StarWaaliBaat: ಮತದಾರರಿಗೆ ತಮ್ಮ ಮತದಾನ ಹಕ್ಕು ಚಲಾಯಿಸಲು ನೆರವಾದ ಟಿವಿ9 ಸುದ್ದಿವಾಹಿನಿಯ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಮತದಾನದ ಹಕ್ಕು ಅಭಿಯಾನ
ಮೇ 10ರಂದು ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯು ಶೇ 72.67ದಷ್ಟು ಮತದಾನಕ್ಕೆ ನಡೆದಿತ್ತು. ಚುನಾವಣೆಗೂ ಮುಂಚೆ, ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ತಮ್ಮ ಅಂತರಾಳದ #StarWaaliBaat ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರೋತ್ಸಾಹಿಸಲು ಟಿವಿಎಸ್ ಮೋಟಾರ್ ಮತ್ತು ಟಿವಿ9 ಕನ್ನಡ ಸುದ್ದಿ ವಾಹಿನಿಗಳು ಮೇ 5ರಿಂದಲೇ ತಮ್ಮ ಸಾಮಾಜಿಕ ಕಳಕಳಿಯ ಅಭಿಯಾನದಲ್ಲಿ ಆರಂಭಿಸಿತ್ತು.
ಟಿವಿ9 ಕನ್ನಡ (tv9 kannada) ಸುದ್ದಿ ವಾಹಿನಿಯ ಸಹಯೋಗದೊಂದಿಗೆ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ನ ಮತದಾನದ ಹಕ್ಕಿನ ಪ್ರಚಾರದ ಮೂಲಕ ಮತದಾರರಿಗೆ ತಮ್ಮ ಹಕ್ಕನ್ನು ಚಲಾಯಿಸಿ ತಮ್ಮ #StarWaaliBaat (ಸ್ಟಾರ್‌ವಾಲಿಬಾತ್) ನ ಅನುಭವ ಹಂಚಿಕೊಳ್ಳಲು ಸಹಕರಿಸಿತು.
ಮೇ 10ರಂದು ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯು ಶೇ 72.67ದಷ್ಟು ಮತದಾನಕ್ಕೆ ನಡೆದಿತ್ತು. ಚುನಾವಣೆಗೂ ಮುಂಚೆ, ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ತಮ್ಮ ಅಂತರಾಳದ #StarWaaliBaat ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರೋತ್ಸಾಹಿಸಲು ಟಿವಿಎಸ್ ಮೋಟಾರ್ ಮತ್ತು ಟಿವಿ9 ಕನ್ನಡ ಸುದ್ದಿ ವಾಹಿನಿಗಳು ಮೇ 5ರಿಂದಲೇ ತಮ್ಮ ಸಾಮಾಜಿಕ ಕಳಕಳಿಯ ಅಭಿಯಾನದಲ್ಲಿ ಆರಂಭಿಸಿತ್ತು.
ರಾಜ್ಯದ ನಂಬರ್ ಒನ್ ಸುದ್ದಿ ವಾಹಿನಿಯಾದ ಟಿವಿ9 ಕನ್ನಡದಲ್ಲಿ 35 ಸೆಕೆಂಡುಗಳ ಒಂದು ಕಿರು ಪ್ರಚಾರದ ಮೂಲಕ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಮತದಾನದ ಹಕ್ಕಿನ ಪ್ರಚಾರಾಂದೋಳನವನ್ನು ರಾಜ್ಯದ ಮತದಾರರಿಗೆ ಪರಿಚಯಿಸುವ ಮೂಲಕ ಅವರನ್ನು ಮನೆಗಳಿಂದ ಹೊರಬಂದು ಮತದಾನ ಮಾಡಲು ಪ್ರೋತ್ಸಾಹಿಸಿತು.
ಜನರನ್ನು ಶಿಕ್ಷಿತರನ್ನಾಗಿಸಲು, ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಮತದಾನದ ಹಕ್ಕಿನ ಪ್ರಚಾರಾಂದೋಳನವನ್ನು ಟಿವಿ9 ಕನ್ನಡ ವಾಹಿನಿಯ ಸಹಯೋಗದೊಂದಿಗೆ ಪರಿಚಯಿಸಲಾಯಿತು. ಟಿವಿ9 ಕನ್ನಡ ಸುದ್ದಿ ವಾಹಿನಿಯು ದೇಶದ ನಂಬರ್ ಒನ್ ಸುದ್ದಿಜಾಲವಾಗಿರುವ ಟಿವಿ9ನ ಒಂದು ಅಂಗವಾಗಿದೆ.
ಇದನ್ನೂ ಓದಿ: Airtel 5G: 265ಕ್ಕೂ ಅಧಿಕ ನಗರಗಳಲ್ಲಿ ಏರ್ಟೆಲ್ 5G ಲಾಂಚ್: ಪ್ಲಾನ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
ಈ ಅಭಿಯಾನದ ಭಾಗವಾಗಿ, ಮತದಾರರನ್ನು ಪ್ರೋತ್ಸಾಹಿಸುವ ಘೋಷಿತ ಉದ್ದೇಶದೊಂದಿಗೆ, ಅವರು ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ವಾಹನ ಸವಾರರಾಗಿ ತಮ್ಮ ಮತಗಟ್ಟೆಗೆ ತಲುಪಿ ಮತದಾನ ಮಾಡುವ ಮೂಲಕ ಅವರು ಟಿವಿಎಸ್ ಮೋಟಾರ್ಸ್ ಸಂಸ್ಥೆಯ #StarWaaliBaat ಕೊಡುಗೆಯನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಲು ಅನೇಕ ಸರಣಿಗಳಲ್ಲಿ ಪ್ರಸಾರ ಮಾಡಲಾಗಿದೆ.
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್‌ಗಳ ಮೇಲೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿದ ಸವಾರರು, ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳನ್ನು ತಲುಪಲು ಕಷ್ಟ ಪಡುತ್ತಿದ್ದ ಮತದಾರರನ್ನು ಅವರವರ ಮತಗಟ್ಟೆಗಳಿಗೆ ತಲುಪಿಸುವಂತಹ ಕಾರ್ಯವನ್ನೂ ಸಹ ಈ ಮತದಾನದ ಹಕ್ಕಿನ ಅಭಿಯಾನದಲ್ಲಿ ಒಳಗೊಂಡಿತ್ತು. ಪರಿಸರಸ್ನೇಹಿ ಉದ್ದೇಶವೇ ಪ್ರಮುಖವಾಗಿರುವ ಇಂಜಿನ್-ಚಾಲಿತ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕು ಅಲ್ಪ-ಸಾಮರ್ಥ್ಯದ, ಗಾಣದೆತ್ತಿನಂತೆ ದುಡಿಯುವ ಬೈಕ್ ಆಗಿದ್ದು ಬಿಎಸ್-4 ನಿಯಮಗಳಿಗೆ ಅನುಗುಣವಾಗಿದೆ. ಗಟ್ಟಿಮುಟ್ಟಾದ ಈ ಬೈಕ್ ರಸ್ತೆಯ ಮೇಲಿನ ಬಲವಾದ ಸಂಚಾರಕ್ಕೆ ಹೆಗ್ಗಳಿಕೆಯೊಂದಿಗೆ ಇಂಧನ ಮಿತವ್ಯಯಕ್ಕೂ ಹೆಸರಾಗಿದೆ. ಈ 100 ಸಿ.ಸಿ. ಸಾಮರ್ಥ್ಯದ ಪ್ರಚಂಡ ಶಕ್ತಿಯ ವಾಹನವು ನಾಗರಿಕರಿಗೆ ತಮ್ಮ ಸಾಮಾಜಿಕ ಕರ್ತವ್ಯವನ್ನು ಪಾಲಿಸಲು ಹಾಗೂ ತಮ್ಮ #StarWaaliBaat ಅನ್ನು ಸಾಕಾರಗೊಳಿಸಿಕೊಳ್ಳಲು ಸಹಾಯ ಮಾಡಿದೆ.
ಮೇ 10ರ ಮತದಾನದ ದಿನದಂದು, ಟಿವಿ9 ಕನ್ನಡ ವಾಹಿನಿಯ ಸ್ಥಳೀಯ ವರದಿಗಾರರು ಮತದಾರರನ್ನು ಪತ್ತೆ ಹಚ್ಚಿ, ಅವರೊಂದಿಗೆ ಮಾತನಾಡಿ, ತಮ್ಮ ಮತದಾನದ ಚಲಾಯಿಸಲು ಅವರನ್ನು ಪ್ರೋತ್ಸಾಹಿಸಿದರು.
ಟಿವಿ9 ವಾಹಿನಿಯ ಸಹಯೋಗದೊಂದಿಗೆ ನಡೆದ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ನ ಮತದಾನದ ಹಕ್ಕಿನ ಅಭಿಆಯನವು ಮತದಾರರಿಗೆ ಚುನಾವಣೆಯ ದಿನದಂದು ಬಹು ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ತಮ್ಮ #StarWaaliBaat ಅನ್ನು ಪ್ರದರ್ಶಿಸಲು ಸಹಕಾರ ನೀಡಿ ದೊಡ್ಡ ಗೆಲುವನ್ನೇ ಪಡೆದಿದೆ.
Published On - 1:27 pm, Fri, 19 May 23