AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zodiac sign: ಈ ಮೂರು ರಾಶಿಯ ಜನ ಸದಾ ಶಾಂತಚಿತ್ತರಾಗಿರುತ್ತಾರೆ! ಆ ರಾಶಿಗಳು ಯಾವುವು?

ಮೀನ ರಾಶಿಯವರು ಮಜಾ ಸ್ವಭಾವದವರಾಗಿರುತ್ತಾರೆ. ಶಾಂತ ಸ್ವಭಾವ ಹೊಂದಿರುತ್ತಾರೆ. ಜೀವನದಲ್ಲಿ ಮೀನ ರಾಶಿಯವರು ಸದಾ ಸಂತೋಷಿಗಳು. ವ್ಯರ್ಥಾಲಾಪ, ಅಥವಾ ಒಣ ಚರ್ಚೆ ಅಥವಾ ಜಗಳ ಕಾಯುವುದರಲ್ಲಿ ಇವರಿಗೆ ಆಸಕ್ತಿಯೇ ಇರುವುದಿಲ್ಲ. ಹಾಗಾಗಿಯೇ ಇವರು ಕೋಪಗೊಳ್ಳುವುದಿಲ್ಲ. ಶಾಂತ ಜೀವನ ಇವರದ್ದಾಗಿರುತ್ತದೆ.

Zodiac sign: ಈ ಮೂರು ರಾಶಿಯ ಜನ ಸದಾ ಶಾಂತಚಿತ್ತರಾಗಿರುತ್ತಾರೆ! ಆ ರಾಶಿಗಳು ಯಾವುವು?
Zodiac sign: ಈ ಮೂರು ರಾಶಿಯ ಜನ ಸದಾ ಶಾಂತಚಿತ್ತರಾಗಿರುತ್ತಾರೆ! ಆ ರಾಶಿಗಳು ಯಾವುವು?
TV9 Web
| Edited By: |

Updated on: Nov 14, 2021 | 7:20 AM

Share

ಯಾರೇ ಆಗಲಿ ತಮ್ಮ ರಾಶಿಯಲ್ಲಿ ಅಡಕವಾಗಿರುವ ಗುಣವಿಶೇಷಗಳಿಗೆ ಅನುಸಾರವಾಗಿಯೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಯಾವುದೇ ರಾಶಿಯವರಲ್ಲಾಗಲಿ ಅವರಲ್ಲಿ ಅನೇಕ ಗುಣ, ಅವಗುಣಗಳು ಇರುತ್ತವೆ. ಇವುಗಳ ಆಧಾರದ ಮೇಲೆಯೇ ಅವರು ಜನರ ಮಧ್ಯೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಈ ಮೂರು ರಾಶಿಯ ಜನ ಜೀವನದಲ್ಲಿ ಹೆಚ್ಚು ಶಾಂತಚಿತ್ತರಾಗಿರುತ್ತಾರೆ! ಶಾಂತ ಸ್ವಭಾವವಾಗಿರುವುದು ತುಂಬಾನೇ ಮುಖ್ಯ. ಯಾವುದೇ ಕೆಲಸ ಕಾರ್ಯ ಮಾಡಲು ಶಾಂತ ಮನಸ್ಸಿನಿಂದ ಮಾಡಬೇಕಾಗುತ್ತದೆ. ಯಾವುದೇ ಸಂಬಂಧವನ್ನು ಸ್ಥಿರವಾಗಿ ಉಳಿಸಿಕೊಳ್ಳಬೇಕು ಅಂತಾದರೆ ಆ ಸಂಬಂಧದವರ ಜೊತೆಗೆ ಸದಾ ಶಾಂತವಾಗಿ ವರ್ತಿಸಬೆಕಾಗುತ್ತದೆ.

ಯಾವುದೇ ಪರಿಸ್ಥಿತಿಯನ್ನು ಕೋಪಗೊಂಡು, ನಿಮ್ಮ ಮೇಲಿನ ನಿಯಂತ್ರಣವನ್ನು ನೀವೇ ಕಳೆದುಕೊಳ್ಳುವುದು ಮತ್ತು ಆಲೋಚನೆಯಿಲ್ಲದೆ ಅಸಭ್ಯವಾಗಿ ಸ್ಪಂದಿಸುವುದು ಮಾಡಿದಾಗ ಸಂಬಂಧ ಹದಗೆಡುತ್ತದೆ. ಹಾಗೆ ಮಾಡುವುದು ಸಲೀಸಾಗಿರುತ್ತದೆ. ಆದರೆ ಅದನ್ನು ನಿಗ್ರಹಿಸಿಕೊಂಡು ಶಾಂತವಾಗಿ ವರ್ತಿಸುವುದು ಕಷ್ಟವೇ ಸರಿ. ಆದರೆ ಹಾಗೆ ಶಾಂತವಾಗಿ ವರ್ತಿಸಿದಾಗಷ್ಟೇ ಜೀವನ ಮಧುರವೆನಿಸುತ್ತದೆ. ನಮ್ಮಲ್ಲಿ ಕೆಲವರು ಇರುತ್ತಾರೆ- ಚಿಕ್ಕ ಚಿಕ್ಕ ವಿಷಯಗಳಿಗೂ ಕೋಪ್ರೋದ್ರಿಕ್ತರಾಗುತ್ತಿರುತ್ತಾರೆ. ಜಗಳ ಕಾಯುವ ಸ್ವಭಾವದವರಾಗಿರುತ್ತಾರೆ. ಇದರಿಂದ ನಮ್ಮ ಸಂಬಂಧಗಳ ಮುರಿದುಬೀಳುತ್ತವೆಯೇ ವಿನಃ ಇನ್ನೇನೂ ಸಾಧನೆಯಾಗದು. ಹಾಗಾಗಿಯೇ ಎಚ್ಚರ, ಜೀವನದಲ್ಲಿ ಶಾಂತವಾಗಿರುವುದು ತುಂಬಾ ಜರೂರಾಗಿರುತ್ತದೆ ತಿಳಿದುಕೊಳ್ಳಿ.

ಕೋಪಗೊಳ್ಳುವ ಪ್ರಸಂಗ ಬಂದಾಗ ನಿಮ್ಮ ಮೇಲೆ ನೀವೇ ಹತೋಟಿ ಸಾಧಿಸಿ, ಶಾಂತವಾಗಿದ್ದುಬಿಟ್ಟರೆ ಮುಂದಿನದೆಲ್ಲ ಸುಂದರವಾಗಿರುತ್ತದೆ. ಆದರೆ ಬಹುತೇಕ ಜನರು ಶಾಂತಸ್ವಭಾವದವರಾಗಿರುವುದಿಲ್ಲ. ಕೆಲವರಷ್ಟೇ ಹಿಮಾಲಯದಷ್ಟು ಶಾಂತತೆ ತೋರುತ್ತಾರೆ. ಅವರು ಯಾವ ರಾಶಿಯವರು ಅರಿಯೋಣ ಬನ್ನೀ.

ಕುಂಭ ರಾಶಿ (Aquarius): ಕುಂಭ ರಾಶಿಯವರು ನಿಜಕ್ಕೂ ಬುದ್ಧಿವಂತರು. ಅವರು ಪರಿಸ್ಥಿತಿಗಳನ್ನು ಹೇಗೆ ಸಂಭಾಳಿಸಬೇಕು ಎಂಬುದನ್ನು ಅರಿತಿರುತ್ತಾರೆ. ಶಾಂತಿಯಿಂದ ಸಮಚಿತ್ತದಿಂದ ಪರಿಸ್ಥಿತಿ ನಿಭಾಯಿಸಿದರೆ ಜೀವನ ಒಂದು ಹೂವನ್ನು ಎತ್ತಿಟ್ಟಷ್ಟು ಸಲೀಸು ಎಂಬುದನ್ನು ಅವರು ಅರಿತಿರುತ್ತಾರೆ. ಕುಂಭ ರಾಶಿಯವರು ಅಷ್ಟು ಸುಲಭವಾಗಿ ನೀವು ಕ್ರೋಪೋದ್ರಿಕ್ತರನ್ನಾಗಿಸಲು ಆಗದು.

ಸಿಂಹ ರಾಶಿ (Leo): ಸಿಂಹ ರಾಶಿಯವರನ್ನು ಉಗ್ರರು, ನಿರ್ಭೀಡೆಯವರು, ಸಾಹಸಿಗಳು ಎಂದು ಪರಿಗಣಿಸಲಾಗುತ್ತದೆ. ಆರೆ ಅದರ ಹಿಂದೆ ಒಂದು ಶಾಂತ ಸ್ವಭಾವ ಅಡಗಿರುತ್ತದೆ ಎಂಬುದನ್ನು ನಾವು ಕಾಣಬೇಕು. ಅದರಿಂದಲೇ ಎಲ್ಲರೂ ಅವರತ್ತ ಆಕರ್ಷಿತರಾಗಿರುತ್ತಾರೆ. ಇವರಿಗೆ ಕೋಪ ಬರುತ್ತದೆಯಾದರೂ ಅದು ಕ್ಷಣಿಕವಷ್ಟೇ.

ಮೀನ ರಾಶಿ (Pisces): ಮೀನ ರಾಶಿಯವರು ಮಜಾ ಸ್ವಭಾವದವರಾಗಿರುತ್ತಾರೆ. ಶಾಂತ ಸ್ವಭಾವ ಹೊಂದಿರುತ್ತಾರೆ. ಜೀವನದಲ್ಲಿ ಮೀನ ರಾಶಿಯವರು ಸದಾ ಸಂತೋಷಿಗಳು. ವ್ಯರ್ಥಾಲಾಪ, ಅಥವಾ ಒಣ ಚರ್ಚೆ ಅಥವಾ ಜಗಳ ಕಾಯುವುದರಲ್ಲಿ ಇವರಿಗೆ ಆಸಕ್ತಿಯೇ ಇರುವುದಿಲ್ಲ. ಹಾಗಾಗಿಯೇ ಇವರು ಕೋಪಗೊಳ್ಳುವುದಿಲ್ಲ. ಶಾಂತ ಜೀವನ ಇವರದ್ದಾಗಿರುತ್ತದೆ.

(Aquarius Leo Pisces zodiac people are more calm know your zodiac sign)