IPL 2021: ಟ್ವಿಟರ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಎಡವಟ್ಟು; Well Payed KKR ಎಂದ ಧೋನಿ ಟೀಂ!

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಅದ್ಭುತ ಆರಂಭ ಕಂಡಿತ್ತು. ತಮ್ಮ ಹೊಡಿಬಡಿ ಆಟದ ಮೂಲಕ ಚೆನ್ನೈ 220 ರನ್​ ಕಲೆ ಹಾಕಿತ್ತು. ಇದನ್ನು ಬೆನ್ನು ಹತ್ತಿದ್ದ ಕೆಕೆಆರ್​ಗೆ ಆರಂಭಿಕ ಆಘಾತ ಎದುರಾಗಿತ್ತು

IPL 2021: ಟ್ವಿಟರ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಎಡವಟ್ಟು; Well Payed KKR ಎಂದ ಧೋನಿ ಟೀಂ!
ಧೋನಿ
Edited By:

Updated on: Apr 22, 2021 | 3:07 PM

ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವೆ ನಡೆದ ಪಂದ್ಯ ರೋಚಕತೆ ಪಡೆದುಕೊಂಡಿತ್ತು. ಸೋಲುವ ಹಂತಕ್ಕೆ ತಲುಪಿದ್ದ ಪಂದ್ಯವನ್ನು ರಸೆಲ್​, ದಿನೇಶ್​ ಕಾರ್ತಿಕ್​ ಹಾಗೂ ಪ್ಯಾಟ್​ ಕಮ್ಮಿನ್ಸ್​ ಅದ್ಭುತ ಪ್ರದರ್ಶನದಿಂದ ಗೆಲುವಿನ ಹಂತಕ್ಕೆ ಹೋಗಿತ್ತು. ಆದರೆ, ಈ ಮೂವರ ಹೋರಾಟವೂ ವ್ಯರ್ಥವಾಗಿದ್ದು, ಕೆಕೆಆರ್​ 18 ರನ್​ಗಳಿಂದ ಸೋತಿತ್ತು. ಆದರೆ, ಅವರು ನೀಡಿದ ಅದ್ಭುತ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಧ್ಯೆ ಚೆನ್ನೈ ಮಾಡಿದ ಟ್ವೀಟ್​ ಒಂದು ಸಾಕಷ್ಟು ವೈರಲ್​ ಆಗಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಅದ್ಭುತ ಆರಂಭ ಕಂಡಿತ್ತು. ತಮ್ಮ ಹೊಡಿಬಡಿ ಆಟದ ಮೂಲಕ ಚೆನ್ನೈ 220 ರನ್​ ಕಲೆ ಹಾಕಿತ್ತು. ಇದನ್ನು ಬೆನ್ನು ಹತ್ತಿದ್ದ ಕೆಕೆಆರ್​ಗೆ ಆರಂಭಿಕ ಆಘಾತ ಎದುರಾಗಿತ್ತು. ಶುಭ್​ಮನ್​ಗಿಲ್​ ಮೊದಲನೇ ಓವರ್​ನಲ್ಲಿ ಔಟ್​ ಆದರು. ನಿತೀಶ್​ ರಾಣಾ ಮೂರನೇ ಓವರ್​ಗೆ ಪೆವಿಲಿಯನ್​ ಸೇರಿದರು. ರಾಹುಲ್​ ತ್ರಿಪಾಟಿ, ಮೊರ್ಗನ್​, ಸುನೀಲ್​ ನರೇನ್​ ಕೂಡ ಬಹುಬೇಗ ಪೆವಿಲಿಯನ್​ ಹಾದಿ ಹಿಡಿದರು. ನಂತರ ದಿನೇಶ್​ ಕಾರ್ತಿಕ್​, ರಸೆಲ್​ ಹಾಗೂ ಕಮ್ಮಿನ್ಸ್ ಅದ್ಭುತ ಆಟ ತೋರಿದರು. ಈ ಮ್ಯಾಚ್​ ತುಂಬಾನೇ ಥ್ರಿಲ್​ ನೀಡಿತ್ತು.

ಪಂದ್ಯ ಮುಗಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್​ ಟ್ವೀಟ್ ಒಂದನ್ನು ಮಾಡಿದೆ. ಈ ಟ್ವೀಟ್​ ಮಾಡುವಾಗ ಎಡವಟ್ಟೊಂದು ಸಂಭವಿಸಿದೆ. ಉತ್ತಮವಾಗಿ ಆಡಿದ್ದೀರಿ ಎಂದು ಹೇಳುವ ಬದಲು ಉತ್ತಮವಾಗಿ ಪಾವತಿಸಿದ್ದೀರಿ ಎಂದು ಹೇಳುವ ಅರ್ಥದಲ್ಲಿ ಚೆನ್ನೈ ಟ್ವೀಟ್​ ಬಂದಿದೆ. Well payed KKR ಎಂದು ಟ್ವೀಟ್​ ಮಾಡಲಾಗಿದೆ.

ಆದರೆ, ಅದು Well played KKR ಎಂದಾಗಬೇಕಿತ್ತು. ಚೆನ್ನೈ ಸ್ಪಾಟ್​​ ಫಿಕ್ಸಿಂಗ್​ ಪ್ರಕರಣಕ್ಕೆ ಸಿಲುಕಿ ಎರಡು ವರ್ಷ ಬ್ಯಾನ್​ ಆಗಿತ್ತು. ಈ ಕಪ್ಪು ಚುಕ್ಕಿ ಇನ್ನೂ ಮಾಸಿಲ್ಲ. ಹೀಗಾಗಿ, ಅನೇಕರು ಈ ಟ್ವೀಟ್​ಅನ್ನು ಹಳೆಯ ಘಟನೆಗೆ ತಳುಕು ಹಾಕಿದ್ದಾರೆ.

ಇದನ್ನೂ ಓದಿ: IPL 2021: ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದೇವೆ, ಮುಂಬೈನಲ್ಲೂ ಕ್ಲೀನ್ ಸ್ವೀಪ್ ಮಾಡ್ತೀವಿ; ಗ್ಲೆನ್ ಮ್ಯಾಕ್ಸ್​ವೆಲ್

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us