Kaala Bhairava Ashtakam: ಕಾಲಭೈರವನ ಅನುಗ್ರಹಕ್ಕಾಗಿ ಭೈರವಾಷ್ಟಕ ಪಠಿಸುವ ವಿಧಾನ ಇಲ್ಲಿದೆ

Kaala Bhairava Ashtakam: ಕಾಲಭೈರವನ ಅನುಗ್ರಹಕ್ಕಾಗಿ ಭೈರವಾಷ್ಟಕ ಪಠಿಸುವ ವಿಧಾನ ಇಲ್ಲಿದೆ
ಕಾಲಭೈರವನ ಅನುಗ್ರಹಕ್ಕಾಗಿ ಭೈರವಾಷ್ಟಕ ಪಠಿಸುವ ವಿಧಾನ ಇಲ್ಲಿದೆ

ಶಿವನಿಗೆ ಅರ್ಪಿತವಾದ ಸೋಮವಾರ ಹಾಗೂ ಭೈರವನಿಗೆ ಅರ್ಪಿತವಾದ ಅಷ್ಟಮಿ. ಕಾಲಭೈರವನ ಈ ಎಂಟು ಪದ್ಯಗಳನ್ನು ಅಭ್ಯಸಿಸುವವರಿಗೆ ಜ್ಞಾನ ಮತ್ತು ವಿಮೋಚನೆಯ ಹಾದಿ ದೊರೆಯುತ್ತದೆ. ದುಃಖ, ಖಿನ್ನತೆ, ದುರಾಸೆ, ಕೋಪವನ್ನು ಇದು ದೂರ ಮಾಡುತ್ತದೆ. ಕಾಲಭೈರವನ ಚರಣಗಳಿಗೆ ಬಿದ್ದು ಎಲ್ಲಾ ದುಃಖಗಳನ್ನು ನೀಗಿಸಿಕೊಳ್ಳೋಣ. ‌

TV9kannada Web Team

| Edited By: sadhu srinath

May 10, 2022 | 6:06 AM

ಕಾಲಭೈರವ ಅವತಾರವು ಶಿವನ ಭಯಭೀತಗೊಳಿಸುವ ಅವತಾರವೆಂದೇ ಪರಿಗಣಿಸಲಾಗಿದೆ. ಈ ರೂಪದಲ್ಲಿ ಶಿವನು ಕ್ರೋಧದಿಂದ ಕೂಡಿರುತ್ತಾರೆ ಮತ್ತು ಎದುರಿಗೆ ಬಂದವರನ್ನು ದಹಿಸಿಬಿಡುತ್ತಾನೇನೋ ಎಂಬ ರೀತಿಯಲ್ಲಿ ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಕಾಲಭೈರವ ಎಂಬ ಹೆಸರಿನಲ್ಲಿ ಎರಡು ಅರ್ಥಗಳು ಅಡಗಿದ್ದು ಒಂದು ಭಯ ಭೀತಗೊಳಿಸುವ ದೇವರು ಭೈರವನ ಅರ್ಥವನ್ನು ಕಂಡುಕೊಂಡರೆ ಇನ್ನೊಂದೆಡೆ ಕಾಲ ಅಂದರೆ ಕಪ್ಪಿನ ಬಣ್ಣದ ದೇವರ ಅವತಾರವೆಂಬುದಾಗಿ ನಾವು ಗ್ರಹಿಸಿಕೊಳ್ಳಬಹುದಾಗಿದೆ. ಅಂತೆಯೇ ಸಮಯ ಮತ್ತು ಅದರ ಕಳೆದುಹೋಗುವಿಕೆಯನ್ನು ಕೂಡ ಕಾಲ ನಮಗೆ ತಿಳಿಸುತ್ತದೆ (Kaala Bhairava Ashtakam).

ಭೈರವನಿಗೆ ಅಷ್ಟಮಿಯನ್ನು ಅರ್ಪಿಸಲಾಗಿದೆ. ಪಕ್ಷದ ಅಷ್ಟಮಿಯಂದು ಕಾಲಾಷ್ಟಮಿ ಎಂದು ಆಚರಿಸಲಾಗುತ್ತದೆ. ಶಿವನು ಕಾಲಭೈರವನ ಅವತಾರವನ್ನು ಎತ್ತಿರುವುದು ಈ ಸಮಯಲ್ಲಿ ಎಂಬುದಾಗಿ ನಂಬಲಾಗಿದೆ. ಇದಕ್ಕನುಗುಣವಾಗಿ ಕಾಲಭೈರವನ ಭಕ್ತರು ವ್ರತವನ್ನು ಆಚರಿಸುತ್ತಾರೆ ಅಂತೆಯೇ ಭೈರವನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನಕ್ಕೆ ಹೋಗಿ ಈ ಮಂತ್ರವನ್ನು ಪಠಿಸಿದರೆ ಉತ್ತಮ ಫಲ ದೊರೆಯುತ್ತದೆ.

ಶಿವನಿಗೆ ಅರ್ಪಿತವಾದ ಸೋಮವಾರ ಹಾಗೂ ಭೈರವನಿಗೆ ಅರ್ಪಿತವಾದ ಅಷ್ಟಮಿ. ಕಾಲಭೈರವನ ಈ ಎಂಟು ಪದ್ಯಗಳನ್ನು ಅಭ್ಯಸಿಸುವವರಿಗೆ ಜ್ಞಾನ ಮತ್ತು ವಿಮೋಚನೆಯ ಹಾದಿ ದೊರೆಯುತ್ತದೆ. ದುಃಖ, ಖಿನ್ನತೆ, ದುರಾಸೆ, ಕೋಪವನ್ನು ಇದು ದೂರ ಮಾಡುತ್ತದೆ. ಕಾಲಭೈರವನ ಚರಣಗಳಿಗೆ ಬಿದ್ದು ಎಲ್ಲಾ ದುಃಖಗಳನ್ನು ನೀಗಿಸಿಕೊಳ್ಳೋಣ. ‌

ಶ್ರೀ ಕಾಲಭೈರವಾಷ್ಟಕಂ:

ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಮ್ | ನಾರದಾದಿಯೋಗಿಬೃಂದವಂದಿತಂ ದಿಗಂಬರಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 1 ||

ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್ | ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 2 ||

ಶೂಲಟಂಕಪಾಶದಂಡಪಾಣಿಮಾದಿಕಾರಣಂ ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ | ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 3 ||

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ ಭಕ್ತವತ್ಸಲಂ ಸ್ಥಿರಂ ಸಮಸ್ತಲೋಕವಿಗ್ರಹಮ್ | ನಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 4 ||

ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್ | ಸ್ವರ್ಣವರ್ಣಕೇಶಪಾಶಶೋಭಿತಾಂಗನಿರ್ಮಲಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 5 ||

ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಮ್ | ಮೃತ್ಯುದರ್ಪನಾಶನಂ ಕರಾಲದಂಷ್ಟ್ರಭೂಷಣಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 6 ||

ಅಟ್ಟಹಾಸಭಿನ್ನಪದ್ಮಜಾಂಡಕೋಶಸಂತತಿಂ ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಮ್ | ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 7 ||

ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ ಕಾಶಿವಾಸಿಲೋಕಪುಣ್ಯಪಾಪಶೋಧಕಂ ವಿಭುಮ್ | ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 8 ||

ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ ಜ್ಞಾನಮುಕ್ತಿಸಾಧಕಂ ವಿಚಿತ್ರಪುಣ್ಯವರ್ಧನಮ್ | ಶೋಕಮೋಹದೈನ್ಯಲೋಭಕೋಪತಾಪನಾಶನಂ ತೇ ಪ್ರಯಾಂತಿ ಕಾಲಭೈರವಾಂಘ್ರಿಸನ್ನಿಧಿಂ ಧ್ರುವಮ್ || 9 || ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತಂ ಕಾಲಭೈರವಾಷ್ಟಕಂ ಸಂಪೂರ್ಣಮ್ | (ಬರಹ: ವಾಟ್ಸಪ್ ಸಂದೇಶ)

Follow us on

Related Stories

Most Read Stories

Click on your DTH Provider to Add TV9 Kannada