AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಮಣ್ಣಿನ ಮಡಿಕೆ ಇದ್ದರೆ ಪ್ರಯೋಜನಗಳು ಅನೇಕ! ಅದನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಧನಲಾಭ ಆಗುತ್ತದೆ ಗೊತ್ತಾ?

ನೀವು ಮನೆಗೆ ಹೊಸದಾಗಿ ನೀರಿನ ಮಡಿಕೆಯನ್ನು ತಂದಾಗ ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿಡಬೇಕು. ಕುಬೇರನಿಗೆ ಉತ್ತರ ದಿಕ್ಕು ತುಂಬಾ ಪ್ರೀತಿಪಾತ್ರವಾದಂತಹುದು

ಮನೆಯಲ್ಲಿ ಮಣ್ಣಿನ ಮಡಿಕೆ ಇದ್ದರೆ ಪ್ರಯೋಜನಗಳು ಅನೇಕ! ಅದನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಧನಲಾಭ ಆಗುತ್ತದೆ ಗೊತ್ತಾ?
ಮನೆಯಲ್ಲಿ ಮಣ್ಣಿನ ಮಡಿಕೆ ಇದ್ದರೆ ಶುಭ! ಮಡಿಕೆ ಯಾವ ದಿಕ್ಕಿನಲ್ಲಿ ಇಟ್ಟರೆ ಕುಬೇರನ ಅನುಗ್ರಹ ಸಿಗುತ್ತದೆ ಗೊತ್ತಾ?
TV9 Web
| Updated By: ಸಾಧು ಶ್ರೀನಾಥ್​|

Updated on: May 14, 2022 | 6:06 AM

Share

ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನಿಂದ ಮಾಡಿರುವ ಯಾವುದೇ ವಸ್ತುವನ್ನು ನಿಬಂಧನೆಗಳ ಪ್ರಕಾರ ಉಪಯೋಗಿಸಿದರೆ ಹಣಕಾಸು ತೊಂದರೆ ದೂರವಾಗುತ್ತದೆ. ಅದೊಂದು ಕಾಲವಿತ್ತು. ಜನ ತಮ್ಮ ಮನೆಗಳಲ್ಲಿ ತಂಪು ತಂಪಾದ ಕುಡಿಯುವ ನೀರು ಹಿಡಿದಿಡಲು ಮಣ್ಣಿಂದ ಮಾಡಿದ ಮಡಿಕೆ ಅಥವಾ ಹೂಜಿಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಇಂದಿನ ಮನೆಗಳಲ್ಲಿ ಅವು ಮಾಯವಾಗಿವೆ. ಏಕೆಂದರೆ ರೆಫ್ರಿಜರೇಟರ್, ಕೂಲಿಂಗ್​ ಫಿಲ್ಟರ್​​ ಅಥವಾ ಜಸ್ಟ್​ ಬಾಟಲ್​ಗಳಲ್ಲಿ ನೀರು ಶೇಖರಿಸಿಟ್ಟುಕೊಂಡು ಕುಡಿಯುತ್ತಾರೆ. ಮಣ್ಣಿನ ಮಡಿಕೆಗಳು ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಕಾಣಬರುತ್ತಿವೆ ಅಷ್ಟೆ. ಆದರೆ ವಾಸ್ತವವಾಗಿ ಮತ್ತು ವಾಸ್ತು ಪ್ರಕಾರ ಈ ಮಣ್ಣಿಂದ ಮಾಡಿದ ಮಡಿಕೆಗಳನ್ನು ಬಳಸುವುದರಿಂದ ಪ್ರಯೋಜನಗಳಿವೆ. ಉತ್ತಮ ಆರೋಗ್ಯಕ್ಕೆ ಇದು ಹೇಳಿಮಾಡಿಸಿದಂತಿದೆ. ಅಷ್ಟೆ ಅಲ್ಲ; ವಾಸ್ತು ದೋಷ ನಿವಾರಣೆಯಲ್ಲಿ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಅನೇಕ ಲಾಭಗಳು ಇವೆ (Vastu Tips).

ವಾಸ್ತು ಶಾಸ್ತ್ರದ ಪ್ರಕಾರ ಈ ಮಡಿಕೆಗಳನ್ನು ಉಪಯೋಗಿಸಿದರೆ ಹಣಕಾಸು ಮುಗ್ಗಟ್ಟು ನಿವಾರಣೆಯಾಗುತ್ತದೆ. ಯಾವುದೇ ಕೆಲಸಕ್ಕೆ ಕೈಹಾಕಿದರೂ ಅದು ಸಫಲವಾಗುತ್ತದೆ.

  1. ಕುಟುಂಬಸ್ಥರ ಮಧ್ಯೆ ಪ್ರೇಮ ಉಕ್ಕುತ್ತದೆ: ವಾಸ್ತು ಪ್ರಕಾರ ಮನೆಯಲ್ಲಿ ಮಣ್ಣಿನ ಮಡಿಕೆಯಲ್ಲಿಟ್ಟ ತಣ್ಣನೆಯ ನೀರನ್ನು ಕುಡಿಯುವುದರಿಂದ ಕುಟುಂಬದ ಸದಸ್ಯರ ಮಧ್ಯೆ ಬಾಂಧವ್ಯ ತಂಪಾಗಿರುತ್ತದೆ. ಮಣ್ಣಿನ ಮಡಿಕೆಯಲ್ಲಿ ನೀರು ತಂಪಾಗಿರುತ್ತದೆ, ರುಚಿಯಾಗಿಯೂ ಇರುತ್ತದೆ ಅಷ್ಟೇ ಅಲ್ಲ, ಅದರ ವಾಸನೆಯೂ ಆಹ್ಲಾದತೆಯನ್ನು ತರುತ್ತದೆ. ಇದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ಮೂಡುತ್ತದೆ.
  2. ಗ್ರಹ ಗತಿಗಳು: ಮಣ್ಣಿನಿಂದ ಮಾಡಿದ ವಸ್ತುಗಳು ಜ್ಯೋತಿಷ್ಯ ಪರಿಹಾರಗಳಿಗೆ ಹೆಚ್ಚು ಸಮಂಜಸವಾಗಿ ಬಳಕೆಯಾಗುತ್ತದೆ. ಗ್ರಹಗಳನ್ನು ನಿಯಂತ್ರಿಸಲು ಮಣ್ಣಿನ ವಸ್ತುಗಳು ಉಪಯೋಗಕ್ಕೆ ಬರುತ್ತವೆ ಎಂಬುದು ಜ್ಯೋತಿಷಿಗಳ ಖಚಿತ ಅಭಿಪ್ರಾಯವಾಗಿದೆ. ಮನೆಯಲ್ಲಿ ಮಡಿಕೆಯಿದ್ದರೆ ಬುಧ ಮತ್ತು ಚಂದ್ರನ ಸ್ಥಾನಗಳು ಬಲಪಡುತ್ತವೆ. ಮುಖ್ಯವಾದ ವಿಷಯವೆಂದರೆ ಮಡಿಕೆಯನ್ನು ಎಂದಿಗೂ ಖಾಲಿ ಬಿಡಬಾರದು.
  3. ವಾಸ್ತು ನಿಯಮಗಳು: ಮಣ್ಣಿನ ಕುಡಿಕೆ ಕುರಿತು ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ನೀವು ಮನೆಯೊಳಕ್ಕೆ ಮಡಿಕೆಯನ್ನು ತಂದ ತಕ್ಷಣ ಮೊದಲು ಮಕ್ಕಳ ಕೈಗೆ ಸಿಗದಂತೆ ಭದ್ರಪಡಿಸಬೇಕು. ಹೀಗೆ ಮಾಡುವ ಕುಟುಂಬದಲ್ಲಿ ಐಶ್ವರ್ಯ ತಾನಾಗಿಯೇ ಒಲಿದುಬರುತ್ತದೆ. ಅಷ್ಟೇ ಅಲ್ಲ, ಕುಟುಂಬದ ಪೂರ್ವಿಕರ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ.
  4. ನೀರಿನ ಮಡಿಕೆಯನ್ನು ಯಾವ ದಿಕ್ಕಿಗೆ ಇಡಬೇಕು ಗೊತ್ತಾ?: ನೀವು ಮನೆಗೆ ಹೊಸದಾಗಿ ನೀರಿನ ಮಡಿಕೆಯನ್ನು ತಂದಾಗ ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿಡಬೇಕು. ಕುಬೇರನಿಗೆ ಉತ್ತರ ದಿಕ್ಕು ತುಂಬಾ ಪ್ರೀತಿಪಾತ್ರವಾದಂತಹುದು. ಹಾಗಾಗಿ ಮಣ್ಣಿನ ಕುಡಿಕೆಯನ್ನು ಉತ್ತರದ ದಿಕ್ಕಿನಲ್ಲಿ ಇಡಬೇಕು ಅನ್ನುತ್ತಾರೆ. ಹೀಗೆ ಮಾಡಿದರೆ ಮನೆಯಲ್ಲಿ ಹಣದ ಕೊರತೆ ತಲೆದೋರುವುದಿಲ್ಲ. ಆರ್ಥಿಕ ಲಾಭಗಳು ಹೆಚ್ಚಾಗುತ್ತದೆ. ಕುಬೇರನ ಅನುಗ್ರಹ ಹೊಂದಬಹುದು. (Source)

ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ