AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಹಿಂದೂ ದೇವಾಲಯಗಳಲ್ಲಿ ಅರಳಿ ಮತ್ತು ಬೇವಿನ ಮರಗಳು ಯಾಕಿರುತ್ತವೆ ಗೊತ್ತಾ?

ಹಿಂದೂ ಧರ್ಮದಲ್ಲಿ ದೇವಾಲಯಗಳು ಕೇವಲ ಆರಾಧನಾ ಸ್ಥಳಗಳಲ್ಲ, ಅವು ಸಂಸ್ಕಾರ ಕೇಂದ್ರಗಳೂ ಆಗಿವೆ. ಅರಳಿ (ಅಶ್ವತ್ಥ) ಮತ್ತು ಬೇವಿನ ಮರಗಳು ದೇವಾಲಯಗಳಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುತ್ತವೆ. ಅರಳಿಯನ್ನು ಶ್ರೀಮನ್ ನಾರಾಯಣನ ಸ್ವರೂಪವೆಂದೂ, ಬೇವಿನ ಮರವನ್ನು ಮಹಾಲಕ್ಷ್ಮೀಯ ಸ್ವರೂಪವೆಂದೂ ನಂಬಲಾಗುತ್ತದೆ. ಈ ಮರಗಳ ಧಾರ್ಮಿಕ ಮತ್ತು ಆರೋಗ್ಯ ಪ್ರಯೋಜನಗಳ ಬಗ್ಗೆ ಡಾ. ಬಸವರಾಜ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

Daily Devotional: ಹಿಂದೂ ದೇವಾಲಯಗಳಲ್ಲಿ ಅರಳಿ ಮತ್ತು ಬೇವಿನ ಮರಗಳು ಯಾಕಿರುತ್ತವೆ ಗೊತ್ತಾ?
Trees Hindu Temples
ಅಕ್ಷತಾ ವರ್ಕಾಡಿ
|

Updated on: Aug 31, 2025 | 8:00 AM

Share

ಹಿಂದೂ ಧರ್ಮದಲ್ಲಿ ದೇವಾಲಯಗಳು ಕೇವಲ ದೇವರ ಆರಾಧನಾ ಸ್ಥಳಗಳಲ್ಲ, ಅವುಗಳು ಸಂಸ್ಕಾರ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸುತ್ತವೆ. ಈ ದೇವಾಲಯಗಳ ಆವರಣದಲ್ಲಿ ವಿವಿಧ ಪವಿತ್ರ ವೃಕ್ಷಗಳನ್ನು ನೀವು ಗಮನಿಸರಬಹುದು. ಅರಳಿಮರ ಮತ್ತು ಬೇವಿನಮರ ಇವುಗಳಲ್ಲಿ ಪ್ರಮುಖವಾದವು. ಅವುಗಳ ಪ್ರಾಮುಖ್ಯತೆ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಅರಳಿಮರವನ್ನು (ಅಶ್ವತ್ಥ ವೃಕ್ಷ ಅಥವಾ ಬೋಧಿವೃಕ್ಷ ಎಂದೂ ಕರೆಯಲಾಗುತ್ತದೆ) ಶ್ರೀಮನ್ ನಾರಾಯಣನ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಭಗವಾನ್ ಶ್ರೀಕೃಷ್ಣ ಅರಳಿಮರದ ಕೆಳಗೆ ಮಲಗಿ ಪರಲೋಕಕ್ಕೆ ಹೋದರು ಎಂಬುದು ಪ್ರಸಿದ್ಧ ಕಥೆ. ಈ ಮರದ ಅಡಿಯಲ್ಲಿ ಜ್ಞಾನೋದಯವನ್ನು ಪಡೆದ ಬುದ್ಧನನ್ನು ಸ್ಮರಿಸುವುದು ಕೂಡ ಸಾಮಾನ್ಯ. ಬೇವಿನಮರವನ್ನು ಶ್ರೀ ಮಹಾಲಕ್ಷ್ಮೀ ತಾಯಿಯ ಸ್ವರೂಪವೆಂದು ನಂಬಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಇದು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಹೆಚ್ಚಿನ ಆಮ್ಲಜನಕವನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತದೆ. ದೇವಾಲಯಗಳಲ್ಲಿ ಬನ್ನಿ ಮರ, ತುಳಸಿ ಗಿಡ ಮತ್ತು ಬಿಲ್ವಪತ್ರೆ ಮುಂತಾದ ಇತರ ಪವಿತ್ರ ಗಿಡಗಳನ್ನೂ ಕಾಣಬಹುದು. ಭಕ್ತರು ದೇವರ ದರ್ಶನದ ನಂತರ ಈ ಮರಗಳನ್ನು ಸುತ್ತುವರೆದು ನಮಸ್ಕಾರ ಮಾಡುವುದು ಸಾಮಾನ್ಯ ಪದ್ಧತಿಯಾಗಿದೆ. ಅಶ್ವತ್ಥ ವೃಕ್ಷದ ಪೂಜೆ ಮತ್ತು ದರ್ಶನವು ಶನಿ ದೋಷಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ: ವಾಹನದಲ್ಲಿ ಕಾಳು ಮೆಣಸು ಇಟ್ಟುಕೊಂಡರೆ ಅಪಘಾತ ಆಗಲ್ವಾ? ವಾಸ್ತು ತಜ್ಞರು ಹೇಳುವುದೇನು?

ಬೆಳಿಗ್ಗೆ ಮತ್ತು ಸಂಜೆ ಅಶ್ವತ್ಥ ವೃಕ್ಷದ ಬಳಿ ಓಡಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಾರೆಯಾಗಿ, ದೇವಾಲಯಗಳಲ್ಲಿರುವ ಈ ಮರಗಳು ಧಾರ್ಮಿಕ ಮತ್ತು ಆರೋಗ್ಯದ ಪ್ರಯೋಜನಗಳನ್ನು ಒದಗಿಸುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?