ಗಾಯತ್ರಿ ಜಯಂತಿ 2023: ಗಾಯತ್ರಿ ಜಯಂತಿ ಯಾವಾಗ? ಪೂಜೆಯ ಶುಭ ಸಮಯ, ಮಹತ್ವ ಇಲ್ಲಿದೆ

Gayatri Jayanti 2023: ಹಿಂದೂಗಳು ಹಿಂದೂ ಕ್ಯಾಲೆಂಡರ್ ಪ್ರಕಾರ ಜ್ಯೇಷ್ಠ ಶುಕ್ಲ ಏಕಾದಶಿ ದಿನ ಗಾಯತ್ರಿ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ವರ್ಷ ಮೇ 31 ಬುಧವಾರ ಗಾಯತ್ರಿ ಜಯಂತಿ ಬಂದಿದೆ.

ಗಾಯತ್ರಿ ಜಯಂತಿ 2023: ಗಾಯತ್ರಿ ಜಯಂತಿ ಯಾವಾಗ? ಪೂಜೆಯ ಶುಭ ಸಮಯ, ಮಹತ್ವ ಇಲ್ಲಿದೆ
ಗಾಯತ್ರಿ ಜಯಂತಿ ಯಾವಾಗ?
Follow us
ಸಾಧು ಶ್ರೀನಾಥ್​
|

Updated on: May 22, 2023 | 6:06 AM

ಪ್ರತಿ ವರ್ಷ ಹಿಂದೂಗಳು ಗಾಯತ್ರಿ ಮಾತೆಯ ಜನ್ಮದಿನವನ್ನು ಜ್ಯೇಷ್ಠ ಮಾಸದ ಶುಕ್ಲ ಪಕ್ಷ ಏಕಾದಶಿ ತಿಥಿಯಂದು ಆಚರಿಸುತ್ತಾರೆ. ಗಾಯತ್ರಿ ಜಯಂತಿ ಹಿಂದೂ ಧಾರ್ಮಿಕ ದೃಷ್ಟಿಕೋನದಿಂದ ಮಹತ್ವವನ್ನು ಹೊಂದಿದೆ. ಈ ದಿನದಂದು ಮಾತಾ ಗಾಯತ್ರಿಯನ್ನು ಭಕ್ತಿಯಿಂದ ಪೂಜಿಸುವವರಿಗೆ ಸುಖ ಮತ್ತು ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಗಾಯತ್ರಿ ಜಯಂತಿಯಂದು ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈ ವರ್ಷ ಗಾಯತ್ರಿ ಜಯಂತಿ ಯಾವಾಗ ಬರುತ್ತದೆ? ಅದರ ಮಹತ್ವವನ್ನು ತಿಳಿದುಕೊಳ್ಳೋಣ.

ಗಾಯತ್ರಿ ಜಯಂತಿ ದಿನಾಂಕ: ಹಿಂದೂಗಳು ಹಿಂದೂ ಕ್ಯಾಲೆಂಡರ್ ಪ್ರಕಾರ ಜ್ಯೇಷ್ಠ ಶುಕ್ಲ ಏಕಾದಶಿ ದಿನ ಗಾಯತ್ರಿ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ವರ್ಷ ಮೇ 31 ಬುಧವಾರ ಗಾಯತ್ರಿ ಜಯಂತಿ ಬಂದಿದೆ. ಈ ದಿನ ನಿರ್ಜಲ ಏಕಾದಶಿಯನ್ನೂ ಆಚರಿಸಲಾಗುತ್ತದೆ.

ಆದರೆ ಪೂಜಾ ಸಮಯವು ಮೇ 30, 2023 ರಂದು ಮಧ್ಯಾಹ್ನ 01:07 ರಿಂದ ಪ್ರಾರಂಭವಾಗುತ್ತದೆ. ಇದು ಮರುದಿನ ಅಂದರೆ 31ನೇ ಮೇ 2023 ಮಧ್ಯಾಹ್ನ 01:45 ಕ್ಕೆ ಕೊನೆಗೊಳ್ಳುತ್ತದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಗಾಯತ್ರಿ ಜಯಂತಿಯಂದು ಕನಿಷ್ಠ 108 ಬಾರಿ ಗಾಯತ್ರಿ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಸುಖ ಸಂಪತ್ತು ಸಿಗುತ್ತದೆ. ನಿಮ್ಮ ಗುರಿಯನ್ನು ನೀವು ಸುಲಭವಾಗಿ ಸಾಧಿಸುವಿರಿ.

Also Read: Gayatri Mantra: 32 ವಿವಿಧ ದೇವತೆಗಳ ಗಾಯತ್ರಿ ಮಂತ್ರಗಳು ಹೀಗಿವೆ

ಗಾಯತ್ರಿ ಜಯಂತಿಯ ಮಹತ್ವ: ಸಾಂಪ್ರದಾಯಿಕ ಸಂಪ್ರದಾಯದ ಪ್ರಕಾರ, ಗಾಯತ್ರಿ ದೇವಿಯನ್ನು ನಾಲ್ಕು ವೇದಗಳ ಮೂಲವೆಂದು ಪರಿಗಣಿಸಲಾಗಿದೆ. ಗಾಯತ್ರಿ ದೇವಿಯನ್ನು ತಾಯಿ ಸರಸ್ವತಿ, ಲಕ್ಷ್ಮಿ ಮತ್ತು ಕಾಳಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವೇದಗಳು ಗಾಯತ್ರಿ ದೇವಿಯಿಂದಲೇ ಹುಟ್ಟಿಕೊಂಡಿವೆ. ಹಾಗಾಗಿ ಆಕೆಯನ್ನು ವೇದಮಾತೆ ಎಂದೂ ಕರೆಯುತ್ತಾರೆ.

ಸನಾತನ ಧರ್ಮದಲ್ಲಿ ವೇದಗಳ ಮಹತ್ವವನ್ನು ಹೇಳಲಾಗಿದೆ. ನೀವು ಯಾವಾಗಲೂ ಮಾನಸಿಕ ತೊಂದರೆಗಳಿಂದ ಬಳಲುತ್ತಿದ್ದರೂ ಅಥವಾ ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲು ಬಯಸಿದರೆ ಸಹ ನಿಜವಾದ ಹೃದಯದಿಂದ ಗಾಯತ್ರಿಯನ್ನು ಆರಾಧಿಸಿ. ದೇವಿಯನ್ನು ಧ್ಯಾನಿಸಿ. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ