ಜಪಮಾಲೆಯಿಂದ ಮಾಡುವ ಜಪಗಳ ಪ್ರಯೋಜನವೇನು?

ಜಪಮಾಲೆಯಿಂದ ಮಾಡುವ ಜಪಗಳ ಪ್ರಯೋಜನವೇನು?

ಹಿಂದೂ ಸಂಪ್ರದಾಯದ ಪ್ರಕಾರ, ಏಕಾಂತವಾಗಿ, ನಿರ್ಮಲ ಮನಸ್ಸಿನಿಂದ ಮಾಡುವ ಜಪ-ತಪಗಳಿಗೆ ಹೆಚ್ಚಿನ ಪಾಶಸ್ತ್ಯವನ್ನು ನೀಡಲಾಗಿದೆ. ಧ್ಯಾನ, ಜಪತಪಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳು ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ನಿರ್ಮಲ ಮನಸ್ಸಿನಿಂದ ಜಪ ಮಾಡುವುದರಿಂದ ಮನಸ್ಸಿಗೆ ವ್ಯಾಯಾಮ, ಶಾಂತಿ, ನೆಮ್ಮದಿ ಸಿಗುತ್ತೆ. ಜಪತಪದಿಂದ ಭಗವಂತನನ್ನು ಸಾಕ್ಷತ್ಕಾರಗೊಳಿಸಿಕೊಳ್ಳಬಹುದು ಅನ್ನೋ ನಂಬಿಕೆ ಅನಾದಿಕಾಲದಿಂದಲೂ ಇದೆ. ಜಪ ಅನ್ನೋ ಈ ಎರಡು ಅಕ್ಷರಗಳ ಪದದ ಶಕ್ತಿಯನ್ನ ಸಿದ್ದರು, ಜ್ಞಾನಿಗಳು, ಸಾಧು ಸಂತರು, ಋಷಿಮುನಿಗಳು, ಅಪಾರ ದೈವ ಭಕ್ತರು ಅರಿತಿರುತ್ತಾರೆ. ಆದ್ದರಿಂದಲೇ ಅಂತಹವರು […]

sadhu srinath

|

Feb 22, 2020 | 2:31 PM

ಹಿಂದೂ ಸಂಪ್ರದಾಯದ ಪ್ರಕಾರ, ಏಕಾಂತವಾಗಿ, ನಿರ್ಮಲ ಮನಸ್ಸಿನಿಂದ ಮಾಡುವ ಜಪ-ತಪಗಳಿಗೆ ಹೆಚ್ಚಿನ ಪಾಶಸ್ತ್ಯವನ್ನು ನೀಡಲಾಗಿದೆ. ಧ್ಯಾನ, ಜಪತಪಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳು ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ನಿರ್ಮಲ ಮನಸ್ಸಿನಿಂದ ಜಪ ಮಾಡುವುದರಿಂದ ಮನಸ್ಸಿಗೆ ವ್ಯಾಯಾಮ, ಶಾಂತಿ, ನೆಮ್ಮದಿ ಸಿಗುತ್ತೆ. ಜಪತಪದಿಂದ ಭಗವಂತನನ್ನು ಸಾಕ್ಷತ್ಕಾರಗೊಳಿಸಿಕೊಳ್ಳಬಹುದು ಅನ್ನೋ ನಂಬಿಕೆ ಅನಾದಿಕಾಲದಿಂದಲೂ ಇದೆ.

ಜಪ ಅನ್ನೋ ಈ ಎರಡು ಅಕ್ಷರಗಳ ಪದದ ಶಕ್ತಿಯನ್ನ ಸಿದ್ದರು, ಜ್ಞಾನಿಗಳು, ಸಾಧು ಸಂತರು, ಋಷಿಮುನಿಗಳು, ಅಪಾರ ದೈವ ಭಕ್ತರು ಅರಿತಿರುತ್ತಾರೆ. ಆದ್ದರಿಂದಲೇ ಅಂತಹವರು ಸದಾಕಾಲ ತಮ್ಮ ಇಷ್ಟದ ದೇವರನ್ನ ಜಪಿಸುತ್ತಿರುತ್ತಾರೆ. ಇನ್ನೂ ಜಪ ಮಾಡುವವರು ಸಾಮಾನ್ಯವಾಗಿ ಕೈಯಲ್ಲಿ ಮಾಲೆ ಹಿಡಿದು ಜಪ ಮಾಡುತ್ತಿರುತ್ತಾರೆ. ಹಾಗೆ ಕೈಯಲ್ಲಿ ಹಿಡಿದಿರುವ ಮಾಲೆಯನ್ನೇ ಜಪಮಾಲೆ ಅಂತಾ ಕರೆಯಲಾಗುತ್ತೆ. ಇಂತಹ ಜಪಮಾಲೆಯಲ್ಲಿ ಸಾಮಾನ್ಯವಾಗಿ 108 ಮಣಿಗಳು ಇರುತ್ತವೆ.

ಈ 108 ಜಪಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತದೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಜಪಮಾಲೆಯಲ್ಲಿ ಹಲವು ರೀತಿಯ ಜಪಮಾಲೆಗಳಿವೆ. ಒಂದೊಂದು ವಿಧದ ಜಪಮಾಲೆಯನ್ನ ಹಿಡಿದು ಜಪ ಮಾಡುವುದರಿಂದ ವಿವಿಧ ರೀತಿಯ ಫಲಗಳನ್ನು ಪಡೆಯಬಹುದು ಅಂತಾ ಪುರಾಣಗಳು ಹೇಳುತ್ತವೆ. ಹಾಗಿದ್ರೆ ಯಾವ ಯಾವ ಜಪಮಾಲೆಗಳಿಂದ ಜಪ ಮಾಡಿದ್ರೆ ಏನೆಲ್ಲಾ ಫಲಗಳನ್ನು ಪಡೆಯಬಹುದು? ಬನ್ನಿ ತಿಳಿಯೋಣ.

ಯಾವ ಜಪಮಾಲೆಯಿಂದ ಏನು ಪ್ರಯೋಜನ? 1.ತುಳಸಿಮಾಲೆ- ಬ್ರಹ್ಮಜ್ಞಾನ ದೊರೆಯುತ್ತೆ, ಮೋಕ್ಷ ಪ್ರಾಪ್ತಿಯಾಗುತ್ತೆ. 2.ರುದ್ರಾಕ್ಷಿಮಾಲೆ- ಸರ್ವ ಕಾರ್ಯಗಳು ಸಿದ್ಧಿಸುತ್ತವೆ. 3.ಕಮಲಾಕ್ಷಮಾಲೆ- ಆತ್ಮಜ್ಞಾನ ಪಡೆಯಬಹುದು. 4.ಪಗಡಮಾಲೆ- ಲೋಕವಶ್ಯ ಹೊಂದಬಹುದು. 5.ಸ್ಫಟಿಕಮಾಲೆ- ಸಾಮ್ರಾಜ್ಯ, ಸಂತಾನ ಪ್ರಾಪ್ತಿಯಾಗುತ್ತೆ. 6.ಮುತ್ತಿನಹಾರ- ವಿದ್ಯೆ ಪ್ರಾಪ್ತಿಯಾಗುತ್ತೆ. 7.ಮಾಣಿಕ್ಯಮಾಲೆ- ಸ್ತ್ರೀ ವಶೀಕರಣವಾಗಲಿದೆ. 8.ಮರಕತಮಾಲೆ- ಶತ್ರು ವಿನಾಶವಾಗಲಿದೆ. 9.ಪಾದರಸಮಾಲೆ- ಮೋಕ್ಷ ಪ್ರಾಪ್ತಿಯಾಗುತ್ತೆ. 10.ಬಂಗಾರ, ಬೆಳ್ಳಿಮಾಲೆ- ಐಶ್ವರ್ಯ ಪ್ರಾಪ್ತಿಯಾಗುತ್ತೆ.

ಹೀಗೆ ಒಂದೊಂದು ಜಪಮಾಲೆಯಿಂದ ಒಂದೊಂದು ಪ್ರಯೋಜನವಿದೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮನೋಕಾಮನೆಗಳನ್ನು ಈಡೇರಿಸಿಕೊಳ್ಳಲು ಅದಕ್ಕೆ ಸೂಕ್ತವಾದ ಜಪಮಾಲೆ ಹಿಡಿದು ಜಪ ಮಾಡಬಹುದು ಅಂತಾ ಹೇಳಲಾಗಿದೆ.

Follow us on

Most Read Stories

Click on your DTH Provider to Add TV9 Kannada