Mysore Dasara: ದಸರಾ ಕವಿಗೋಷ್ಠಿ ಆಮಂತ್ರಣ ಪತ್ರದಲ್ಲಿ ದಿವಂಗತರ ಹೆಸರು, ಸಂಸದರ ಕ್ಷೇತ್ರವೇ ತಪ್ಪು

ಪ್ರತಾಪ್ ಸಿಂಹ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರನ್ನಾಗಿ ಮಾಡಿದ್ದಾರೆ. ವಿ. ಶ್ರೀನಿವಾಸಪ್ರಸಾದ್ ಅವರು ಏನಾಗಬೇಕು’ ಎಂದು ಹಲವರು ಪ್ರಶ್ನಿಸಿದ್ದಾರೆ.

Mysore Dasara: ದಸರಾ ಕವಿಗೋಷ್ಠಿ ಆಮಂತ್ರಣ ಪತ್ರದಲ್ಲಿ ದಿವಂಗತರ ಹೆಸರು, ಸಂಸದರ ಕ್ಷೇತ್ರವೇ ತಪ್ಪು
ದಸರಾ ಕವಿಗೋಷ್ಠಿಯ ಆಮಂತ್ರಣ ಪತ್ರಿಕೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 27, 2022 | 12:29 PM

ಮೈಸೂರು: ದೇಶದ ಗಮನ ಸೆಳೆಯುವ ಪ್ರತಿಷ್ಠಿತ ಮೈಸೂರು ದಸರಾ ಕವಿಗೋಷ್ಠಿಯ ಆಮಂತ್ರಣ ಪತ್ರವು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಹಿತ್ಯ ಪ್ರಿಯರ ವಾಟ್ಸಾಪ್​ ಗ್ರೂಪ್​ಗಳಲ್ಲಿಯೂ ಪತ್ರವು ಹರಿದಾಡುತ್ತಿದೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಅಥವಾ ಪಾಲ್ಗೊಳ್ಳಲು ಒಬ್ಬರು ಮತ್ತೊಬ್ಬರಿಗೆ ಇನ್​ವಿಟೇಶನ್ ಕಳಿಸಿದ್ದರೆ ಅದು ದೊಡ್ಡ ಸುದ್ದಿ ಆಗುತ್ತಿರಲಿಲ್ಲ. ದಿವಂಗತರಾಗಿರುವ ಕವಿಯ ಹೆಸರು ದಸರಾ ಪ್ರಯುಕ್ತ ಆಯೋಜಿಸಿರುವ ಪ್ರಧಾನ ಕವಿಗೋಷ್ಠಿಯ ಆಮಂತ್ರಣ ಪತ್ರಿಕೆಯಲ್ಲಿ ಸೇರ್ಪಡೆಯಾಗಿದೆ. ಸಂಸದರ ಕ್ಷೇತ್ರವನ್ನೇ ಬದಲಿಸಲಾಗಿದೆ. ಅಷ್ಟೇ ಅಲ್ಲದೆ ಮತ್ತೊಬ್ಬ ಕವಿಯ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ.

ಸಂಸದ ಪ್ರತಾಪ್ ಸಿಂಹ ಅವರ ಹೆಸರಿನ ಕೆಳಗೆ ‘ಮಾನ್ಯ ಸಂಸದರು ಚಾಮರಾಜನಗರ ಲೋಕಸಭಾ ಕ್ಷೇತ್ರ’ ಎಂದು ಉಲ್ಲೇಖಿಸಲಾಗಿದೆ. ಕನ್ನಡದ ಕವಿ ಜಿ.ಕೆ.ರವೀಂದ್ರ ಕುಮಾರ್ ಮೃತಪಟ್ಟಿದ್ದಾರೆ. ಆದರೆ ಅವರ ಹೆಸರನ್ನು ಕವಿಗೋಷ್ಠಿಯಲ್ಲಿ ಪ್ರಕಟಿಸಲಾಗಿದೆ. ಎಚ್​.ಎಂ.ನಾಗರಾಜರಾಜ ರಾವ್ ಕಲ್ಕಟ್ಟೆ ಅವರ ಹೆಸರಿನಲ್ಲಿರುವ ಕಲ್ಕಟ್ಟೆಯನ್ನು ತಪ್ಪಾಗಿ ‘ಕಲ್ಕತ್ತೆ’ ಎಂದು ನಮೂದಿಸಲಾಗಿದೆ.

ಹಿರಿಯ ಬರಹಗಾರ ಜೋಗಿ ಅವರು ಆಮಂತ್ರಣ ಪತ್ರಿಕೆಯು ತಪ್ಪಾಗಿರುವ ಬಗ್ಗೆ ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಪ್ರಸ್ತಾಪಿಸಿದ್ದಾರೆ. ‘ನಾಡಿದ್ದು ದಸರಾ ಕವಿಗೋಷ್ಠಿಯಲ್ಲಿ ಕವಿತೆ ಓದಲಿರುವ ಕವಿಗಳ ಪಟ್ಟಿಯಲ್ಲಿರುವ ಜಿಕೆ ರವೀಂದ್ರ ಕುಮಾರ್ ಯಾರು? ಕನ್ನಡದ ಅತ್ಯುತ್ತಮ ಕವಿ ಅವರು. ಅವರು ಈಗಿಲ್ಲ. ಕಣ್ಮರೆ ಅದವರನ್ನು ಎಲ್ಲರೂ ಮರೆಯುತ್ತಾರೆ. ಆದರೆ ಸರ್ಕಾರ ಮರೆಯುವುದಿಲ್ಲ. ದತ್ತಿ ಸಂಸ್ಥೆ ಸದಸ್ಯರನ್ನೂ ಮಾಡುತ್ತದೆ. ಕವಿಗೋಷ್ಠಿಗೆ ಕರೆಯುತ್ತದೆ. ಅಯ್ಯೋ ಸುನಿಲ್. ಈರೆನ ಗತಿಯೇ!’ ಎಂದು ಜೋಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಂದೀಶ್ ಎನ್ನುವವರು ‘ದಸರಾ ಕವಿಗೋಷ್ಠಿಯ ಕವಿಗಳ ಆಯ್ಕೆ ಪ್ರಕ್ರಿಯೆ ಹೇಗೆ? ಯಾರು ಆಯ್ಕೆ ಮಾಡ್ತಾರೆ’ ಎಂದು ಕೇಳಿದ್ದಾರೆ. ‘ದಿವ್ಯ ಬೇಜವಾಬ್ದಾರಿತನಕ್ಕೆ ಇನ್ನೊಂದು ನಿದರ್ಶನ ಇಲ್ಲಿದೆ. ಪ್ರತಾಪ್ ಸಿಂಹ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರನ್ನಾಗಿ ಮಾಡಿದ್ದಾರೆ. ವಿ. ಶ್ರೀನಿವಾಸಪ್ರಸಾದ್ ಅವರು ಏನಾಗಬೇಕು’ ಎಂದು ಬನಶಂಕರ್ ರಾವ್ ಅವರು ಪ್ರಶ್ನಿಸಿದ್ದಾರೆ.

Dasara-Kavigoshti

ದಸರಾ ಕವಿಗೋಷ್ಠಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಾನಗಳಿಗೆ ನೇಮಕಾತಿಯಲ್ಲಿಯೂ ಆತುರ, ತಪ್ಪು

ಈ ಹಿಂದೆ ಕರ್ನಾಟಕ ಸರ್ಕಾರವು ತನ್ನ ಅಧೀನದಲ್ಲಿರುವ 21 ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಈ ಪೈಕಿ ಇಬ್ಬರು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು. ನಂತರ ಸರ್ಕಾರವು ನೇಮಕಾತಿ ಆದೇಶವನ್ನೇ ಹಿಂಪಡೆದಿತ್ತು. ಪೂರ್ಣಚಂದ್ರ ತೇಜಸ್ವಿ ಟ್ರಸ್ಟ್​ ಸದಸ್ಯರಾಗಿ ದಿವಂಗತ ರಾಜೇಶ್ವರಿ ಅವರನ್ನು ನೇಮಕ ಮಾಡಲಾಗಿತ್ತು. ಈ ಸಂದರ್ಭದಲ್ಲಿಯೂ ಸರ್ಕಾರವು ಜವಾಬ್ದಾರಿಯಿಂದ ವರ್ತಿಸಿಲ್ಲ ಎಂದು ಹಲವರು ಆಕ್ಷೇಪಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಟ್ರಸ್ಟ್​ರಾಗಿ ನೇಮಿಸಲಾಗಿದ್ದ ನರೇಂದ್ರ ರೈ ದೇರ್ಲ ಅವರು ಸರ್ಕಾರದ ನೇಮಕಾತಿಯನ್ನು ನಿರಾಕರಿಸಿ, ರಾಜೀನಾಮೆ ಸಲ್ಲಿಸಿದ್ದರು.

‘ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ ಪೂರ್ವಾನುಮತಿಯನ್ನು ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ’ ಎಂದು ಸಲಹೆ ಮಾಡಿದ್ದರು. ಅವರ ಫೇಸ್​ಬುಕ್ ಪೋಸ್ಟ್ ವೈರಲ್ ಆಗಿತ್ತು.

ಇದನ್ನೂ ಓದಿ: Narendra Rai Derla: ಸೌಜನ್ಯವಿಲ್ಲದ ನೇಮಕಾತಿಗೆ ಆಕ್ಷೇಪ; ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಹುದ್ದೆ ನಿರಾಕರಿಸಿದ ನರೇಂದ್ರ ರೈ ದೇರ್ಲ

ಇದನ್ನೂ ಓದಿ: Karnataka Govt: ತರಾತುರಿ ನೇಮಕ, ನಂತರ ರದ್ದು; 21 ಟ್ರಸ್ಟ್​ಗಳಿಗೆ ನೇಮಕಾತಿ ಆದೇಶ ಹಿಂಪಡೆದ ಸರ್ಕಾರ

ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ವಿಡಿಯೋ: ಬಿಗ್​ಬಾಸ್​ ಮನೆಯಲ್ಲಿ ಬಿಚ್ಚಿಕೊಂಡ ಬಾಲ್ಯದ ನೆನಪುಗಳು
ವಿಡಿಯೋ: ಬಿಗ್​ಬಾಸ್​ ಮನೆಯಲ್ಲಿ ಬಿಚ್ಚಿಕೊಂಡ ಬಾಲ್ಯದ ನೆನಪುಗಳು
ಮೊದಲ ಎಸೆತದಲ್ಲೇ ಸಿಕ್ಸರ್: ಸೂರ್ಯನ ದಾಖಲೆ ಸರಿಗಟ್ಟಿದ ರಮಣದೀಪ್
ಮೊದಲ ಎಸೆತದಲ್ಲೇ ಸಿಕ್ಸರ್: ಸೂರ್ಯನ ದಾಖಲೆ ಸರಿಗಟ್ಟಿದ ರಮಣದೀಪ್
ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ: ಚಲುವರಾಯಸ್ವಾಮಿ
ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ: ಚಲುವರಾಯಸ್ವಾಮಿ
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ