AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವವಿಖ್ಯಾತ ಮೈಸೂರು ದಸರಾ 2022: ದಸರಾ ಸ್ಥಬ್ದಚಿತ್ರದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ, ವಿಜಯಪುರ ಜಿಲ್ಲೆಗೆ ಸಮಾಧಾನಕರ ಬಹುಮಾನ

ಈ ಬಾರಿಯ ಜಂಬೂ ಸವಾರಿಯಲ್ಲಿ ಒಟ್ಟು 47 ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದಸರಾ ಸ್ತಬ್ಧಚಿತ್ರದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ.

ವಿಶ್ವವಿಖ್ಯಾತ ಮೈಸೂರು ದಸರಾ 2022: ದಸರಾ ಸ್ಥಬ್ದಚಿತ್ರದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ, ವಿಜಯಪುರ ಜಿಲ್ಲೆಗೆ ಸಮಾಧಾನಕರ ಬಹುಮಾನ
ದಸರಾ ಸ್ತಬ್ಧಚಿತ್ರಗಳು
TV9 Web
| Edited By: |

Updated on:Oct 06, 2022 | 9:29 PM

Share

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯ ದಶಮಿಯ ಜಂಬೂ ಸವಾರಿಗೂ ಮುನ್ನ ರಾಜ್ಯದ ಎಲ್ಲಾ ಜಿಲ್ಲೆಗಳ ಸ್ತಬ್ಧ ಚಿತ್ರ ಪ್ರದರ್ಶನ ನಡೆಯಿತು. ಈ ಬಾರಿಯ ಜಂಬೂ ಸವಾರಿಯಲ್ಲಿ ಒಟ್ಟು 47 ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದಸರಾ ಸ್ತಬ್ಧಚಿತ್ರದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದ್ದು, ಮೈಸೂರು ಜಿಲ್ಲೆಗೆ ದ್ವಿತೀಯ ಮತ್ತು ಚಿತ್ರದುರ್ಗ ಜಿಲ್ಲೆಗೆ 3ನೇ ಸ್ಥಾನ ಪಡೆದುಕೊಂಡಿದೆ. ಚಿಕ್ಕಮಗಳೂರು, ತುಮಕೂರು, ವಿಜಯಪುರ ಜಿಲ್ಲೆಯ ಸ್ತಬ್ಧಚಿತ್ರಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಅದೇ ರೀತಿಯಾಗಿ ಇಲಾಖೆವಾರು ಬಹುಮಾನ ಪ್ರಕಟ ಮಾಡಿದ್ದು, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಸ್ತಬ್ಧಚಿತ್ರಕ್ಕೆ ಪ್ರಥಮ, ಕೆಎಂಎಫ್​ ನಂದಿನಿ ಕ್ಷೀರಧಾರೆ ದ್ವಿತೀಯ ಮತ್ತು ಲಿಡ್ಕರ್​ ಉತ್ಪನ್ನಗಳ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಲಭಿಸಿದೆ.

ಜಿಲ್ಲಾವಾರು ಸ್ತಬ್ಧಚಿತ್ರಗಳ ಪಟ್ಟಿ

  1. ಬಾಗಲಕೋಟೆ -ಮುಧೋಳ ಶ್ವಾನ, ಇಳಕೆಲ್ ಸೀರೆ, ದುರ್ಗಾಂಬ ದೇವಸ್ಥಾನ
  2. ಬಳ್ಳಾರಿ-ದುರ್ಗಾಂಬ ದೇವಾಸ್ಥಾನ, ಮಿಂಜೇರಿ ಗುಡ್ಡ, ಬಳ್ಳಾರಿ ಕೋಟೆ
  3. ಬೆಳಗಾವಿ-ಶೀ ರೇಣುಕಾದೇವಿ ದೇವಾಸ್ಥಾನ, ಕಮಲ ಬಸದಿ
  4. ಬೆಂಗಳೂರು(ಗಾ)- ಮನ್ಯಾಪುರ ದೇವಸ್ಥಾನ,, ಕಪಿಲೇಶ್ಷರ ದೇವಸ್ಥಾನ, ಜೈನಬಸದಿ, ಸಿಂಪಾಡಿಪುರ ವೀಣೆ
  5. ಬೆಂಗಳೂರು ನಗರ -ಕಡಲೆಕಾಯಿ ಪರಸೆ, ಬಸವನ ಗುಡಿ
  6. ಬೀದರ್-ನೂತನ ಅನುಭವ ಮಂಟಪ
  7. ಚಾಮರಾಜನಗರ -ವನ್ಯಧಾಮ, ಶ್ರೀಮಹದೇಶ್ವೇರ ವಿಗ್ರಹ, ಪುನೀತ್‌ ರಾಜಕುಮಾರ್ ಪ್ರತಿಮೆ
  8. ಚಿಕಬಳ್ಳಾಪುರ -ಗ್ರೀನ್ ನಂದಿ & ಕ್ಲೀನ್ ನಂದಿ, ಭೋಗೇಶ್ವರ ದೇವಸ್ಥಾನ
  9. ಚಿಕ್ಕಮಗಳೂರು- ದ್ವಾದಶ ಜಿಲ್ಲೆಗಳಿಗೆ ಜೀವನಾಡಿ ಚಿಕ್ಕಮಗಳೂರು ಜಿಲ್ಲೆಯು ಸಪ್ತ ನದಿಗಳ ತವರು
  10. ಚಿತದುರ್ಗ-ವಾಣಿವಿಲಾಸ ಜಲಾಶಯ, ಓನಕೆ ಓಬ್ಬವ, ಕುದುರೆ ಮೇಲೆ ಅಸನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ತಂಭ
  11. ದಕ್ತಿಣ ಕನ್ನಡ-ಕಂಬಳ, ಹುಲಿವೇಶ,ಭೂತ ಕೋಲ
  12. ದಾವಣಗೆರೆ-ಸಂತೆ ಬೆನ್ನೂರು ಪುಷ್ಕರಣಿ
  13. ಧಾರವಾಡ-ಸಂಗೀತ ದಿಗ್ಗಜರು
  14. ಗದಗ-ಶ್ರೀ ಕ್ಷೇತ್ರ ಶ್ರೀಮಂತಗಡ, ಹೊಳಲಮ್ಮ ದೇವಿ ಮತ್ತು ಶಿವಾಜಿ
  15. ಹಾಸನ-ಬೇಲೂರು ಚೆನ್ನಕೇಶವ ದೇವಸ್ಥಾನ, ಶ್ರವಣಬೆಳಗೊಳ- ಗೊಮ್ಮಟೇಶ್ವರ
  16. ಹಾವೇರಿ-ಗುರು ಗೋವಿಂದಭಟ್ರು, ಸಂತೆ ಶಿಶುನಾಳ ಷರೀಫರು, ಮುಕ್ತೇಶ್ವರ ದೇವಾಲಯ
  17. ಕಲಬುರಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ, ವನ್ಯಜೀವಿ ಧಾಮ
  18. ಕೊಡಗು-ಬ್ರಹ್ಮಗಿರಿ ಬೆಟ್ಟ, ಬೃಗೇಂಡಶ್ವೇರ ದೇವಸ್ಥಾನ, ತಲಕಾವೇರಿ ತೀರ್ಥೋಬವ, ಇರ್ಪು ಜಲಾಶಯ
  19. ಕೋಲಾರ-ಬಿಕೆಎಸ್‌ ಅಯ್ಯಂಗಾರ್ ಯೋಗನಾಥ್ ಹಾಗೂ ಅಂತರಗಂಗೆ ಬೆಟ್ಟ
  20. ಕೊಪ್ಪಳ-ಆನೆಗುಂದಿ ಬೆಟ್ಟ,ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ
  21. ಮಂಡ್ಯ-ಮಂಡ್ಯಜಿಲ್ಲೆಯ ದೇಗುಲಗಳು
  22. ಮೈಸೂರು-ಮೈಸೂರು ಜಿಲ್ಲೆ ವಿಶೇಷತೆಗಳು
  23. ರಾಯಚೂರು-ಸಿರಿಧಾನ್ಯ ಬೆಳೆಗಳ ಅಭಿಯಾನ
  24. ರಾಮನಗರ-ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ
  25. ಶಿವಮೊಗ್ಗ-ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ
  26. ತುಮಕೂರು-ನಿಟ್ಟೂರಿನ ಹೆಚ್‌ಎಎಲ್‌ ತಯಾರಿಕ ಘಟಕ, ಪಾವಗಡದ ವಿಶ್ವದ ಮೊದಲ ಬೃಹತ್ ಸೋಲಾರ್ ಪಾರ್ಕ್
  27. ಉಡುಪಿ-ಜಿಐ ಟ್ಯಾಗ್ ಹೊಂದಿರುವ ಉಡುಪಿ ಕೈಮಗ್ಗ, ಸೀರೆ ನೇಯ್ಗೆ ,ಸಂಪ್ರಾದಾಯಕ ಕಲಾ ಪ್ರದರ್ಶನ
  28. ಉತ್ತರ ಕನ್ನಡ-ಕಾರವಾರ ನೌಕನೆಲೆ,(ಐಎನ್‌ಎಸ್‌ ವಿಕ್ರಮ್)
  29.  ವಿಜಯಪುರ-ಸಿದ್ದರಾಮೇಶ್ವರ ದೇವಸ್ಥಾನ,
  30. ವಿಜಯನಗರ-ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ
  31. ಯಾದಗಿರಿ-ಸುರಪುರ ಕೋಟೆ

ಸ್ತಬ್ಧಚಿತ್ರಗಳ ಉಪಸಮಿತಿ

  1. ಅರಮನೆ ವಾದ್ಯಗೋಷ್ಠಿ
  2. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ
  3. ಆಜಾದಿ ಕಾ ಅಮೃತ ಮಹೋತ್ಸವ

ಇಲಾಖಾವಾರು ಸ್ತಬ್ಧಚಿತ್ರಗಳ ಪಟ್ಟಿ

  1. ಸಮಾಜ ಕಲ್ಯಾಣ ಇಲಾಖೆ- ಸಾಮಾಜಿಕ ನ್ಯಾಯ
  2. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ- ಐಟಿಐ, ಜಿಟಿಟಿಸಿ, ಕೌಶಲ ತರಬೇತಿ
  3. ಹಾಲು ಉತ್ಪಾದಕರ ಮಹಾಮಂಡಲ- ನಂದಿನಿ ಕ್ಷೀರಧಾರೆ, ಉತ್ಪನ್ನಗಳು
  4. ಮೈಸೂರು ವಿಶ್ವವಿದ್ಯಾಲಯ- 106 ವರ್ಷಗಳ ಇತಿಹಾಸ
  5. ಕಾವೇರಿ ನೀರಾವರಿ ನಿಗಮ- ರೈತರು ಮತ್ತು ಸಾರ್ವಜನಿಕರಿಗೆ ಆಗುವ ಅನುಕೂಲಕಗಳು
  6. ಸೆಸ್ಕ್-‌ ಡಿಡಿಯು ಯೋಜನೆ, ಬೆಳಕು ಯೋಜನೆ, ಪರಿವರ್ತಕ ಅಭಿಯಾನ
  7. ವಾರ್ತಾ ಮತ್ತು ಪ್ರಚಾರ ಇಲಾಖೆ- ಇಲಾಖೆ ಕಾರ್ಯಕ್ರಮಗಳು
  8. ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ- ಲಿಡ್ಕರ್‌ ಉತ್ಪನ್ನಗಳು
  9. ಅಖಿಲ ಭಾರತ ವಾಕ್‌ ಮತ್ತು ಶ್ರಾವಣ ಸಂಸ್ಥೆ- ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ
  10. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಆರ್ಥಿಕ ಹೊರಯಿಂದ ರಕ್ಷಣೆ, ನಮ್ಮ ಕ್ಲಿನಿಕ್‌
  11. ಸಹಕಾರ ಇಲಾಖೆ- ಸಹಕಾರ ಕ್ಷೇತ್ರದ ಯೋಜನೆಗಳು
  12. ಮಂಡ್ಯ ಜಿಲ್ಲೆ ಮಹಾ ಕುಂಭ ಮೇಳ- ಪುಣ್ಯ ಸ್ನಾನ ಮತ್ತು ಶ್ರೀ ಮಹದೇಶ್ವರ ಜ್ಯೋತಿ ಸ್ವೀಕಾರ
  13. ಪ್ರವಾಸೋದ್ಯಮ ಇಲಾಖೆ- ಚನ್ನಕೇಶವ ದೇವಾಲಯ, ಬೇಲೂರು, ಹಂಪಿ ಆನೆಲಾಯ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:27 pm, Thu, 6 October 22

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು