ರಾಮನ ಅನುಗ್ರಹಕ್ಕೆ ಈ ಮಂತ್ರಗಳನ್ನು ಯಾವ ಸಂದರ್ಭದಲ್ಲಿ ಪಠಿಸಬೇಕು?
ಹನುಮಂತನು ಕೂಡ ನಿರಂತರವಾಗಿ ರಾಮ ನಾಮವನ್ನು ಪಠಣ ಮಾಡಿ ಎಂದೇ ತನ್ನ ಭಕ್ತಿಯ ಮೂಲಕ ಪ್ರತಿಪಾದಿಸಿದ್ದಾನೆ. ನಮ್ಮ ಎಲ್ಲಾ ಆಸೆಗಳನ್ನು ಪೂರೈಸಲು ಮತ್ತು ಮುಕ್ತಿ ಪಡೆಯಲು ರಾಮ ನಾಮ ಪಠಿಸುವುದು ಅಂತಿಮ ಮಾರ್ಗವಾಗಿದೆ. ರಾಮನ ಯಾವ ಮಂತ್ರ ಪಠಿಸಬೇಕು? ಯಾವಾಗ ಹೇಳಬೇಕು? ಇದರಿಂದ ಸಿಗುವ ಪ್ರಯೋಜನಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
“ರಾಮ ನಾಮ ಒಂದೇ ಸಾಕು ಎನ್ನ ಜನುಮಕೆ” ಎಂಬ ಮಾತಿನಂತೆ ಪ್ರಭು ಶ್ರೀ ರಾಮಚಂದ್ರನ ನೆನೆದರೆ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತದೆ. ರಾಮನ ಪೂಜೆ ಮತ್ತು ಮಂತ್ರ ಪಠಣದಿಂದ ಕೇವಲ ರಾಮನ ಆಶೀರ್ವಾದ ಮಾತ್ರವಲ್ಲ, ಹನುಮಂತನ ಅನುಗ್ರಹವನ್ನೂ ಪಡೆದುಕೊಳ್ಳಬಹುದು. ಇನ್ನು ಶ್ರೀರಾಮನ ಮಂತ್ರ ಸ್ಮರಣೆ ಮಾಡುವುದು ಅತೀ ಸುಲಭ ಹಾಗೂ ದುಪ್ಪಟ್ಟು ಪ್ರಯೋಜನಕಾರಿ. ಇನ್ನು ಹನುಮಂತನು ಕೂಡ ನಿರಂತರವಾಗಿ ರಾಮ ನಾಮವನ್ನು ಪಠಣ ಮಾಡಿ ಎಂದೇ ತನ್ನ ಭಕ್ತಿಯ ಮೂಲಕ ಪ್ರತಿಪಾದಿಸಿದ್ದಾನೆ. ನಮ್ಮ ಎಲ್ಲಾ ಆಸೆಗಳನ್ನು ಪೂರೈಸಲು ಮತ್ತು ಮುಕ್ತಿ ಪಡೆಯಲು ರಾಮ ನಾಮ ಪಠಿಸುವುದು ಅಂತಿಮ ಮಾರ್ಗವಾಗಿದೆ. ರಾಮನ ಆಶೀರ್ವಾದ ಪಡೆದುಕೊಳ್ಳಲು ಯಾವ ಮಂತ್ರವನ್ನು ಪಠಿಸಬೇಕು? ಎಂತಹ ಸಂದರ್ಭದಲ್ಲಿ ಹೇಳಬೇಕು? ಇದರಿಂದ ಸಿಗುವ ಪ್ರಯೋಜನಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಮನ ಅನುಗ್ರಹಕ್ಕೆ ಯಾವ ಮಂತ್ರಗಳನ್ನು ಪಠಣ ಮಾಡಬೇಕು? ಇದರಿಂದ ಸಿಗುವ ಫಲಾಫಲಗಳೇನು?
-ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಈ ಮಂತ್ರವು ಭಗವಾನ್ ಶ್ರೀರಾಮನಿಗೆ ವಿವಿಧ ರೀತಿಯ ಹೆಸರುಗಳನ್ನು ಸಂಭೋದಿಸುವ ಮೂಲಕ ಆದರ್ಶ ಶಿಷ್ಯ, ಮರ್ಯಾದಾಪುರುಷೋತ್ತಮ, ಧರ್ಮಮೂರ್ತಿ, ದಾಶರಥಿ, ಕೌಸಲ್ಯಾನಂದವರ್ಧನ, ಪರಬ್ರಹ್ಮಸ್ವರೂಪ, ಪ್ರಜಾರಂಜಕ, ವೈದೇಹೀರಮಣ ಶ್ರೀರಾಮಚಂದ್ರನಿಗೆ ನಮಸ್ಕಾರ ಹೇಳುವ ಪರಿಯಾಗಿದೆ. ಇದನ್ನು ಪ್ರತಿನಿತ್ಯ ಪಠಣ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಕಷ್ಟದಲ್ಲಿರುವವರು ಈ ಮಂತ್ರವನ್ನು ಪ್ರತಿನಿತ್ಯ ಪಠಣ ಮಾಡುವುದು ಒಳಿತು.
-ಓಂ ಕ್ಲೀಮ್ ನಮೋ ಭಗವತೆ ರಾಮಚಂದ್ರಾಯ ಸಕಾಲಜನ ವಶ್ಯಕರಾಯ ಸ್ವಾಹಾ
ಈ ಮಂತ್ರವು ಪಠಣಕಾರನ ಜೀವನದಲ್ಲಿ ಯಶಸ್ಸು ಮತ್ತು ಸಂತೋಷವನ್ನು ನೀಡುವ ಮಂತ್ರವಾಗಿದೆ. ಈ ಮಂತ್ರವು ಭಗವಾನ್ ರಾಮನನ್ನು ಶಾಂತಿ ಮತ್ತು ಸಾಮರಸ್ಯವನ್ನು ನೀಡುವ ದೇವರೆಂದು ಹೊಗಳುತ್ತದೆ.
-ಶ್ರೀ ರಾಮ ಜಯ ರಾಮ ಕೋದಂಡ ರಾಮ
ರಾಕ್ಷಸರು ಮತ್ತು ದುಷ್ಟ ಶಕ್ತಿಗಳನ್ನು ಸೋಲಿಸಲು ರಾಮನು ತನ್ನ ಕೈಯಲ್ಲಿ ಹಿಡಿದಿರುವ ಬಿಲ್ಲಿನ ಹೆಸರು ಕೋದಂಡ. ಇದನ್ನು ಹೊತ್ತ ಭಗವಾನ್ ರಾಮನಿಗೆ ಜಯವಾಗಲಿ ಎಂಬುದು ಈ ಮಂತ್ರದ ಅರ್ಥವಾಗಿದೆ. ರಾಮ – ಕೋದಂಡ ಜೋಡಿಯು ವಿಜಯದ ಸಂಕೇತವಾಗಿದೆ. ಹಾಗಾಗಿ ಈ ಮಂತ್ರ ಪಠಣ ಮಾಡುವುದರಿಂದ ಎಲ್ಲಾ ಭಯ ನಿವಾರಣೆಯಾಗುತ್ತದೆ ಮತ್ತು ಒಳ್ಳೆಯ ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಮನೆಯಲ್ಲಿ ಮಾಡಿ ಗೋಧಿ ಹಿಟ್ಟಿನ ಹಲ್ವಾ
-ಶ್ರೀ ರಾಮ ಜಯಂ
ಈ ಮಂತ್ರದ ಅರ್ಥ ಭಗವಾನ್ ರಾಮನಿಗೆ ಜಯವಾಗಲಿ ಎಂಬುದಾಗಿದೆ. ಇದು ಸಾಮೂಹಿಕ ಪಠಣ ಮತ್ತು ನಾಮ ಜಪ ಬರವಣಿಗೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಅತ್ಯಂತ ಜನಪ್ರಿಯ ಮಂತ್ರವಾಗಿದೆ. ಈ ಮಂತ್ರವು ಆತ್ಮವಿಶ್ವಾಸವನ್ನು ಮತ್ತು ಶಾಂತಿಯನ್ನು ಹೆಚ್ಚಿಸುತ್ತದೆ.
-ಓಂ ದಶರಥಾಯ ವಿಧ್ಮಹೇ ಸೀತವಲ್ಲಭಾಯ ಧೀಮಾಹಿ, ತನ್ನೋ ರಾಮ ಪ್ರಚೋದಯಾತ್
ಇದು ರಾಮ ಗಾಯತ್ರಿ ಮಂತ್ರವಾಗಿದ್ದು ಇದರಲ್ಲಿ ರಾಮನನ್ನು ದಶರಥನ ಮಗ ಮತ್ತು ಸೀತಾ ಮಾತೆಯ ಪತಿ ಎಂದು ಸಂಬೋಧಿಸಲಾಗುತ್ತದೆ. ಈ ಮಂತ್ರವನ್ನು ಹೇಳುವ ಮೂಲಕ ತನಗೆ ಹೆಚ್ಚಿನ ಬುದ್ಧಿಶಕ್ತಿ, ಆಲೋಚನೆಯ ಸ್ಪಷ್ಟತೆ ಮತ್ತು ಸರಿಯಾದ ನಿರ್ಣಯದ ಶಕ್ತಿಯನ್ನು ನೀಡುವಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡುವುದಾಗಿದೆ.
ರಾಮ ಮಂತ್ರ ಪಠಣ ಮಾಡುವುದರಿಂದ ಸಿಗುವ ಒಟ್ಟಾರೆ ಪ್ರಯೋಜನಗಳೇನು?
• ರಾಮ ಮಂತ್ರವನ್ನು ನಿರಂತರವಾಗಿ ಪಠಿಸುವುದರಿಂದ ವ್ಯಕ್ತಿಯ ಆತ್ಮಗೌರವ, ಮಾನಸಿಕ ಶಕ್ತಿ ಮತ್ತು ಇಚ್ಛಾಶಕ್ತಿಯನ್ನು ಹೆಚ್ಚಿಸಬಹುದು. ಇದು ಮನುಷ್ಯನನ್ನು ಅವನ ಎಲ್ಲಾ ದುಶ್ಚಟಗಳಿಂದ ಮುಕ್ತಗೊಳಿಸುತ್ತದೆ.
• ರಾಮ ಮಂತ್ರವು ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸುವ ರಾಜ ಮಾರ್ಗವಾಗಿದೆ. ಇದು ಎಲ್ಲಾ ಭೌತಿಕ ಪ್ರಯೋಜನಗಳನ್ನು ನಿಮಗೆ ನೀಡುತ್ತದೆ ಮತ್ತು ಜೀವನದಲ್ಲಿನ ಭಯ ಮತ್ತು ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
• ರಾಮ ಮಂತ್ರವು ವ್ಯಕ್ತಿಗಳನ್ನು ಎಲ್ಲಾ ರೋಗಗಳು ಮತ್ತು ಕಾಯಿಲೆಗಳಿಂದ ದೂರವಿರಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯ ಮತ್ತು ಸಂತೋಷವನ್ನು ಕೂಡ ನೀಡುತ್ತದೆ.
• ರಾಮ ಮಂತ್ರವು ಮನೆಯಲ್ಲಿ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ ಜೊತೆಗೆ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಬೀರಲು ಸಹಕಾರಿಯಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ