿರಬೇಕು. ವ್ರತಗಳಿಂದ ನಮ್ಮ ಆತ್ಮ ಮತ್ತು ಮನಸ್ಸು ಪರಿಶುದ್ಧವಾಗಬೇಕು. ಆತ್ಮ ಶುದ್ಧಿ ಇಲ್ಲದೇ ಆಧ್ಯಾತ್ಮಿಕ ಗುರಿ ಅಸಾಧ್ಯ. ಹೀಗಾಗೇ ಆಸೆಯನ್ನು ಗೆಲ್ಲುವುದು, ಇಂದ್ರಿಯಗಳನ್ನು ನಿಗ್ರಹಿಸುವುದು, ಆ ಮೂಲಕ ಆಧ್ಯಾತ್ಮಿಕ ಪ್ರಗತಿ ಸಾಧಿಸುವುದು ವ್ರತಗಳ ಉದ್ದೇಶವಾಗಬೇಕು. ಇಂತಹ ಉದ್ದೇಶವಿಲ್ಲದೆ ಮಾಡುವ ವ್ರತಗಳು ಉದ್ದೇಶವಿಲ್ಲದೇ ಹೊರಟ ಕುರುಡನ ನಡಿಗೆಯಂತೆ ನಿಷ್ಪ್ರಯೋಜಕವಾಗುತ್ತೆ ಎನ್ನಲಾಗುತ್ತೆ.
ಒಟ್ಟಾರೆ ವ್ರತಗಳ ಉದ್ದೇಶ ನಮ್ಮಲ್ಲಿನ ಅಹಂಕಾರ ಅಳಿದು ಸರಳತೆ ಹಾಗು ನಿರಾಡಂಬರತೆಗಳನ್ನು ಅಳವಡಿಸಿಕೊಳ್ಳೋದು. ನಮ್ಮ ವ್ರತಕ್ಕೆ ನಿಯಮಗಳಿರಬೇಕು.ಆ ನಿಯಮಗಳ ಪರಿಪಾಲನೆ ಮಾಡೋದ್ರಿಂದ ಖಂಡಿತವಾಗಿಯೂ ಭಗವಂತನೊಡನೆ ಸಾಮರಸ್ಯವನ್ನು ಸಾಧಿಸಲು ಸಹಕಾರಿಯಾಗುತ್ತೆ ಅನ್ನೋದು ಅನುಭವಸ್ಥರ ಮಾತು. ಆದ್ರೆ ಇಂದು ವ್ರತಗಳಿಗೆ ಅಜ್ಞಾನದಿಂದಾಗಿ ಅಂಧಾನುಕರಣೆಗಳು ಸೇರಿಕೊಂಡು ಅವುಗಳ ಮೂಲ ಉದ್ದೇಶವನ್ನೇ ಮರೆಸಿರೋದು ವಿಷಾದದ ಸಂಗತಿ.
Published On - 10:20 am, Fri, 1 November 19