Navaratri 2023: ನವರಾತ್ರಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಏಕೆ ಸೇವಿಸಬಾರದು?

Navaratri Festival: ನವರಾತ್ರಿಯು ಭಕ್ತರು ಲೌಕಿಕ ಭೋಗಗಳನ್ನು ತ್ಯಜಿಸಿ, ಉಪವಾಸದಲ್ಲಿ ಪಾಲ್ಗೊಳ್ಳುವ, ಶುದ್ಧ ಮತ್ತು ಸರಳ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವ ಸಮಯವಾಗಿದೆ. ಈ ಉಪವಾಸದ ಸಮಯದಲ್ಲಿ ಸಾಮಾನ್ಯವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ.

Navaratri 2023: ನವರಾತ್ರಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಏಕೆ ಸೇವಿಸಬಾರದು?
ಈರುಳ್ಳಿ ಮತ್ತು ಬೆಳ್ಳುಳ್ಳಿImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 16, 2023 | 11:16 AM

ನವರಾತ್ರಿ ಈಗಾಗಲೇ ಆರಂಭವಾಗಿದೆ. 9 ದಿನಗಳ ಆಚರಣೆಯು ಭರದಿಂದ ಸಾಗುತ್ತಿದೆ. ನವರಾತ್ರಿಯು (Navaratri Festival) ಹಿಂದೂಗಳ ಪವಿತ್ರವಾದ ಹಬ್ಬ. ಇದನ್ನು ಶಾರದೀಯ ನವರಾತ್ರಿ ಎಂದೂ ಕರೆಯಲಾಗುತ್ತದೆ. ಇದು ಭಕ್ತರು ದುರ್ಗಾ ದೇವಿಯ 9 ಅವತಾರಗಳಿಗೆ ಗೌರವ ಸಲ್ಲಿಸುವ ಸಮಯವಾಗಿದೆ. ಈ ಹಬ್ಬದ ಸಮಯದಲ್ಲಿ ಹಿಂದೂಗಳು ಕೆಲವು ಆಹಾರಗಳನ್ನು ಸೇವಿಸುವುದಿಲ್ಲ. 9 ದಿನಗಳ ಕಾಲ ವ್ರತದ ಜೊತೆಗೆ ಆಹಾರದ ಪಥ್ಯವನ್ನೂ ಮಾಡುತ್ತಾರೆ.

ಈ 9 ದಿನಗಳಲ್ಲಿ ದುರ್ಗಾ ದೇವಿಯು ತನ್ನ ಭಕ್ತರಿಗೆ ಶಕ್ತಿ, ಸಮೃದ್ಧಿಯನ್ನು ಅನುಗ್ರಹಿಸಲು ಸ್ವರ್ಗದಿಂದ ಇಳಿಯುತ್ತಾಳೆ ಎಂದು ಭಕ್ತರು ನಂಬುತ್ತಾರೆ. ನವರಾತ್ರಿಯು ಭಕ್ತರು ಲೌಕಿಕ ಭೋಗಗಳನ್ನು ತ್ಯಜಿಸಿ, ಉಪವಾಸದಲ್ಲಿ ಪಾಲ್ಗೊಳ್ಳುವ, ಶುದ್ಧ ಮತ್ತು ಸರಳ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವ ಸಮಯವಾಗಿದೆ. ಈ ಉಪವಾಸದ ಸಮಯದಲ್ಲಿ ಸಾಮಾನ್ಯವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ. ಈರುಳ್ಳಿ ಮತ್ತು ಬೆಳ್ಳುಳ್ಳಿ ಅಡುಗೆಯ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುತ್ತವೆ. ಆರೋಗ್ಯಕ್ಕೂ ಈರುಳ್ಳಿ, ಬೆಳ್ಳುಳ್ಳಿ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೂ ಇವುಗಳನ್ನು ಯಾಕೆ ಸೇವಿಸುವುದಿಲ್ಲ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Navaratri 2023: ನವರಾತ್ರಿಯ 9 ದಿನ ದುರ್ಗೆಯ ಯಾವ ಯಾವ ಅವತಾರಕ್ಕೆ ಪೂಜೆ ಸಲ್ಲಿಸಬೇಕು?

ನವರಾತ್ರಿಯ ಉಪವಾಸದ ಸಮಯದಲ್ಲಿ ಈ ಎರಡು ಪದಾರ್ಥಗಳನ್ನು ತಪ್ಪಿಸಲು ಬಲವಾದ ಕಾರಣಗಳಿವೆ. ಆಯುರ್ವೇದದ ಪ್ರಕಾರ, ಉಪವಾಸದ ಸಮಯದಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಏಕೆಂದರೆ, ಅದು ಸುಲಭವಾಗಿ ಜೀರ್ಣವಾಗುತ್ತದೆ. ನಾವು ಸಾತ್ವಿಕ ಆಹಾರವನ್ನು ಸೇವಿಸಿದಾಗ ನಮ್ಮ ದೇಹಕ್ಕೆ ಜೀರ್ಣಕ್ರಿಯೆಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಸಾತ್ವಿಕ ಆಹಾರವು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಚರ್ಮವನ್ನು ಆರೋಗ್ಯಕರಗೊಳಿಸುತ್ತದೆ.

ಹಾಗೇ, ಆಯುರ್ವೇದವು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸಿಕ ಪ್ರಕೃತಿ ಎಂದು ಪರಿಗಣಿಸಲಾಗುತ್ತದೆ. ಈರುಳ್ಳಿಯು ದೇಹದ ಮೇಲೆ ಉಷ್ಣ ಪರಿಣಾಮವನ್ನು ಬೀರುತ್ತದೆ. ನವರಾತ್ರಿಯ ಸಮಯದಲ್ಲಿ ಅವುಗಳನ್ನು ಸೇವಿಸಲು ಸೂಕ್ತವಲ್ಲ. ಬೆಳ್ಳುಳ್ಳಿಯನ್ನು ರಜೋಗಿನಿ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅದು ಜನರ ಪ್ರಚೋದನೆಗಳು ಮತ್ತು ಆಸೆಗಳನ್ನು ನಿಯಂತ್ರಿಸುವ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಹೀಗಾಗಿ, ವ್ರತ ಮಾಡುವಾಗ ಮನಸನ್ನು ನಿಗ್ರಹಿಸಿಕೊಳ್ಳುವ ಉದ್ದೇಶದಿಂದ ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ.

ನವರಾತ್ರಿಯ ಉಪವಾಸದ ಸಮಯದಲ್ಲಿ ಹಣ್ಣುಗಳು, ತರಕಾರಿಗಳು, ಸಾಬುದಾನ (ಸಾಗೊ), ಸಾಮಕ್ ಅಕ್ಕಿ, ಡೈರಿ ಉತ್ಪನ್ನಗಳು, ಗುಲಾಬಿ ಉಪ್ಪು ಮತ್ತು ಅಂಟು-ಮುಕ್ತ ಹಿಟ್ಟುಗಳನ್ನು ಬಳಸಬಹುದಾಗಿದೆ. ನವರಾತ್ರಿ ಹಬ್ಬದ ಸಮಯದಲ್ಲಿ ಅನೇಕ ಜನರು ಉಪವಾಸಗಳನ್ನು ಆಚರಿಸುವುದು ಸಾಮಾನ್ಯವಾಗಿದೆ. ಅವರು ಈ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. ಸಾಂಪ್ರದಾಯಿಕ ಆಯುರ್ವೇದ ಮತ್ತು ಯೋಗಶಾಸ್ತ್ರದ ತತ್ವಗಳಲ್ಲಿ ಸಾತ್ವಿಕ ಆಹಾರವನ್ನು ಶುದ್ಧ, ಸರಳ ಆಹಾರವೆಂದು ಪರಿಗಣಿಸಲಾಗುತ್ತದೆ. ಸಾತ್ವಿಕ ಆಹಾರಗಳು ದೇಹಕ್ಕೆ ಆರಾಮದಾಯಕವಾಗಿರುತ್ತವೆ. ಅಲ್ಲದೆ, ದೇಹಕ್ಕೆ ಜೀರ್ಣಿಸಿಕೊಳ್ಳಲು ಸುಲಭವಾಗಿರುತ್ತವೆ. ಅತಿಯಾದ ಮಸಾಲೆಗಳು ಅಥವಾ ಕೊಬ್ಬಿನಿಂದ ಮುಕ್ತವಾಗಿರುತ್ತವೆ.

ಇದನ್ನೂ ಓದಿ: ನವರಾತ್ರಿ 2023: ಮೊದಲ ಬಾರಿಗೆ ನವರಾತ್ರಿ ವ್ರತವನ್ನು ಮಾಡುತ್ತಿರುವಿರಾ.. ಈ ಪೂಜಾ ನಿಯಮಗಳಿಗೆ ವಿಶೇಷ ಗಮನ ಕೊಡಿ

ಸಾತ್ವಿಕ ಆಹಾರಗಳು ನೈಸರ್ಗಿಕ ಪೋಷಕಾಂಶಗಳನ್ನು ಹೊಂದಿವೆ. ಇವುಗಳನ್ನು ಹೆಚ್ಚು ಸಂಸ್ಕರಣೆ ಮಾಡಿರುವುದಿಲ್ಲ. ಹೀಗಾಗಿ, ಇಂತಹ ಆಹಾರಗಳನ್ನು ಸೇವಿಸುವುದರಿಂದ ದೇಹಕ್ಕೆ ದಿನವಿಡೀ ನಿರಂತರ ಶಕ್ತಿ ಸಿಗುತ್ತದೆ. ಹಾಗೇ, ಒಟ್ಟಾರೆ ಚೈತನ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾತ್ವಿಕ ಆಹಾರಗಳು ಸಾಮಾನ್ಯವಾಗಿ ವಿವಿಧ ಹಣ್ಣುಗಳು, ತರಕಾರಿಗಳು, ನಟ್ಸ್​, ಸೀಡ್ಸ್​ ಮತ್ತು ಡೈರಿ ಉತ್ಪನ್ನಗಳನ್ನು ಒಳಗೊಂಡಿರುತ್ತವೆ. ಇದು ಉಪವಾಸದ ಅವಧಿಯಲ್ಲಿ ಸಮತೋಲಿತ ಪೌಷ್ಟಿಕಾಂಶದ ಸೇವನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಾತ್ವಿಕ ಆಹಾರಗಳು ಸಾಮಾನ್ಯವಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನಗೊಂಡಾಗ ಉಪವಾಸದ ಸಮಯದಲ್ಲಿ ಇದು ಸಹಾಯಕವಾಗಿರುತ್ತದೆ. ಇದು ಅಸ್ವಸ್ಥತೆ ಅಥವಾ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಬಹುದು. ಇವು ಮನಸ್ಸನ್ನು ಶಾಂತಗೊಳಿಸುತ್ತವೆ. ಇದು ವ್ಯಕ್ತಿಗಳು ಭಾವನಾತ್ಮಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಹಬ್ಬದ ಅವಧಿಯಲ್ಲಿ ಒತ್ತಡ ಅಥವಾ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ