AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shani Retrograde 2026: ಶನಿಯ ಹಿಮ್ಮುಖ ಚಲನೆ ಆರಂಭ! ಈ 4 ರಾಶಿಗೆ ಕಾದಿದೆ ಸಂಕಷ್ಟದ ಕಾಲ

ಜುಲೈ 27 ರಿಂದ ಶನಿ ದೇವನು 138 ದಿನಗಳ ಕಾಲ ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಈ 'ಕರ್ಮಫಲದಾತ'ನ ವಕ್ರ ಚಲನೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ, ಮುಖ್ಯವಾಗಿ ಮೇಷ, ಕನ್ಯಾ, ಧನು ಮತ್ತು ಮೀನ ರಾಶಿಗಳ ಜನರು ಕೌಟುಂಬಿಕ ಕಲಹ, ವೃತ್ತಿ ಹಿನ್ನಡೆ, ಆರೋಗ್ಯ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಶನಿವಾರದ ಪೂಜೆ ಮತ್ತು ಹನುಮಾನ್ ಚಾಲೀಸಾ ಪಠಣದಿಂದ ಇದರ ಪ್ರಭಾವ ತಗ್ಗಿಸಬಹುದು.

Shani Retrograde 2026: ಶನಿಯ ಹಿಮ್ಮುಖ ಚಲನೆ ಆರಂಭ! ಈ 4 ರಾಶಿಗೆ ಕಾದಿದೆ ಸಂಕಷ್ಟದ ಕಾಲ
ಶನಿಯ ಹಿಮ್ಮುಖ ಚಲನೆImage Credit source: Pinterest
ಅಕ್ಷತಾ ವರ್ಕಾಡಿ
|

Updated on: Apr 25, 2026 | 1:07 PM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಎನಿಸಿಕೊಂಡಿರುವ ಶನಿ ದೇವನು ‘ಕರ್ಮಫಲದಾತ’. ನಾವು ಮಾಡುವ ಕೆಲಸಗಳಿಗೆ ತಕ್ಕಂತೆ ಫಲ ನೀಡುವ ಶನಿಯು ಜುಲೈ 27 ರಿಂದ ಮೀನ ರಾಶಿಯಲ್ಲಿ ತನ್ನ ಪಥವನ್ನು ಬದಲಿಸಿ, ಹಿಮ್ಮುಖವಾಗಿ (Retrograde) ಚಲಿಸಲಿದ್ದಾನೆ. ಸುಮಾರು 138 ದಿನಗಳ ಕಾಲ ನಡೆಯುವ ಶನಿಯ ಈ ವಕ್ರ ಚಲನೆಯು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, ಮುಖ್ಯವಾಗಿ ನಾಲ್ಕು ರಾಶಿಗಳ ಜನರು ಜೀವನದಲ್ಲಿ ಅಗ್ನಿಪರೀಕ್ಷೆ ಎದುರಿಸಬೇಕಾಗಬಹುದು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ಆ ಸಂಕಷ್ಟಕ್ಕೊಳಗಾಗುವ ರಾಶಿಗಳು ಯಾವುವು? ಮತ್ತು ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಸಂಪೂರ್ಣ ವಿವರ.

ಮೇಷ ರಾಶಿಗೆ ಕೌಟುಂಬಿಕ ಕಲಹದ ಭೀತಿ:

ಮೇಷ ರಾಶಿಯವರಿಗೆ ಜುಲೈ 27 ರಿಂದ ಕಠಿಣ ಸಮಯ ಆರಂಭವಾಗಲಿದೆ. ಶನಿಯ ಹಿಮ್ಮುಖ ಚಲನೆಯು ಈ ರಾಶಿಯ ಎರಡನೇ ಮನೆಯಲ್ಲಿ ಪ್ರಭಾವ ಬೀರಲಿದೆ. ಕುಟುಂಬದಲ್ಲಿ ಸಣ್ಣ ವಿಷಯಗಳಿಗೂ ದೊಡ್ಡ ವಿವಾದಗಳು ಸೃಷ್ಟಿಯಾಗಬಹುದು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ, ಅರ್ಧಕ್ಕೆ ನಿಂತ ಕೆಲಸಗಳು ಮಾನಸಿಕ ಒತ್ತಡ ಹೆಚ್ಚಿಸಬಹುದು. ಹಣಕಾಸಿನ ವ್ಯವಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಉತ್ತಮ.

ಕನ್ಯಾ ರಾಶಿಗೆ ವೃತ್ತಿ ಜೀವನದಲ್ಲಿ ಹಿನ್ನಡೆ:

ಕನ್ಯಾ ರಾಶಿಯ ಉದ್ಯೋಗಿಗಳಿಗೆ ಈ ಅವಧಿಯು ಸವಾಲಿನಿಂದ ಕೂಡಿರಲಿದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗಬಹುದು. ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಅದಕ್ಕೆ ತಕ್ಕ ಮನ್ನಣೆ ಅಥವಾ ಬಡ್ತಿ ಸಿಗದೆ ನಿರಾಶೆಯಾಗುವ ಸಾಧ್ಯತೆ ಇದೆ. ಮಾನಸಿಕ ಶಾಂತಿ ಕಳೆದುಕೊಳ್ಳಬೇಡಿ; ತಾಳ್ಮೆಯಿಂದ ಕೆಲಸ ನಿರ್ವಹಿಸಿ.

ಧನು ರಾಶಿಗೆ ಆರೋಗ್ಯದ ಬಗ್ಗೆ ಇರಲಿ ಎಚ್ಚರ:

ಧನು ರಾಶಿಯವರಿಗೆ ಈ ಅವಧಿಯಲ್ಲಿ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಏರುಪೇರಾಗುವ ಸಂಭವವಿದೆ. ಪರಿಣಾಮ ಅನಗತ್ಯ ಖರ್ಚುಗಳು ಹೆಚ್ಚಾಗಿ ಆರ್ಥಿಕ ಸಂಕಷ್ಟ ಎದುರಾಗಬಹುದು. ವಿಶೇಷವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು, ಇದು ಆಸ್ಪತ್ರೆ ವಾಸಕ್ಕೂ ಕಾರಣವಾಗಬಹುದು. ಆಹಾರ ಪದ್ಧತಿಯಲ್ಲಿ ಶಿಸ್ತು ಇರಲಿ ಮತ್ತು ಹಣ ವ್ಯಯ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ.

ಇದನ್ನೂ ಓದಿ: ಭಾರತದ ಈ ಪಟ್ಟಣದಲ್ಲಿ ಈರುಳ್ಳಿ ಮಾರಾಟ ಮಾಡುವಂತಿಲ್ಲ, ನಿಷೇಧದ ಹಿಂದಿನ ಕುತೂಹಲಕಾರಿ ಸಂಗತಿ ಇಲ್ಲಿದೆ

ಮೀನ ರಾಶಿಗೆ ವ್ಯವಹಾರದಲ್ಲಿ ನಷ್ಟದ ಭೀತಿ:

ಶನಿಯು ಮೀನ ರಾಶಿಯಲ್ಲೇ ಹಿಮ್ಮುಖವಾಗಿ ಚಲಿಸುತ್ತಿರುವುದರಿಂದ, ಈ ರಾಶಿಯವರಿಗೆ ನೇರ ಪ್ರಭಾವ ಬೀಳಲಿದೆ. ಪರಿಣಾಮ ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗದೆ ನಷ್ಟ ಉಂಟಾಗಬಹುದು. ಉದ್ಯೋಗದಲ್ಲಿ ಅಸ್ಥಿರತೆ ಕಾಡಬಹುದು ಮತ್ತು ಮಾನಸಿಕ ಗೊಂದಲಗಳು ನಿಮ್ಮನ್ನು ಕಾಡಲಿವೆ. ಯಾವುದೇ ಹೊಸ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಕಡ್ಡಾಯ.

ಶನಿ ದೋಷದ ಪ್ರಭಾವ ತಗ್ಗಿಸಲು ಸರಳ ಪರಿಹಾರಗಳು:

ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಜ್ಯೋತಿಷ್ಯ ಶಾಸ್ತ್ರವು ಕೆಲವು ಪರಿಹಾರಗಳನ್ನು ಸೂಚಿಸುತ್ತದೆ:

  • ಪ್ರತಿ ಶನಿವಾರ ಶನಿ ದೇವನಿಗೆ ಎಳ್ಳೆಣ್ಣೆ ದೀಪ ಹಚ್ಚಿ.
  • ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿ ದೋಷದ ತೀವ್ರತೆ ಕಡಿಮೆಯಾಗುತ್ತದೆ.
  • ಅಶಕ್ತರಿಗೆ ಮತ್ತು ಬಡವರಿಗೆ ಕಪ್ಪು ಬಟ್ಟೆ ಅಥವಾ ಅನ್ನ ದಾನ ಮಾಡಿ.

ಗಮನಿಸಿ: ಈ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರದ ಸಾಮಾನ್ಯ ಲೆಕ್ಕಾಚಾರಗಳನ್ನು ಆಧರಿಸಿದೆ. ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ನುರಿತ ಜ್ಯೋತಿಷಿಗಳನ್ನು ಸಂಪರ್ಕಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್
ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್
ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ
ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ
ಟ್ರಾಫಿಕ್ ಪೊಲೀಸ್ ಬೈಕ್​ನಲ್ಲಿ ಅಡಗಿತ್ತು ಹಾವು! ವೀಡಿಯೋ ನೋಡಿ
ಟ್ರಾಫಿಕ್ ಪೊಲೀಸ್ ಬೈಕ್​ನಲ್ಲಿ ಅಡಗಿತ್ತು ಹಾವು! ವೀಡಿಯೋ ನೋಡಿ
ಅದ್ಭುತವಾಗಿ ‘ಅಂದೊಂದಿತ್ತು ಕಾಲ’ ಹಾಡನ್ನು ಹಾಡಿದ ರಾಮನಗರದ ಝೋಹಾನ್
ಅದ್ಭುತವಾಗಿ ‘ಅಂದೊಂದಿತ್ತು ಕಾಲ’ ಹಾಡನ್ನು ಹಾಡಿದ ರಾಮನಗರದ ಝೋಹಾನ್
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿ ಅವಘಡ
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿ ಅವಘಡ
ಶಾಸಕ ಲಕ್ಷ್ಮಣ ಸವದಿ ಕಣ್ಣೆದುರಲ್ಲೇ ಪ್ರಾಣಬಿಟ್ಟ ಆಪ್ತ!
ಶಾಸಕ ಲಕ್ಷ್ಮಣ ಸವದಿ ಕಣ್ಣೆದುರಲ್ಲೇ ಪ್ರಾಣಬಿಟ್ಟ ಆಪ್ತ!
ಮಹಿಳೆ ನೆಲಕ್ಕೆ ಬಿದ್ದರೂ ಬಿಡದೆ ಎಳೆದಾಡಿ ಸರ ಅಪಹರಿಸಿದ ಭೀಕರ ದೃಶ್ಯ ವೈರಲ್
ಮಹಿಳೆ ನೆಲಕ್ಕೆ ಬಿದ್ದರೂ ಬಿಡದೆ ಎಳೆದಾಡಿ ಸರ ಅಪಹರಿಸಿದ ಭೀಕರ ದೃಶ್ಯ ವೈರಲ್
ಇಂದು ಈ ರಾಶಿಯವರಿಗೆ ಮನೆ ಖರೀದಿ ಯೋಗ!
ಇಂದು ಈ ರಾಶಿಯವರಿಗೆ ಮನೆ ಖರೀದಿ ಯೋಗ!
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ