ವೈಕುಂಠ ಏಕಾದಶಿ 2021: ಈ ದಿನ ಉಪವಾಸ ಮಾಡುವುದೇಕೆ? ಇಲ್ಲಿದೆ ವೈಕುಂಠ ಏಕಾದಶಿಯ ತಿಥಿ ಸಮಯ, ಪೂಜಾ ವಿಧಾನ
Vaikuntha Ekadashi 2021: ವಿಷ್ಣುವಿನ ಭಕ್ತರು ಎಲ್ಲಾ ಏಕಾದಶಿಯಂದು ಉಪವಾಸ ಮಾಡುತ್ತಾರೆ. ಆದರೆ, ವೈಕುಂಠ ಏಕಾದಶಿಯನ್ನು ಸರ್ವಶ್ರೇಷ್ಠವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನದ ಉಪವಾಸವು ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು ಆಚರಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತೆ.
ಹಿಂದೂ ಪುರಾಣಗಳಲ್ಲಿ ಏಕಾದಶಿ ಮತ್ತು ಏಕಾದಶಿ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಮಹಾಭಾರತದಲ್ಲೂ ಏಕಾದಶಿ ಉಪವಾಸದ ಬಗ್ಗೆ ಉಲ್ಲೇಖಿಸಲಾಗಿದೆ. ಪಂಚಾಂಗದ ಪ್ರಕಾರ ಮಾರ್ಗಶಿರ ಅಥವಾ ಧನುರ್ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ಮೋಕ್ಷದ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತೆ. ಇದು ವರ್ಷದ ಕೊನೆಯ ಏಕಾದಶಿಯಾಗಿದ್ದು ಈ ಬಾರಿ ಡಿಸೆಂಬರ್ 14 ರಂದು ಆಚರಿಸಲಾಗುತ್ತದೆ.
ವೈಕುಂಠ ಏಕಾದಶಿ 2021 ತಿಥಿ ಸಮಯ ಏಕಾದಶಿ ತಿಥಿಯು ಡಿಸೆಂಬರ್ 13 ರಂದು ರಾತ್ರಿ 9:32 ರಿಂದ ಶುರುವಾಗಿ ಡಿಸೆಂಬರ್ 14 ರಂದು ರಾತ್ರಿ 11:35 ಕ್ಕೆ ಕೊನೆಗೊಳ್ಳುತ್ತದೆ.
ವೈಕುಂಠ ಏಕಾದಶಿ ಪೂಜೆ ವಿಧಾನ ಈ ದಿನ ಮುಂಜಾನೆ ಸ್ನಾನ ಮಾಡಿ ಗಂಗಾ ನೀರನ್ನು ಮನೆಯ ದೇವಾಲಯದಲ್ಲಿ ಸಿಂಪಡಿಸಿ ಪವಿತ್ರಗೊಳಿಸಿಬೇಕು. ಬಳಿಕ ಭಗವಾನ್ ವಿಷ್ಣುವಿನ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಉಪವಾಸ ವ್ರತವನ್ನು ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ನಂತರ ವಿಷ್ಣುವಿನ ಕಥೆಯನ್ನು ಓದಬಹುದು ಅಥವಾ ಕೇಳಬಹುದು. ಈ ಉಪವಾಸದಲ್ಲಿ ಆಹಾರವನ್ನು ತೆಗೆದುಕೊಳ್ಳಲಾಗುವುದಿಲ್ಲ. ಮರುದಿನ, ಸ್ನಾನ ಮಾಡಿದ ನಂತರ, ಮತ್ತೊಮ್ಮೆ ಪೂಜೆಯನ್ನು ಮಾಡಿ ಉಪವಾಸವನ್ನು ಮುರಿಯಬೇಕು.
ವೈಕುಂಠ ಏಕಾದಶಿಯ ಮಹತ್ವ ಬ್ರಹ್ಮ, ವಿಷ್ಣು, ಮಹೇಶ್ವರನನ್ನು ತ್ರಿಮೂರ್ತಿಗಳೆಂದು ಕರೆಯಲಾಗುತ್ತೆ. ಸೃಷ್ಟಿಕರ್ತ ಬ್ರಹ್ಮನಿರುವ ತಾಣ ಬ್ರಹ್ಮಲೋಕ ರಕ್ಷಕ ವಿಷ್ಣು ಇರುವ ನೆಲೆ ವೈಕುಂಠ ಮತ್ತು ಮಹಾದೇವ ಮಹೇಶ್ವರನಿರುವುದು ಕೈಲಾಸದಲ್ಲಿ. ಆದ್ರೆ ವಿಶೇಷ ಅಂದ್ರೆ ವೈಕುಂಠದಲ್ಲಿ ಯಾವುದೇ ಕಷ್ಟ-ಕಾರ್ಪಣ್ಯಗಳು ಇರುವುದಿಲ್ಲವಂತೆ. ಬರೀ ಸಂತೋಷವೇ ತುಂಬಿರುತ್ತದೆ. ಹೀಗಾಗಿ ವೈಕುಂಠದಲ್ಲಿ ಸ್ಥಾನ ಪಡೆಯಲು ಜನ ಹಂಬಲಿಸುತ್ತಾರೆ. ವೈಕುಂಠ ಅಥವಾ ಮೋಕ್ಷದ ಏಕಾದಶಿಯಂದು ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, (ಸಂತರು ಮತ್ತು ವಿದ್ವಾಂಸರು) ಮೋಕ್ಷ ಅಥವಾ ಜನ್ಮ, ಜೀವನ ಮತ್ತು ಮರಣದ ವಿಷವರ್ತುಲದಿಂದ ವಿಮೋಚನೆಯನ್ನು ಬಯಸುವವರು, ವೈಕುಂಠ ಏಕಾದಶಿ ತಿಥಿಯಂದು ವ್ರತವನ್ನು ಆಚರಿಸುವ ಮೂಲಕ ತಮ್ಮ ಅತ್ಯುನ್ನತ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ದಿನ ಭಕ್ತಿಯಿಂದ ಉಪವಾಸ ಮಾಡಿ ಪೂಜೆ ಮಾಡುವ ಭಕ್ತರಿಗೆ ಮರಣದ ನಂತರ ವೈಕುಂಠದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ.
ಸಾಮಾನ್ಯವಾಗಿ ವಿಷ್ಣುವಿನ ಭಕ್ತರು ಎಲ್ಲಾ ಏಕಾದಶಿಯಂದು ಉಪವಾಸ ಮಾಡುತ್ತಾರೆ. ಆದರೆ, ವೈಕುಂಠ ಏಕಾದಶಿಯನ್ನು ಸರ್ವಶ್ರೇಷ್ಠವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನದ ಉಪವಾಸವು ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು ಆಚರಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತೆ. ಮತ್ತು ಭಗವಾನ್ ವಿಷ್ಣು ಮತ್ತು ಅವನ ವಿವಿಧ ಅವತಾರಗಳಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಈ ದಿನದಂದು ವಿಶೇಷ ಪೂಜೆ ಮತ್ತು ಆಚರಣೆಗಳನ್ನು ಆಯೋಜಿಸಲಾಗುತ್ತದೆ. ಉದಾಹರಣೆಗೆ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಮತ್ತು ತಮಿಳುನಾಡಿನ ಶ್ರೀರಂಗಂ ದೇವಾಲಯಗಳು ವೈಕುಂಠ ಏಕಾದಶಿ ಆಚರಣೆಗಳಿಗೆ ಹೆಸರುವಾಸಿಯಾಗಿದೆ.
ಜೊತೆಗೆ ಧನುರ್ಮಾಸವನ್ನು ಶ್ರೀಕೃಷ್ಣನ ಅತ್ಯಂತ ಪ್ರಿಯವಾದ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ದಿನ ಮಾಡುವ ಉಪವಾಸವು ವ್ಯಕ್ತಿಯ ಎಲ್ಲಾ ರೀತಿಯ ಪಾಪಗಳನ್ನು ನಿವಾರಿಸುತ್ತದೆ, ಆಶಯಗಳನ್ನು ಪೂರೈಸುತ್ತದೆ ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ತರುತ್ತದೆ. ಮಹಾಭಾರತದ ಕಾಲದಲ್ಲಿ, ಶ್ರೀಕೃಷ್ಣನು ಯುಧಿಷ್ಠಿರ ಮತ್ತು ಅರ್ಜುನನಿಗೆ ಏಕಾದಶಿ ಉಪವಾಸದ ಬಗ್ಗೆ ವಿವರಿಸಿದ್ದನು. ಶ್ರೀಕೃಷ್ಣನ ಒತ್ತಾಯದ ಮೇರೆಗೆ ಯುಧಿಷ್ಠಿರನು ಏಕಾದಶಿ ಉಪವಾಸವನ್ನು ಆಚರಿಸುವ ಮೂಲಕ ವಿಷ್ಣುವನ್ನು ವಿಧಿ – ವಿಧಾನಗಳಿಂದ ಪೂಜಿಸಿದನು. ಅದರ ನಂತರ ಅವರು ಮಹಾಭಾರತದ ಯುದ್ಧದಲ್ಲಿ ಯಶಸ್ಸನ್ನು ಪಡೆದರು.
ಇದನ್ನೂ ಓದಿ: ಉತ್ಪನ್ನ ಏಕಾದಶಿಯಂದು ನಿರ್ಜಲ ಉಪವಾಸ ಮಾಡುವುದು ಹೇಗೆ? ಈ ದಿನ ಏನನ್ನು ಸೇವಿಸಬಾರದು?