Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramadan 2022 Timetable: ಚಂದ್ರ ಗೋಚರ ಹಿನ್ನೆಲೆ ಏಪ್ರಿಲ್ 3ರಿಂದ ರಂಜಾನ್ ಉಪವಾಸ ಶುರು

ಬೆಂಗಳೂರಿನಲ್ಲಿ ಚಂದ್ರ ಗೋಚರಿಸಿರುವ ಹಿನ್ನೆಲೆಯಲ್ಲಿ(Ramadan Moon Sighted) ನಾಳೆಯಿಂದಲೇ ರಂಜಾನ್‌ನ ಮೊದಲ ಉಪವಾಸ ಆರಂಭವಾಗುತ್ತಿದೆ. ನಾಳೆಯಿಂದ ಒಂದು ತಿಂಗಳ ಕಾಲ ರಂಜಾನ್ ಉಪವಾಸ ಇಡಲಾಗುತ್ತೆ ಎಂದು ವಕ್ಫ್ಬೋರ್ಡ್ ಅಧ್ಯಕ್ಷ ಶಫಿ ಸಅದಿ ಮಾಹಿತಿ ನೀಡಿದ್ದಾರೆ.

Ramadan 2022 Timetable: ಚಂದ್ರ ಗೋಚರ ಹಿನ್ನೆಲೆ ಏಪ್ರಿಲ್ 3ರಿಂದ ರಂಜಾನ್ ಉಪವಾಸ ಶುರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Apr 02, 2022 | 10:47 PM

ಹಿಂದುಗಳ ಹೊಸ ವರ್ಷ ಎನ್ನಲಾಗುವ ಯುಗಾದಿ ಹಬ್ಬ ಆಚರಣೆ ಮುಗಿಯುತ್ತಿದ್ದಂತೆ ಏಪ್ರಿಲ್ 3ರಿಂದ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‌(Ramadan) ಉಪವಾಸ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಚಂದ್ರ ಗೋಚರಿಸಿರುವ ಹಿನ್ನೆಲೆಯಲ್ಲಿ(Ramadan Moon Sighted) ನಾಳೆಯಿಂದಲೇ ರಂಜಾನ್‌ನ ಮೊದಲ ಉಪವಾಸ ಆರಂಭವಾಗುತ್ತಿದೆ. ನಾಳೆಯಿಂದ ಒಂದು ತಿಂಗಳ ಕಾಲ ರಂಜಾನ್ ಉಪವಾಸ ಇಡಲಾಗುತ್ತೆ ಎಂದು ವಕ್ಫ್ಬೋರ್ಡ್ ಅಧ್ಯಕ್ಷ ಶಫಿ ಸಅದಿ ಮಾಹಿತಿ ನೀಡಿದ್ದಾರೆ.

ನಾಳೆಯಿಂದ ಉಪವಾಸ ಶುರು ಏಪ್ರಿಲ್ 3ರಂದು ಮೊದಲ ಉಪವಾಸ ಆರಂಭವಾಗುತ್ತೆ. ಈ ಪವಿತ್ರ ತಿಂಗಳ ಮೊದಲ ಮತ್ತು ಕೊನೆಯ ದಿನಾಂಕಗಳು ಚಂದ್ರನ ಇಸ್ಲಾಮಿಕ್ ಕ್ಯಾಲೆಂಡರ್ ಅನ್ನು ಅವಲಂಬಭಿಸಿರುತ್ತದೆ. ಅಮಾವಾಸ್ಯೆಯ ನಂತರ ಕಾಣಿಸಿಕೊಳ್ಳುವ ಅರ್ಧಚಂದ್ರಾಕೃತಿಯೊಂದಿಗೆ ಪ್ರಾರಂಭವಾಗುತ್ತದೆ. ರಂಜಾನ್‌ನ ಅರ್ಧಚಂದ್ರಾಕಾರವು ಸೌದಿ ಅರೇಬಿಯಾ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳೊಂದಿಗೆ ಭಾರತದ ಕೆಲವು ಭಾಗಗಳಲ್ಲಿ ಮೊದಲು ಕಂಡುಬರುತ್ತದೆ ಮತ್ತು ಒಂದು ದಿನದ ನಂತರ ಉಳಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ಕಂಡುಬರುತ್ತದೆ. ಹೀಗಾಗಿ ಚಂದ್ರನ ಮೂಲಕ ದಿನವನ್ನು, ಹಬ್ಬವನ್ನು ಲೆಕ್ಕ ಹಾಕಲಾಗುತ್ತೆ.

ರೋಜಾ ಅಥವಾ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೆಹ್ರಿ ಅಥವಾ ಸೋಹರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಇನ್ನು ರಂಜಾನ್ ಸಮಯದಲ್ಲಿ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಉಪವಾಸ ಮಾಡಿಸಲಾಗುತ್ತದೆ. ಮುಸ್ಲಿಮರು ಉಪವಾಸದ ವೇಳೆ ಸಿಗರೇಟ್, ಮದ್ಯ, ತಂಬಾಕು ಸೇವನೆ, ಲೈಂಗಿಕ ಸಂಬಂಧವನ್ನು ಬೆಳೆಸುವುದನ್ನೂ ಕೂಡ ತಪ್ಪಿಸುತ್ತಾರೆ. ಏಕೆಂದರೆ ಉಪವಾಸದ ಸಮಯದಲ್ಲಿ ಇಂಥ ಚಟುವಟಿಕೆಗಳನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ತಮ್ಮನ್ನು ಅಧ್ಯಾತ್ಮ ಪ್ರವೃತ್ತಿಗೆ ಅರ್ಪಿಸಿಕೊಳ್ಳುತ್ತಾರೆ. fasting calendar

ಸಾಮರಸ್ಯದಿಂದ ಯುಗಾದಿ ಹಬ್ಬ ಆಚರಿಸಿದ ಹಿಂದೂ-ಮುಸ್ಲಿಮರು ಹಿಂದೂ-ಮುಸ್ಲಿಂ ಧರ್ಮದವರೆಲ್ಲರೂ ಸೇರಿ ಯುಗಾದಿ ಹಬ್ಬವನ್ನು ಸಂತೋಷ, ಸಂಭ್ರಮದಿಂದ ಆಚರಿಸಿದ್ದಾರೆ. ಹಿಂದೂ ಮುಸ್ಲಿಂ ಸಹೋದರರು ಒಟ್ಟಾಗಿ ಹಬ್ಬ ಮಾಡಿ ಸಾಮರಸ್ಯದ ಸಂದೇಶ ಸಾರಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದ ಆಂಜನೇಯ ದೇವಸ್ಥಾನದ ಬಳಿ ಎರಡೂ ಧರ್ಮದವರು ಸೇರಿ ಬೇವು ತಯಾರಿಸಿ ಸಾರ್ವಜನಿಕರಿಗೆ ವಿತರಿಸಿ ಸಿಹಿ-ಕಹಿ ಜೀವನದಲ್ಲಿ ಸಾಮಾನ್ಯ. ದ್ವೇಶ, ವಿರೋಧ ಬಿಟ್ಟು ಒಟ್ಟಾಗಿ ಬಾಳೋಣ ಎಂದು ಸಂದೇಶ ರವಾನಿಸಿದ್ದಾರೆ. ರಾಜ್ಯದಲ್ಲಿ ಎರಡೂ ಧರ್ಮಗಳ ಮಧ್ಯೆ ಸಾಕಷ್ಟು ವಿವಾದಗಳು ಸೃಷ್ಟಿಯಾಗಿವೆ. ಇದರ ಮಧ್ಯೆ ಎರಡು ಧರ್ಮದವರಿಂದ ಯುಗಾದಿ ಹಬ್ಬ ಆಚರಣೆ ಮಾಡಲಾಗಿದೆ. ಧರ್ಮ ಧರ್ಮ ಅಂತ ಕಡಿದಾಡುವವರಿಗೆ ವಡಗೇರ ಜನ ಮಾದರಿಯಾಗಿದ್ದಾರೆ.

Ugadi

ಸಾಮರಸ್ಯದಿಂದ ಯುಗಾದಿ ಹಬ್ಬ ಆಚರಿಸಿದ ಹಿಂದೂ-ಮುಸ್ಲಿಮರು

ಸಾಮರಸ್ಯದಿಂದ ಯುಗಾದಿ ಹಬ್ಬ ಆಚರಿಸಿದ ಹಿಂದೂ-ಮುಸ್ಲಿಮರು

ಇದನ್ನೂ ಓದಿ: Ramadan 2022 Timetable: ಈ ವರ್ಷ ರಂಜಾನ್ ಯಾವಾಗ? ಭಾರತದಲ್ಲಿ ‘ಸೆಹ್ರಿ’ ಮತ್ತು ‘ಇಫ್ತಾರ್’ ಸಮಯದ ಡಿಟೇಲ್ಸ್ ಇಲ್ಲಿದೆ

ಗುಜರಾತ್ ನಲ್ಲಿ ಅರವಿಂದ ಕೇಜ್ರಿವಾಲ್ ಗೆ ಭಾರಿ ಸ್ವಾಗತ, ಱಲಿಯಲ್ಲಿ ಜನಸಾಗರ!

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ