ಕರ್ಪೂರ ಬದಲಾಯಿಸಬಹುದು ನಿಮ್ಮ ಅದೃಷ್ಟ; ಈ ಜ್ಯೋತಿಷ್ಯ ಪರಿಹಾರಗಳಿಂದ ಕಷ್ಟಗಳು ಮಾಯ!
ಹಿಂದೂ ಧರ್ಮದಲ್ಲಿ ಕರ್ಪೂರ ಪೂಜೆಯ ಅವಿಭಾಜ್ಯ ಅಂಗ. ವಾಸ್ತು ಶಾಸ್ತ್ರದ ಪ್ರಕಾರ, ಕರ್ಪೂರವನ್ನು ಸರಿಯಾಗಿ ಬಳಸುವುದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗಿ, ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಇದು ರಾಹು-ಕೇತು ದೋಷ, ಆರ್ಥಿಕ ಸಮಸ್ಯೆಗಳು, ಕುಟುಂಬ ಕಲಹ ಮತ್ತು ದೃಷ್ಟಿ ದೋಷಗಳನ್ನು ನಿವಾರಿಸಿ, ಮನೆಯಲ್ಲಿ ಶಾಂತಿ, ಸಂಪತ್ತು ಮತ್ತು ಮಾನಸಿಕ ನೆಮ್ಮದಿ ತರುತ್ತದೆ. ಕರ್ಪೂರದ ಈ ಸರಳ ಪರಿಹಾರಗಳಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು.

ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಪೂಜೆ-ಪುನಸ್ಕಾರಗಳ ಅತ್ಯಗತ್ಯ ಭಾಗವೆಂದು ಪರಿಗಣಿಸಲಾಗಿದೆ. ದೇವಸ್ಥಾನಗಳಿಂದ ಹಿಡಿದು ಮನೆಯಲ್ಲಿ ಮಾಡುವ ದೈನಂದಿನ ಆರತಿಯವರೆಗೆ ಕರ್ಪೂರವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಕರ್ಪೂರ ಕೇವಲ ಪರಿಮಳವನ್ನು ಬೀರುವುದಷ್ಟೇ ಅಲ್ಲ, ಸರಿಯಾದ ಕ್ರಮದಲ್ಲಿ ಬಳಸಿದರೆ ಮನೆಯಲ್ಲಿರುವ ವಾಸ್ತು ದೋಷಗಳನ್ನು ನಿವಾರಿಸಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಇದು ಅತ್ಯಂತ ಸಹಕಾರಿಯಾಗಿದೆ.
ರಾಹು-ಕೇತು ದೋಷ ಮತ್ತು ನಕಾರಾತ್ಮಕ ಶಕ್ತಿ ನಿವಾರಣೆಗೆ:
ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ, ಜಾತಕದಲ್ಲಿ ರಾಹು-ಕೇತುಗಳ ಅಶುಭ ಪ್ರಭಾವವಿದ್ದರೆ ಜೀವನದಲ್ಲಿ ಹಠಾತ್ ಸಮಸ್ಯೆಗಳು ಮತ್ತು ಕೆಲಸ-ಕಾರ್ಯಗಳಲ್ಲಿ ಅನಾವಶ್ಯಕ ಅಡೆತಡೆಗಳು ಎದುರಾಗುತ್ತವೆ. ಇದರಿಂದ ಮುಕ್ತಿ ಪಡೆಯಲು ಶನಿವಾರದ ಸಂಜೆ ಅಥವಾ ರಾತ್ರಿ ವೇಳೆ ಕರ್ಪೂರದ ತುಂಡನ್ನು ದೇಶಿ ತುಪ್ಪದಲ್ಲಿ ಅದ್ದಿ ಹಚ್ಚಬೇಕು. ಇದರ ಧೂಪದ ಹೊಗೆ ಮನೆಯಲ್ಲಿರುವ ನಕಾರಾತ್ಮಕತೆ ದೂರಾಗಿ, ದುಃಸ್ವಪ್ನಗಳು ಹಾಗೂ ಕೆಲಸದ ಅಡಚಣೆಗಳಿಂದ ಮುಕ್ತಿ ದೊರೆಯುತ್ತದೆ.
ಆರ್ಥಿಕ ಮುಗ್ಗಟ್ಟು ಮತ್ತು ಧನ ನಷ್ಟ ತಡೆಯಲು:
ಮನೆಯಲ್ಲಿ ಹಣ ನಿಲ್ಲುತ್ತಿಲ್ಲ ಅಥವಾ ಖರ್ಚುಗಳು ವಿಪರೀತವಾಗಿ ಹೆಚ್ಚುತ್ತಿವೆ ಎನ್ನುವವರು ರಾತ್ರಿಯ ವೇಳೆ ಒಂದು ಚಿಕ್ಕ ಬಟ್ಟಲಿನಲ್ಲಿ ಕರ್ಪೂರದ ತುಂಡು ಮತ್ತು ಎರಡು ಲವಂಗವನ್ನು ಹಾಕಿ ಬೆಳಗಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಈ ಸರಳ ಉಪಾಯದಿಂದ ಆರ್ಥಿಕ ಬಿಕ್ಕಟ್ಟುಗಳು ಕ್ರಮೇಣ ಕಡಿಮೆಯಾಗಿ, ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ.
ಕುಟುಂಬದಲ್ಲಿ ಶಾಂತಿ ಹಾಗೂ ಮಾನಸಿಕ ನೆಮ್ಮದಿಗಾಗಿ:
ಮನೆಯಲ್ಲಿ ಆಗಾಗ ಕಿರಿಕಿರಿ, ಕಲಹ ಅಥವಾ ಮಾನಸಿಕ ಅಶಾಂತಿ ಉಂಟಾಗುತ್ತಿದ್ದರೆ, ಬೆಳಿಗ್ಗೆ ಮತ್ತು ಸಂಜೆ ಪೂಜೆಯ ಸಮಯದಲ್ಲಿ ಕರ್ಪೂರವನ್ನು ಹಚ್ಚಿ ಆರತಿ ಬೆಳಗಿ. ನಂತರ ಅದರ ಸುವಾಸನೆಯನ್ನು ಇಡೀ ಮನೆಗೆ ಹರಡುವಂತೆ ಮಾಡಿ. ಹೀ ಮಾಡುವುದರಿಂದ ಮನೆಯ ವಾತಾವರಣ ಶಾಂತಿಯುತವಾಗಿರುವುದಲ್ಲದೆ, ಕುಟುಂಬ ಸದಸ್ಯರ ನಡುವೆ ಪರಸ್ಪರ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.
ಇದನ್ನೂ ಓದಿ: ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ? ಹಾಗಾದರೆ ಈ 9 ಗಂಟುಗಳ ನಿಯಮ ಮತ್ತು ಶುಭ ಸಮಯದ ಬಗ್ಗೆ ತಪ್ಪದೇ ತಿಳಿದುಕೊಳ್ಳಿ
ಹಣ ವಾಪಸ್ ಪಡೆಯಲು ಮತ್ತು ಆದಾಯ ವೃದ್ಧಿಗೆ:
ಎಷ್ಟೇ ಸಂಪಾದಿಸಿದರೂ ಉಳಿತಾಯ ಮಾಡಲು ಸಾಧ್ಯವಾಗದಿದ್ದರೆ, ಸೋಮವಾರದ ದಿನದಂದು ಸ್ವಲ್ಪ ಕರ್ಪೂರದೊಂದಿಗೆ ಅಲ್ಪ ಪ್ರಮಾಣದ ದಾಲ್ಚಿನ್ನಿಯನ್ನು ಸೇರಿಸಿ ಸುಡಬೇಕು. ಈ ಉಪಾಯದಿಂದ ಆರ್ಥಿಕ ಅಭಿವೃದ್ಧಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ ಮತ್ತು ಹಣಕಾಸಿನ ಸಮಸ್ಯೆಗಳು ದೂರಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ.
ದೃಷ್ಟಿ ದೋಷ ಹಾಗೂ ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು:
ಮನೆಯಲ್ಲಿ ಪದೇ ಪದೇ ಸಂಕಷ್ಟಗಳು ಎದುರಾಗುತ್ತಿದ್ದರೆ ಅಥವಾ ದೃಷ್ಟಿ ದೋಷದ ಭೀತಿಯಿದ್ದರೆ, ಗುರುವಾರದಂದು ಕರ್ಪೂರದೊಂದಿಗೆ ಒಣಗಿದ ತೇಜಪತ್ತೆ (ಬಿರಿಯಾ ಎಲೆ) ಹಾಕಿ ಸುಡಬೇಕು. ಇದರ ಹೊಗೆಯನ್ನು ಮನೆಯ ಮುಖ್ಯ ದ್ವಾರ ಹಾಗೂ ಕಿಟಕಿಗಳ ಬಳಿ ತೋರಿಸುವುದರಿಂದ ನಕಾರಾತ್ಮಕ ಶಕ್ತಿಗಳು ತೊಲಗಿ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನೆಲೆಸುತ್ತದೆ.
(ಸೂಚನೆ: ಈ ಮೇಲಿನ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ವಾಸ್ತು ಶಾಸ್ತ್ರದ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.)
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




