AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಲು ಮನೆಯೊಳಗೆ ಬಂದರೆ ಶುಭನಾ ಅಥವಾ ಅಶುಭನಾ? ಧಾರ್ಮಿಕ ನಂಬಿಕೆಗಳು ಹೇಳುವುದೇನು?

ಅಳಿಲು ಮನೆಗೆ ಬಂದರೆ ಅದು ಶುಭವೇ ಅಥವಾ ಅಶುಭವೇ ಎಂಬ ಪ್ರಶ್ನೆಗೆ ಧಾರ್ಮಿಕ ನಂಬಿಕೆಗಳು ಸ್ಪಷ್ಟ ಉತ್ತರ ನೀಡುತ್ತವೆ. ಅಳಿಲು ಮಹಾಲಕ್ಷ್ಮಿ ಮತ್ತು ಶ್ರೀರಾಮನ ಆಶೀರ್ವಾದದ ಸಂಕೇತವಾಗಿದೆ. ಇದು ಮನೆಗೆ ಸಂಪತ್ತು, ಆರ್ಥಿಕ ವೃದ್ಧಿ, ಯಶಸ್ಸು ತರುತ್ತದೆ. ಆದರೆ, ಈ ಪುಟ್ಟ ಜೀವಿಗೆ ತೊಂದರೆ ನೀಡದೆ ಗೌರವಿಸುವುದು ಅತಿ ಮುಖ್ಯ.

ಅಳಿಲು ಮನೆಯೊಳಗೆ ಬಂದರೆ ಶುಭನಾ ಅಥವಾ ಅಶುಭನಾ? ಧಾರ್ಮಿಕ ನಂಬಿಕೆಗಳು ಹೇಳುವುದೇನು?
ಅಳಿಲುImage Credit source: Getty Images
ಅಕ್ಷತಾ ವರ್ಕಾಡಿ
|

Updated on:Oct 31, 2026 | 8:00 AM

Share

ನಮ್ಮ ದೈನಂದಿನ ಜೀವನದಲ್ಲಿ ಅನೇಕ ರೀತಿಯ ಸಣ್ಣಪುಟ್ಟ ಘಟನೆಗಳು ಅಥವಾ ಪ್ರಾಣಿ-ಪಕ್ಷಿಗಳ ಆಗಮನವು ವಿಶೇಷ ಸಂಕೇತಗಳನ್ನು ನೀಡುತ್ತವೆ ಎಂದು ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳು ಹೇಳುತ್ತವೆ. ಪ್ರಕೃತಿಯ ಸುಂದರ ಜೀವಿಯಾದ ‘ಅಳಿಲು’ ಮನೆಯ ಸುತ್ತಮುತ್ತ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಅಳಿಲು ಮನೆಯೊಳಗೆ ಬಂದರೆ ಅದು ಶುಭ ಸೂಚನೆಯೇ ಅಥವಾ ಅಶುಭವೇ ಎಂಬ ಅನುಮಾನ ಅನೇಕರಲ್ಲಿದೆ. ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳ ಪ್ರಕಾರ ಅಳಿಲಿನ ಆಗಮನದ ಮಹತ್ವ ಇಲ್ಲಿದೆ.

ಶ್ರೀರಾಮನಿಗೆ ಸಹಾಯ ಮಾಡಿದ ಪವಿತ್ರ ಜೀವಿಯಾದ ಅಳಿಲು:

ಹಿಂದೂ ನಂಬಿಕೆಗಳು ಹಾಗೂ ಪೌರಾಣಿಕ ಕಥೆಗಳ ಪ್ರಕಾರ, ಅಳಿಲು ಸಾಕ್ಷಾತ್ ಶ್ರೀರಾಮಚಂದ್ರನಿಗೆ ರಾಮಸೇತು ನಿರ್ಮಾಣದ ಸಮಯದಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಿ ಆಶೀರ್ವಾದ ಪಡೆದ ಪವಿತ್ರ ಜೀವಿಯಾಗಿದೆ. ಜೊತೆಗೆ ಇದನ್ನು ಮಹಾಲಕ್ಷ್ಮಿ ದೇವಿಯ ಶುಭ ಸಂಕೇತ ಎಂದೂ ಸಹ ಪರಿಗಣಿಸಲಾಗುತ್ತದೆ. ಆದ್ದರಿಂದ ಅಳಿಲನ್ನು ನೋಡುವುದೇ ಶ್ರೇಯಸ್ಕರ. ಬೆಳಗಿನ ಜಾವದಲ್ಲಿ ಅಳಿಲಿನ ದರ್ಶನವಾದರೆ ಆ ದಿನ ಕೈಗೊಳ್ಳುವ ಎಲ್ಲಾ ಕೆಲಸ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗುತ್ತವೆ ಎಂಬ ನಂಬಿಕೆಯಿದೆ.

ಅಳಿಲು ಮನೆಯೊಳಗೆ ಬಂದರೆ ಸಿಗುವ ಶುಭ ಫಲಗಳು:

ಅಳಿಲು ಮನೆಯೊಳಗೆ ಪ್ರವೇಶಿಸುವುದು ಅತ್ಯಂತ ಶುಭವೆಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಿ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಕೆಟ್ಟ ಜನರ ಸಹವಾಸ ಅಥವಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಕೈಗೊಂಡ ಕಾರ್ಯಗಳಲ್ಲಿ ವಿಜಯ ಪ್ರಾಪ್ತಿಯಾಗುವುದರ ಜೊತೆಗೆ ಸಮಾಜದಲ್ಲಿ ಅಧಿಕಾರ ಯೋಗ ದೊರೆಯುವ ಸಾಧ್ಯತೆಗಳೂ ಇರುತ್ತವೆ.

ಇದನ್ನೂ ಓದಿ: ಶನಿ ಸಾಡೇ ಸಾತಿ ಮುಗಿದ ತಕ್ಷಣ ಜೀವನದಲ್ಲಿ ನಡೆಯುವ 5 ಪ್ರಮುಖ ಬದಲಾವಣೆಗಳಿವು!

ಅಳಿಲು ವಿಷಯದಲ್ಲಿ ಅನುಸರಿಸಬೇಕಾದ ಪ್ರಮುಖ ನಿಯಮಗಳು:

ಅಳಿಲು ಶುಭ ತಂದರೂ, ಕೆಲವು ವಿಷಯಗಳಲ್ಲಿ ಜಾಗ್ರತೆ ವಹಿಸುವುದು ಅವಶ್ಯಕ. ಅಳಿಲು ಶುಭ ಸಂಕೇತವಾಗಿದ್ದರೂ, ಅದನ್ನು ಬಲವಂತವಾಗಿ ಮುಟ್ಟುವುದು ಅಥವಾ ಸ್ಪರ್ಶಿಸಲು ಹೋಗುವುದು ಸರಿಯಲ್ಲ. ಮನೆಯೊಳಗೆ ಅಳಿಲಿನ ಆಗಮನವು ಧನಾತ್ಮಕ ಬದಲಾವಣೆಗಳು ಮತ್ತು ಲಕ್ಷ್ಮಿ ದೇವಿಯ ಕೃಪೆಯ ಸಂಕೇತವಾಗಿದೆ. ಪ್ರಕೃತಿಯ ಈ ಸಣ್ಣ ಜೀವಿಗೆ ತೊಂದರೆ ನೀಡದೆ ಅದನ್ನು ಗೌರವಿಸುವುದು ಸಾಂಪ್ರದಾಯಿಕ ಹಾಗೂ ಮಾನವೀಯ ದೃಷ್ಟಿಯಿಂದ ಅತ್ಯಂತ ಸೂಕ್ತ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:59 am, Sat, 31 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?