AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಶನಿ ರೇವತಿ ನಕ್ಷತ್ರಕ್ಕೆ ಪ್ರವೇಶ; ಯಾವ ರಾಶಿಗೆ ಶುಭ ಮತ್ತು ಯಾರಿಗೆ ಅಶುಭ?

ಶನಿ ಭಗವಾನರು ರೇವತಿ ನಕ್ಷತ್ರ ಪ್ರವೇಶ ಮಾಡಿದ್ದಾರೆ. ಇದು ಬುಧನ ನಕ್ಷತ್ರವಾಗಿದ್ದು, ಶನಿ ಸಂಚಾರವು ದ್ವಾದಶ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಮೇಷಕ್ಕೆ ನಿಧಾನ ಗತಿ, ವೃಷಭಕ್ಕೆ ಅದೃಷ್ಟ, ಮಿಥುನಕ್ಕೆ ವೃತ್ತಿ ಪ್ರಗತಿ, ಕರ್ಕಾಟಕಕ್ಕೆ ಆಸ್ತಿ ಲಾಭ, ಸಿಂಹಕ್ಕೆ ಚೇತರಿಕೆ, ಕನ್ಯಾ ರಾಶಿಗೆ ವಿವಾಹ ಯೋಗ, ತುಲಾಕ್ಕೆ ಋಣಮುಕ್ತಿ, ವೃಶ್ಚಿಕಕ್ಕೆ ಮಕ್ಕಳಿಂದ ಶುಭ, ಧನುಸ್ಸಿಗೆ ಗೃಹ ಯೋಗ, ಮಕರಕ್ಕೆ ಅದೃಷ್ಟ, ಕುಂಭಕ್ಕೆ ವ್ಯಾಪಾರ ವೃದ್ಧಿ ಹಾಗೂ ಮೀನಕ್ಕೆ ಮಾನಸಿಕ ಶಾಂತಿ ತರುತ್ತದೆ.

Daily Devotional: ಶನಿ ರೇವತಿ ನಕ್ಷತ್ರಕ್ಕೆ ಪ್ರವೇಶ; ಯಾವ ರಾಶಿಗೆ ಶುಭ ಮತ್ತು ಯಾರಿಗೆ ಅಶುಭ?
ಶನಿ ರೇವತಿ ನಕ್ಷತ್ರ ಪ್ರವೇಶImage Credit source: Pinterest
ಅಕ್ಷತಾ ವರ್ಕಾಡಿ
|

Updated on:May 27, 2026 | 8:34 AM

Share

ಕರ್ಮಕಾರಕ ಹಾಗೂ ನ್ಯಾಯಾಧೀಶರೆನಿಸಿರುವ ಶನಿ ಭಗವಾನರ ಸಂಚಾರದ ಕುರಿತು ಇಡೀ ಬ್ರಹ್ಮಾಂಡವೇ ಗಮನ ಹರಿಸುತ್ತದೆ. ಅಷ್ಟಮ ಶನಿ, ಅರ್ಧಾಷ್ಟಮ ಶನಿ, ಸಾಡೆಸಾತಿ ಅಥವಾ ಪಂಚಮ ಶನಿ ಯಾವುದೇ ಇರಲಿ, ಶನಿಯ ದೃಷ್ಟಿ ಮತ್ತು ಸ್ಥಾನ ಪ್ರತಿಯೊಬ್ಬರ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ ಶನಿ ಭಗವಾನರು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಮೇಷ ರಾಶಿಯವರಿಗೆ ಸಾಡೆಸಾತಿ, ಮೀನ ರಾಶಿಯವರಿಗೆ ಗರ್ಭ ಸಾಡೆಸಾತಿ ಹಾಗೂ ಕುಂಭ ರಾಶಿಯವರಿಗೆ ಕಟ್ಟಕಡೆಯ ಸಾಡೆಸಾತಿ ನಡೆಯುತ್ತಿದೆ.

ಶನಿ ಭಗವಾನರು 2026ರ ಮೇ 17ರಂದು ಮಧ್ಯಾಹ್ನ 3 ಗಂಟೆ 49 ನಿಮಿಷಕ್ಕೆ ರೇವತಿ ನಕ್ಷತ್ರ ಪ್ರವೇಶ ಮಾಡಿದ್ದಾರೆ. ರೇವತಿ ನಕ್ಷತ್ರವು ಬುಧನ ನಕ್ಷತ್ರವಾಗಿದೆ. ಆಶ್ಲೇಷ, ರೇವತಿ, ಜೇಷ್ಠ ನಕ್ಷತ್ರಗಳು ಬುಧನ ನಕ್ಷತ್ರಗಳಾಗಿವೆ. ಈ ರೇವತಿ ನಕ್ಷತ್ರದಲ್ಲಿ ಶನಿಯ ಸಂಚಾರವು ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಶನಿ ಭಗವಾನರು 2026ರ ಜುಲೈ 27ರಂದು ವಕ್ರಿ ಆಗುತ್ತಾರೆ. ನಂತರ ಅಕ್ಟೋಬರ್ 9 ರಂದು ಉತ್ತರಾಭಾದ್ರಕ್ಕೆ ಬರುತ್ತಾರೆ. ಬಳಿಕ ಫೆಬ್ರವರಿ 8ರಂದು ಮತ್ತೆ ರೇವತಿಗೆ ಹಿಂತಿರುಗಿ, ಜೂನ್ 3ರಂದು ಮೀನಾ ರಾಶಿಯನ್ನು ಸಂಪೂರ್ಣವಾಗಿ ಬಿಟ್ಟು ಮೇಷ ರಾಶಿಗೆ ಪ್ರವೇಶಿಸುತ್ತಾರೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ದ್ವಾದಶ ರಾಶಿಗಳ ಮೇಲೆ ರೇವತಿ ನಕ್ಷತ್ರದಲ್ಲಿ ಶನಿಯ ಪ್ರಭಾವ:

  • ಮೇಷ ರಾಶಿ: ಇದು 12ನೇ ಮನೆಯಾಗಿದ್ದು, ಕಾರ್ಯಗಳಲ್ಲಿ ನಿಧಾನ ಗತಿ ಇರುತ್ತದೆ. ಅತಿ ಬುದ್ಧಿಯನ್ನು ಉಪಯೋಗಿಸಬೇಕಾಗುತ್ತದೆ. ಮನೆಯಲ್ಲಿ ಕುಳಿತುಕೊಂಡರೆ ನಷ್ಟವಾಗಬಹುದು. ಪ್ರಯತ್ನಕ್ಕೆ ತಕ್ಕ ಫಲ ನಿರೀಕ್ಷಿಸಬಹುದು. ದಶಾಭುಕ್ತಿಗಳಿಗೆ ಅನುಗುಣವಾಗಿ ಸಾಡೆಸಾತಿಯ ಮೊದಲ ಭಾಗದಲ್ಲಿ ಲಾಭ, ನಷ್ಟ ಅಥವಾ ಮಧ್ಯಮ ಫಲ ಇರುತ್ತದೆ.
  • ವೃಷಭ ರಾಶಿ: ರೇವತಿ ನಕ್ಷತ್ರದಿಂದ ಅದೃಷ್ಟವೇ ಅದೃಷ್ಟ. ಎಲ್ಲವೂ ಶುಭಕರವಾಗಿರುತ್ತದೆ.
  • ಮಿಥುನ ರಾಶಿ: ವೃತ್ತಿಯಲ್ಲಿ ಬಡ್ತಿ ದೊರೆಯುತ್ತದೆ. ಕೆಲಸ ಕಾರ್ಯಗಳನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ. ಶುಭ ಫಲಗಳನ್ನು ಕಾಣುವಿರಿ.
  • ಕರ್ಕಾಟಕ ರಾಶಿ: ಆಸ್ತಿ ಕಲಹ ನಿವಾರಣೆಯಾಗಿ ತಂದೆ-ತಾಯಿ ಅಥವಾ ಪೂರ್ವಿಕರ ಆಸ್ತಿಯ ವಿಚಾರದಲ್ಲಿ ಶುಭವಾಗುತ್ತದೆ. ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯ. ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ ಮತ್ತು ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವಿರಿ.
  • ಸಿಂಹ ರಾಶಿ: ಅಷ್ಟಮ ಶನಿಯಿಂದ ಚೇತರಿಸಿಕೊಳ್ಳುವ ಕಾಲವಿದು. ಗುರು ದೃಷ್ಟಿ ಇರುವುದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಶುಭ. ಕೀರ್ತಿ ಪ್ರತಿಷ್ಠೆಗಳು ಹೆಚ್ಚುತ್ತವೆ. ಧರ್ಮ ಕಾರ್ಯಗಳಲ್ಲಿ ಭಾಗವಹಿಸುವಿರಿ. ನಂಬಿಕೆ ಗಟ್ಟಿಯಾಗಿಟ್ಟುಕೊಳ್ಳಿ.
  • ಕನ್ಯಾ ರಾಶಿ: ಸಪ್ತಮ ಸ್ಥಾನದಲ್ಲಿ ರೇವತಿ ನಕ್ಷತ್ರದಲ್ಲಿ ಶನಿ ಸಂಚಾರದಿಂದ ವಿವಾಹ ವಿಷಯಗಳಲ್ಲಿ ಶುಭವಾಗುತ್ತದೆ. ಒಳ್ಳೆಯ ಸ್ನೇಹಿತರು ಸಿಗುತ್ತಾರೆ. ಅತಿಯಾದ ಹೂಡಿಕೆ ಶುಭಕರವಲ್ಲ.
  • ತುಲಾ ರಾಶಿ: ಶಷ್ಟ ಸ್ಥಾನ, ರೋಗ ಸ್ಥಾನ, ಋಣ ಸ್ಥಾನದಲ್ಲಿ ಶನಿ ಸಂಚಾರ ಮಾಡುತ್ತಿದ್ದರೂ, ರೇವತಿ ನಕ್ಷತ್ರಕ್ಕೆ ಬಂದಾಗ ಅತ್ಯಂತ ಶುಭ ಕಾಲ. ಋಣಮುಕ್ತರಾಗುತ್ತೀರಿ. ಕಾನೂನು ವಿಷಯಗಳಲ್ಲಿ ಮತ್ತು ಭೂಮಿಯಿಂದ ಲಾಭ.
  • ವೃಶ್ಚಿಕ ರಾಶಿ: ಪಂಚಮ ಸ್ಥಾನದಲ್ಲಿರುವುದರಿಂದ ಮಕ್ಕಳಿಂದ ಶುಭವಾಗುತ್ತದೆ. ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಅವರೊಂದಿಗೆ ಅನ್ಯೋನ್ಯತೆ ಇರುತ್ತದೆ. ಆರೋಗ್ಯದಲ್ಲಿ ಚೇತರಿಕೆ.
  • ಧನು ರಾಶಿ: ಚತುರ್ಥ ಸ್ಥಾನದಲ್ಲಿ ಮನೆ ಯೋಗವಿರುತ್ತದೆ. ತಂದೆ-ತಾಯಿ ಅಥವಾ ತಾಯಿಯ ಆಶೀರ್ವಾದ ಪರಿಪೂರ್ಣವಾಗಿ ದೊರೆಯುತ್ತದೆ. ವಾಹನ ಖರೀದಿ, ವಿದ್ಯೆಯಲ್ಲಿ ಯಶಸ್ಸು, ಜವಾಬ್ದಾರಿ ಹೆಚ್ಚಳ ಮತ್ತು ಹಿರಿಯರ ಆಶೀರ್ವಾದ ಸಿಗುತ್ತದೆ.
  • ಮಕರ ರಾಶಿ: ಡಬಲ್ ಧಮಾಕ. ಬಹಳಷ್ಟು ಅದೃಷ್ಟವಿರುತ್ತದೆ. ಸಂಬಂಧಗಳು ಸುಧಾರಿಸುತ್ತವೆ. ವಿವಾಹ ವಿಷಯಗಳಲ್ಲಿ ಶುಭ. ಧೈರ್ಯ ಹೆಚ್ಚುತ್ತದೆ. ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವಿರಿ. ಅಧಿಕಾರ ಪ್ರಾಪ್ತಿ ಸಾಧ್ಯತೆ ಇದೆ.
  • ಕುಂಭ ರಾಶಿ: ದ್ವಿತೀಯ ಸ್ಥಾನದಲ್ಲಿ ಮಾರ್ಕೆಟಿಂಗ್ ಮತ್ತು ವ್ಯಾಪಾರದಲ್ಲಿ ಉತ್ತಮ. ಒಳ್ಳೆಯ ಅವಕಾಶಗಳು ಸಿಗುತ್ತವೆ. ವಿದೇಶ ಪ್ರಯಾಣ ಸಾಧ್ಯತೆ. ಗಂಡ-ಹೆಂಡತಿಯರ ಅನ್ಯೋನ್ಯತೆ ಹೆಚ್ಚುತ್ತದೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
  • ಮೀನ ರಾಶಿ: ಜನ್ಮ ರಾಶಿಯಲ್ಲೇ ರೇವತಿ ನಕ್ಷತ್ರ. ಶನಿ, ಬುಧ ಮತ್ತು ಗುರು ಕಾಂಬಿನೇಶನ್‌ನಿಂದ ಭಾವನಾತ್ಮಕ ಸನ್ನಿವೇಶಗಳು, ಒಳ್ಳೆಯ ವಾತಾವರಣ, ಮಾನಸಿಕ ತೃಪ್ತಿ ಮತ್ತು ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಒಳ್ಳೆಯದು. ಹಣಕಾಸು ಹರಿವು ಇರುತ್ತದೆ. ಮಾನಸಿಕ ಚಿಂತನೆಗಳನ್ನು ಧನಾತ್ಮಕವಾಗಿ ಮಾಡಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:33 am, Wed, 27 May 26

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More