AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

91 ಎಸೆತ, 25 ಸಿಕ್ಸರ್, 202 ರನ್; ಅಭಿಷೇಕ್ ವಿಸ್ಫೋಟಕ ಬ್ಯಾಟಿಂಗ್‌

Abhishek Sharma's Double Century: ಅಭಿಷೇಕ್ ಶರ್ಮಾ, ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದರೂ, ಸ್ಥಳೀಯ ಕ್ರಿಕೆಟ್‌ನಲ್ಲಿ ಭರ್ಜರಿ ದ್ವಿಶತಕ (233 ರನ್) ಗಳಿಸಿ ಮಿಂಚಿದ್ದಾರೆ. ಪಂಜಾಬ್‌ನ ಅಂತರ್‌ ಜಿಲ್ಲಾ ಪಂದ್ಯಾವಳಿಯಲ್ಲಿ ಅಮೃತಸರ ಪರ ಕಣಕ್ಕಿಳಿದು, ಕೇವಲ 91 ಎಸೆತಗಳಲ್ಲಿ 15 ಬೌಂಡರಿ ಮತ್ತು 25 ಸಿಕ್ಸರ್‌ ಸಹಿತ 233 ರನ್ ಗಳಿಸಿ, ತಂಡಕ್ಕೆ 533 ರನ್‌ಗಳ ಬೃಹತ್ ಮೊತ್ತ ಗಳಿಸಲು ನೆರವಾದರು. ಈ ಅಮೋಘ ಪ್ರದರ್ಶನವು ಅವರಿಗೆ ಟಿ20 ತಂಡಕ್ಕೆ ಮರಳಲು ಆತ್ಮವಿಶ್ವಾಸ ನೀಡಿದೆ.

91 ಎಸೆತ, 25 ಸಿಕ್ಸರ್, 202 ರನ್; ಅಭಿಷೇಕ್ ವಿಸ್ಫೋಟಕ ಬ್ಯಾಟಿಂಗ್‌
Abhishek Sharma
ಪೃಥ್ವಿಶಂಕರ
|

Updated on: Aug 02, 2026 | 5:50 PM

Share

ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಸ್ಥಳೀಯ ಕ್ರಿಕೆಟ್​ನಲ್ಲಿ ವಿಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಅಂತರ ಜಿಲ್ಲಾ ಹಿರಿಯರ ಪಂದ್ಯಾವಳಿಯಲ್ಲಿ ಅಮೃತಸರ ಪುರುಷರ ಸೀನಿಯರ್ ತಂಡದ ಪರ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ Tarn Tara ಪುರುಷರ ಸೀನಿಯರ್ ತಂಡದ ವಿರುದ್ದ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ದ್ವಿಶತಕದ ಇನ್ನಿಂಗ್ಸ್ ಆಡಿದರು. ಅಭಿಷೇಕ್ ಅವರ ಈ ಅಬ್ಬರದ ಇನ್ನಿಂಗ್ಸ್​ನಿಂದಾಗಿ ಅಮೃತಸರ ಪುರುಷರ ಸೀನಿಯರ್ ತಂಡವು 50 ಓವರ್‌ಗಳಲ್ಲಿ ಬರೋಬ್ಬರಿ 533 ರನ್ ಕಲೆಹಾಕಿತು.

91 ಎಸೆತಗಳನ್ನು ಎದುರಿಸಿ 233 ರನ್​

ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ 91 ಎಸೆತಗಳನ್ನು ಎದುರಿಸಿ 233 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. 250 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ತಮ್ಮ ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 25 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಇದರರ್ಥ ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಸಹಾಯದಿಂದಲೇ 202 ರನ್ ಗಳಿಸಿದರು. ಈ 50 ಓವರ್‌ಗಳ ಪಂದ್ಯದಲ್ಲಿ, ಅಭಿಷೇಕ್ ಶರ್ಮಾ ಅವರ ದ್ವಿಶತಕ ಮತ್ತು ಅಭಯ್ ಚೌಧರಿ ಅವರ 91 ರನ್‌ಗಳ ಇನ್ನಿಂಗ್ಸ್​ನಿಂದಾಗಿ ಅಮೃತಸರ ಪುರುಷರ ಸೀನಿಯರ್ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 533 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು.

ಕಳಪೆ ಫಾರ್ಮ್​ನಲ್ಲಿ ಅಭಿಷೇಕ್

ಮೇಲೆ ಹೇಳಿದಂತೆ ಟಿ20 ವಿಶ್ವಕಪ್​ನಿಂದಲೂ ಅಭಿಷೇಕ್ ಶರ್ಮಾ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಆದಾಗ್ಯೂ ಅವರಿಗೆ ತಂಡದಲ್ಲಿ ಸತತ ಅವಕಾಶಗಳನ್ನು ನೀಡಲಾಗುತ್ತಿದೆ. ಅಭಿಷೇಕ್ ತಮ್ಮ ಕೊನೆಯ ಏಳು ಟಿ20 ಅಂತರರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಬಾರಿಸಿಲ್ಲ. ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು. ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಕ್ರಮವಾಗಿ 1, 8 ಮತ್ತು 2 ರನ್ ಗಳಿಸಿದ್ದರು. ಹೀಗಾಗಿ ಅಭಿಷೇಕ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಆದರೀಗ ಸ್ಥಳೀಯ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿರುವ ಅಭಿಷೇಕ್ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us