
ಏಷ್ಯಾದಲ್ಲಿ ನಡೆಯುವ ‘ಏಷ್ಯಾ ಕಪ್‘ ಮಾದರಿಯಲ್ಲೇ ಆಫ್ರಿಕಾ ಖಂಡದಲ್ಲೂ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳ ನಡುವೆ ಆಫ್ರಿಕಾ ಕಪ್ ಪಂದ್ಯಾವಳಿ ನಡೆಸಲು ಭರ್ಜರಿ ಪ್ಲ್ಯಾನ್ ರೂಪಿಸಲಾಗಿದೆ. 6 ತಂಡಗಳ ಟೂರ್ನಿಯಲ್ಲಿ ಆಫ್ರಿಕಾದ ಅಗ್ರಗಣ್ಯ ತಂಡಗಳಾದ ಸೌತ್ ಆಫ್ರಿಕಾ (South Africa), ಝಿಂಬಾಬ್ವೆ (Zimbabwe) ಮತ್ತು ನಮೀಬಿಯಾ (Namibia) ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಇವುಗಳ ಜೊತೆಗೆ ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾದ ಇತರೆ ಮೂರು ಆಫ್ರಿಕನ್ ದೇಶಗಳು ಭಾಗವಹಿಸಲಿವೆ.
ಆಫ್ರಿಕಾ ಕಪ್ ಟೂರ್ನಿಯ ಮುಖ್ಯ ಉದ್ದೇಶ, ಆಫ್ರಿಕನ್ ದೇಶಗಳಲ್ಲಿ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸುವುದು. ಝಿಂಬಾಬ್ವೆ ಕೋಚ್ ಡೇವ್ ಹೌಟನ್ ಅವರಂತಹ ಹಿರಿಯರು ಪ್ರತಿಪಾದಿಸಿದಂತೆ, ಆಫ್ರಿಕಾದಲ್ಲಿ ಕ್ರಿಕೆಟ್ ಅನ್ನು ಫುಟ್‌ಬಾಲ್‌ನಂತೆ ಜನಪ್ರಿಯಗೊಳಿಸುವುದು ಮತ್ತು ಸಣ್ಣ ತಂಡಗಳಿಗೆ ಹೆಚ್ಚಿನ ಎಕ್ಸ್‌ಪೋಷರ್ ನೀಡುವುದು ಇದರ ಮುಖ್ಯ ಗುರಿ.
ಹಾಗೆಯೇ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆಫ್ರಿಕಾ ಕಪ್ ಆ ದೇಶಗಳಿಗೆ ತಾಲೀಮು ನಡೆಸಲು ಉತ್ತಮ ವೇದಿಕೆಯಾಗಲಿದೆ.
ಆಫ್ರಿಕಾ ಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಇದರ ಜೊತೆಗೆ ಅರ್ಹತಾ ಸುತ್ತಿನ ಮೂಲಕ 3 ತಂಡಗಳು ಸೇರ್ಪಡೆಯಾಗಲಿವೆ. ಇಲ್ಲಿ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಳ್ಳಲಿರುವ ತಂಡಗಳಾವುವು ಎಂದು ನೋಡುವುದಾದರೆ…
ಇದನ್ನೂ ಓದಿ: ಕೈ ಸನ್ನೆಯೊಂದಿಗೆ ವಿಶ್ಲೇಷಣೆ… ಬಿದ್ದು ಬಿದ್ದು ನಕ್ಕ RCB ಆಟಗಾರರು
ಆಫ್ರಿಕಾ ಕಪ್ ಟೂರ್ನಿಯಿಂದಾಗಿ ಆಫ್ರಿಕನ್ ಕ್ರಿಕೆಟ್‌ನಲ್ಲಿ ಹೊಸ ಪೈಪೋಟಿ ಶುರುವಾಗಲಿದೆ. ಸೌತ್ ಆಫ್ರಿಕಾದಂತಹ ಬಲಿಷ್ಠ ತಂಡದ ವಿರುದ್ಧ ಆಡುವುದರಿಂದ ನಮೀಬಿಯಾ ಮತ್ತು ಇತರ ಉದಯೋನ್ಮುಖ ತಂಡಗಳ ಗುಣಮಟ್ಟ ಸುಧಾರಿಸಲಿದೆ.