ನಮಸ್ಕಾರಕ್ಕೆ ಒಂದು ದೊಡ್ಡ ನಮಸ್ಕಾರ: ಹಿರಿಯರಿಗೆ ನಮಸ್ಕರಿಸಿದ್ದರೆ ಏನಾಗುತ್ತೆ?

ನಮಸ್ತೇ ಎಂಬ ಪದವು ನಮಸ್ಕಾರ ಪದಕ್ಕಿಂತ ಹೆಚ್ಚಿರುತ್ತದೆ. ಆದರೆ ನಮಸ್ತೇ ಎನ್ನುವ ಪದವನ್ನು ಎಲ್ಲ ಕಡೆ ಬಳಸಬಾರದು. ಸಂಸ್ಕೃತದ ಪ್ರಕಾರ ನಮಸ್ತೇ ಎಂದರೆ 'ನಿನಗೆ ನಮಸ್ಕಾರ' ಎಂದರ್ಥ. ಇದನ್ನು ಹಿರಿಯರಿಗೆ ಹೇಳುವಂತಿಲ್ಲ.

ನಮಸ್ಕಾರಕ್ಕೆ ಒಂದು ದೊಡ್ಡ ನಮಸ್ಕಾರ: ಹಿರಿಯರಿಗೆ ನಮಸ್ಕರಿಸಿದ್ದರೆ ಏನಾಗುತ್ತೆ?
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2023 | 6:00 AM

ಯಾರಾದರೂ ಸಿಗುವಾಗ ಮೊದಲು ಮಾಡುವುದು ನಮಸ್ಕಾರ (Namaskar). ಇದು ಭಾರತೀಯ ಕ್ರಮ. ಬೇರೆ ಕಡೆಗಳಲ್ಲಿ ಬೇರೆ ರೀತಿ ಇದೆ. ಭಾರತೀಯ ಪದ್ಧತಿಯಲ್ಲಿ ನಮಸ್ಕಾರವು ತ್ರಿಕರಣಪೂರ್ವಕವಾಗಿ ಇರುತ್ತದೆ ಅಥವಾ ಇರಬೇಕು ಎನ್ನುವುದು ನಿಯಮ. ನಮಸ್ಕಾರ ಎಂದಾಗ ಯಾರನ್ನು ನೀವು ನಮಸ್ಕರಿಸುವಿರೋ ಅವರ ಭಾವವು ನಿಮ್ಮ ಮನಸ್ಸಿನಲ್ಲಿ ಬರಬೇಕು, ದೇಹವು ಸ್ವಲ್ಪ ಭಾಗವೇಕು ಮತ್ತು ಎರಡು ಕೈಗಳು ಸೇರವೇಕು. ಹೀಗಾದಾಗ ನಮಸ್ಕಾರವು ಪೂರ್ಣವಾಯಿತು ಎಂದರ್ಥ.

ನಮಸ್ತೇ ಬೇಡ, ನಮಸ್ಕಾರವಿರಲಿ

ನಮಸ್ತೇ ಎಂಬ ಪದವು ನಮಸ್ಕಾರ ಪದಕ್ಕಿಂತ ಹೆಚ್ಚಿರುತ್ತದೆ. ಆದರೆ ನಮಸ್ತೇ ಎನ್ನುವ ಪದವನ್ನು ಎಲ್ಲ ಕಡೆ ಬಳಸಬಾರದು. ಸಂಸ್ಕೃತದ ಪ್ರಕಾರ ನಮಸ್ತೇ ಎಂದರೆ ‘ನಿನಗೆ ನಮಸ್ಕಾರ’ ಎಂದರ್ಥ. ಇದನ್ನು ಹಿರಿಯರಿಗೆ ಹೇಳುವಂತಿಲ್ಲ. ಒಮ್ಮೆ ಹೇಳಿದರೆ ಮುಂದಿನ ಮಾತನ್ನು ಏಕವಚನದಲ್ಲಿಯೇ ಮುಂದುವರಿಸಬೇಕಾಗುತ್ತದೆ. ಅದು ಅಸಾಧ್ಯವಾದ ಕಾರಣ ನಮಸ್ತೇ ಎನ್ನುವುದನ್ನು ಬಿಟ್ಟು, “ನಮಸ್ಕಾರ’ ಮಾಡಬೇಕು. ಇದು ಎಲ್ಲರಿಗೂ ಹೇಳಬಹುದಾದದ್ದು ಆಗಿದೆ.

ಇದನ್ನೂ ಓದಿ: sleeping: ರಾತ್ರಿ ಮಲಗುವಾಗ ನಿಮ್ಮ ತಲೆ ಸರಿಯಾಗಿ ಇರಲಿ!

ನಮಃ ಎನ್ನುವುದು ಸಂಸ್ಕೃತಪದವಾಗಿದ್ದು ಇದಕ್ಕೆ ಬಾಗುವುದು ಎನ್ನುವ ಅರ್ಥವೇ ಇದೆ. ಣಮು – ಪ್ರಹ್ವತ್ವೇ ಎಂದರ್ಥ. ತ್ರಿಕರಣಗಳನ್ನು ಭಾಗಿಸದ ಹೊರತೂ ನಮಸ್ಕಾರ ಪೂರ್ಣವಾಗದು.

ಯಾರಿಗೆ ನಮಸ್ಕಾರ ಮಾಡೋಣ?

ಎಲ್ಲರೂ ಎಲ್ಲರಿಗೂ ನಮಸ್ಕಾರವನ್ನು ಮಾಡಬಾರದು. ಇದು ಭಾರತದ ಕ್ರಮವಲ್ಲ. ಹಿರಿಯರು ಕಿರಿಯರಿಗೆ ನಮಸ್ಕರಿಸಬಾರದು. ಹಿಂದಿನಿಂದ ಬಂದ ಪದ್ಧತಿ. ಹಿರಿಯರು ಕಿರಿಯರಿಗೆ ಸ್ಥಾನದಿಂದ ಗೌರವ ಕೊಡಬಹುದು. ಕುಲಪುರೋಹಿತರು ಯಜಮಾನನಿಗಿಂತ ಚಿಕ್ಕವರಿದ್ದರೂ ನಮಸ್ಕರಿಸಬಹುದು. ರಾಜನು ಪ್ರಜೆಗಳಿಗಿಂತ ಸಣ್ಣವನಿದ್ದರೂ ನಮಸ್ಕಾರಕ್ಕೆ ಅರ್ಹನು. ಗುರುವೂ ಕೂಡ ನಮಸ್ಕಾರಕ್ಕೆ ಅರ್ಹನಾಗುತ್ತಾನೆ. ವಿದ್ಯಾವಂತನಿಗೆ ಇನ್ನೊಬ್ಬ ವಿದ್ಯಾವಂತ ನಮಸ್ಕರಿಸಬಹುದು.‌ ಇಲ್ಲೆಲ್ಲ ಕಡೆ ವಯಸ್ಸು ಮುಖ್ಯವಲ್ಲ, ಸ್ಥಾನ ಹಾಗೂ ವಿದ್ಯೆಗೆ ಸಿಗುವ ಗೌರವವಾಗಿರುತ್ತದೆ.

ದಕ್ಷಿಣಾಮೂರ್ತಿಯನ್ನು ವರ್ಣಿಸುವಾಗ ಇದೇ ಕ್ರಮವಿದೆ. ದಕ್ಷಿಣಾಮೂರ್ತಿಯು ಗುರುವಾಗಿದ್ದಾನೆ, ಉಳಿದವರು ಶಿಷ್ಯರು. ಇಲ್ಲಿ ವೃದ್ಧರು ಶಿಷ್ಯರಾದರೆ ಯುವಕನಾದ ದಕ್ಷಿಣಾಮೂರ್ತಿಯು ಗುರುವಾಗಿದ್ದಾನೆ. ಹೀಗೆ ಸ್ಥಾನದಿಂದ ಗೌರವವನ್ನು, ನಮಸ್ಕಾರವನ್ನು ಕೊಡಬಹುದು. ಅದನ್ನು ಬಿಟ್ಟು ಯಾವ ಕಿರಿಯರಿಗೂ ನಮಸ್ಕರಿಸಬಾರದು. ಒಮ್ಮೆ ನಮಸ್ಕರಿಸಿದರೆ ಸಣ್ಣವರ ಆಯುಸ್ಸು ಕಡಿಮೆಯಾಗುತ್ತದೆ. ಹಾಗಾಗಿ ಕಿರಿಯರು ಮಾತ್ರ ಹಿರಿಯರಿಗೆ ನಮಸ್ಕರಿಸಬಹುದು.

ಇದನ್ನೂ ಓದಿ: Temple: ದೇವಾಲಯದ ದೇವರೆದುರಿನ ಗಂಟೆ ಏನಾದರೂ ಹೇಳುವುದುಂಟೇ..?

ಏನಾಗುತ್ತದೆ ಹಿರಿಯರಿಗೆ ನಮಸ್ಕರಿಸಿದರೆ?

ನಾಲ್ಕು ಗುಣಗಳ ವೃದ್ಧಿಯು ವೃದ್ಧರಿಗೆ ಅಥವಾ ಹಿರಿಯರಿಗೆ ನಮಸ್ಕರಿಸುವುದರಿಂದ ಆಗುತ್ತದೆ.

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ | ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋ ಬಲಮ್ ||

ಆಯುಸ್ಸು, ವಿದ್ಯೆ, ಯಶಸ್ಸು ಮತ್ತು ಬಲವು ವೃದ್ಧರಿಗೆ, ಹಿರಿಯರಿಗೆ ನಮಸ್ಕರಿಸುವುದರಿಂದ ಬರುತ್ತದೆ.

ನಮಸ್ಕಾರವು ಸಂಸ್ಕಾರದ ಪ್ರತೀಕ.‌ ನಮ್ಮ ನಮಸ್ಕಾರಗಳು ನಮ್ಮ ನಡತೆಯನ್ನು ಪರಿಚಯಿಸುತ್ತದೆ. ಇಂತಹ ನಮಸ್ಕಾರವದಲ್ಲಿ ಇನ್ನೂ ವಿಧಾನಗಳಿವೆ. ಇದನ್ನೆಲ್ಲ ಕೇಳಿದರೆ ನಮಸ್ಕಾರಕ್ಕೆ ದೊಡ್ಡ ನಮಸ್ಕಾರ ಮಾಡಬಹುದು.

ಅಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ