AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿಯ ಕಿವಿಯಲ್ಲಿ ಇಷ್ಟಾರ್ಥ ಹೇಳುವುದೇಕೆ? ಇದರ ಹಿಂದಿದೆ ಪೌರಾಣಿಕ ನಂಬಿಕೆ, ಆಧ್ಯಾತ್ಮಿಕ ಮಹತ್ವ!

ಶಿವನ ದೇವಸ್ಥಾನಗಳಲ್ಲಿ ನಂದಿಯ ಕಿವಿಯಲ್ಲಿ ಇಷ್ಟಾರ್ಥ ಹೇಳುವ ಹಿಂದಿದೆ ಅಪಾರ ಪೌರಾಣಿಕ ನಂಬಿಕೆ ಮತ್ತು ಆಧ್ಯಾತ್ಮಿಕ ಮಹತ್ವ. ನಂದಿ ಶಿವನ ಪರಮಭಕ್ತ ಹಾಗೂ ಸಂದೇಶವಾಹಕನಾಗಿ, ಭಕ್ತರ ಪ್ರಾರ್ಥನೆಗಳನ್ನು ಶಿವನಿಗೆ ತಲುಪಿಸುತ್ತಾನೆಂಬ ನಂಬಿಕೆ ಇದೆ. ಈ ಆಚರಣೆ ಭಕ್ತರ ಮನದ ಇಷ್ಟಾರ್ಥಗಳನ್ನು ಶಿವನಿಗೆ ತಲುಪಿಸಲು ಇರುವ ಒಂದು ಮಾರ್ಗವಾಗಿದ್ದು, ನಂಬಿಕೆ, ಭಕ್ತಿ ಮತ್ತು ಆಧ್ಯಾತ್ಮಿಕ ಶರಣಾಗತಿಯ ಸಂಕೇತವಾಗಿದೆ.

ನಂದಿಯ ಕಿವಿಯಲ್ಲಿ ಇಷ್ಟಾರ್ಥ ಹೇಳುವುದೇಕೆ? ಇದರ ಹಿಂದಿದೆ ಪೌರಾಣಿಕ ನಂಬಿಕೆ, ಆಧ್ಯಾತ್ಮಿಕ ಮಹತ್ವ!
ನಂದಿಯ ಕಿವಿಯಲ್ಲಿ ಇಷ್ಟಾರ್ಥ Image Credit source: Pinterest
ಅಕ್ಷತಾ ವರ್ಕಾಡಿ
|

Updated on: Nov 01, 2026 | 8:30 AM

Share

ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ವಿಶೇಷ ಸ್ಥಾನವಿದೆ. ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಮೊದಲು ಶಿವಲಿಂಗದ ಎದುರು ಕುಳಿತಿರುವ ನಂದಿಯನ್ನು ಕಾಣಬಹುದು. ಭಕ್ತರು ನಂದಿಯ ಮುಂದೆ ಕೈಮುಗಿದು ನಮಸ್ಕರಿಸುವುದಲ್ಲದೆ, ಅವರ ಕಿವಿಯಲ್ಲಿ ತಮ್ಮ ಮನದ ಇಷ್ಟಾರ್ಥಗಳನ್ನು ಪಿಸುಗುಟ್ಟುವುದನ್ನೂ ನೋಡಿರಬಹುದು. ಕೆಲವರು ತಮ್ಮ ಕಷ್ಟಗಳನ್ನು ಹೇಳಿಕೊಂಡರೆ, ಇನ್ನು ಕೆಲವರು ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ದೂರವಾಗಲಿ, ಬಯಸಿದ ಕಾರ್ಯಗಳು ನೆರವೇರಲಿ ಎಂದು ಪ್ರಾರ್ಥಿಸುತ್ತಾರೆ. ಹಾಗಾದರೆ ನಂದಿಯ ಕಿವಿಯಲ್ಲಿ ಇಷ್ಟಾರ್ಥ ಹೇಳುವ ಸಂಪ್ರದಾಯದ ಹಿಂದಿನ ಅರ್ಥವೇನು? ಇದರ ಪೌರಾಣಿಕ ಹಿನ್ನೆಲೆ ಮತ್ತು ಆಧ್ಯಾತ್ಮಿಕ ಮಹತ್ವದ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ನಂದಿ ಶಿವನ ವಾಹನ ಮಾತ್ರವಲ್ಲ, ಪರಮಭಕ್ತನೂ ಹೌದು:

ನಂದಿಯು ಶಿವನ ವಾಹನ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಹಿಂದೂ ಪುರಾಣಗಳಲ್ಲಿ ನಂದಿಗೆ ಶಿವನ ಪರಮಭಕ್ತ, ದ್ವಾರಪಾಲಕ ಮತ್ತು ಶಿವಗಣಗಳ ಅಧಿಪತಿ ಎಂಬ ವಿಶೇಷ ಸ್ಥಾನವೂ ಇದೆ. ನಂದಿಯು ಶಿವನ ಸನ್ನಿಧಿಯಲ್ಲಿ ಸದಾ ನೆಲೆಸಿರುವ ಭಕ್ತನ ಸಂಕೇತವಾಗಿದ್ದಾನೆ. ಶಿವನ ದೇವಸ್ಥಾನಗಳಲ್ಲಿ ನಂದಿಯ ವಿಗ್ರಹವನ್ನು ಸಾಮಾನ್ಯವಾಗಿ ಶಿವಲಿಂಗದ ಎದುರಿಗೆ ಪ್ರತಿಷ್ಠಾಪಿಸಲಾಗುತ್ತದೆ. ನಂದಿಯು ಸದಾ ಶಿವನನ್ನೇ ನೋಡುತ್ತಾ ಕುಳಿತಿರುವ ಭಂಗಿಯು ಅಚಲ ಭಕ್ತಿ, ಶ್ರದ್ಧೆ, ತಾಳ್ಮೆ ಮತ್ತು ಸಮರ್ಪಣಾ ಭಾವವನ್ನು ಪ್ರತಿನಿಧಿಸುತ್ತದೆ. ಆದ್ದರಿಂದಲೇ ಶಿವನ ದರ್ಶನ ಪಡೆಯುವ ಮೊದಲು ನಂದಿಗೆ ನಮಸ್ಕರಿಸುವ ಸಂಪ್ರದಾಯವೂ ಅನೇಕ ದೇವಾಲಯಗಳಲ್ಲಿ ಕಂಡುಬರುತ್ತದೆ.

ಇದನ್ನೂ ಓದಿ: ಶನಿ ಸಾಡೇ ಸಾತಿ ಮುಗಿದ ತಕ್ಷಣ ಜೀವನದಲ್ಲಿ ನಡೆಯುವ 5 ಪ್ರಮುಖ ಬದಲಾವಣೆಗಳಿವು!

ನಂದಿಯ ಕಿವಿಯಲ್ಲಿ ಇಷ್ಟಾರ್ಥ ಹೇಳುವುದೇಕೆ?

ಧಾರ್ಮಿಕ ನಂಬಿಕೆಯ ಪ್ರಕಾರ, ನಂದಿಯು ಶಿವನ ಅತ್ಯಂತ ಆಪ್ತ ಭಕ್ತನಾಗಿದ್ದು, ಭಕ್ತರು ಸಲ್ಲಿಸುವ ಪ್ರಾರ್ಥನೆಗಳನ್ನು ಶಿವನಿಗೆ ತಲುಪಿಸುವ ದೈವಿಕ ಸಂದೇಶವಾಹಕ ಎಂಬ ಭಾವನೆಯಿದೆ. ಶಿವನ ಸನ್ನಿಧಿಯಲ್ಲಿ ಸದಾ ಇರುವ ನಂದಿಯು ಭಕ್ತರ ಮನದ ಮಾತುಗಳನ್ನು ಆಲಿಸಿ, ಅವರ ಬೇಡಿಕೆಗಳನ್ನು ಶಿವನಿಗೆ ತಿಳಿಸುತ್ತಾನೆ ಎಂಬ ನಂಬಿಕೆ ಜನಪ್ರಿಯವಾಗಿದೆ. ಇದೇ ಕಾರಣಕ್ಕೆ ಭಕ್ತರು ನಂದಿಯ ಕಿವಿಯ ಬಳಿ ತಮ್ಮ ಇಷ್ಟಾರ್ಥಗಳನ್ನು ನಿಧಾನವಾಗಿ ಹೇಳಿಕೊಳ್ಳುತ್ತಾರೆ. ಮದುವೆ, ಉದ್ಯೋಗ, ಆರೋಗ್ಯ, ಕುಟುಂಬದ ನೆಮ್ಮದಿ, ಆರ್ಥಿಕ ಸಮಸ್ಯೆಗಳು ಸೇರಿದಂತೆ ಜೀವನದ ವಿವಿಧ ವಿಚಾರಗಳಿಗಾಗಿ ನಂದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗೆ ಪ್ರಾರ್ಥನೆ ಸಲ್ಲಿಸುವುದರಿಂದ ಶಿವನ ಅನುಗ್ರಹ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಉತ್ತರ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಒಪ್ಪಿಗೆ
ಉತ್ತರ ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಪ್ರಧಾನಿ ಮೋದಿ ಒಪ್ಪಿಗೆ
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು