AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘100 ಮೀ. ಸಿಕ್ಸರ್ ಬಾರಿಸಿದರೆ 6 ಕ್ಕಿಂತ ಹೆಚ್ಚು ರನ್ ನೀಡಬೇಕು’; ಐಸಿಸಿಗೆ ಡಿವಿಲಿಯರ್ಸ್, ಪೀಟರ್ಸನ್ ಸಲಹೆ

AB De Villiers and Kevin Pietersen: ಜನವರಿ 21 ರಂದು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೂಡ ಈ ಬಗ್ಗೆ ಸಲಹೆ ನೀಡಿದ್ದರು. ಕೇವಿನ್ ಪ್ರಕಾರ 100 ಮೀಟರ್‌ಗಿಂತ ಹೆಚ್ಚು ದೂರ ಹೊಡೆಯುವ ಸಿಕ್ಸರ್‌ಗಳಿಗೆ 6 ರನ್‌ಗಳ ಬದಲಿಗೆ 12 ರನ್‌ಗಳನ್ನು ನೀಡಬೇಕು ಎಂದಿದ್ದರು.

‘100 ಮೀ. ಸಿಕ್ಸರ್ ಬಾರಿಸಿದರೆ 6 ಕ್ಕಿಂತ ಹೆಚ್ಚು ರನ್ ನೀಡಬೇಕು’; ಐಸಿಸಿಗೆ ಡಿವಿಲಿಯರ್ಸ್, ಪೀಟರ್ಸನ್ ಸಲಹೆ
ಎಬಿ ಡಿವಿಲಿಯರ್ಸ್​, ಕೇವಿನ್ ಪೀಟರ್ಸನ್
ಪೃಥ್ವಿಶಂಕರ
|

Updated on: Jan 22, 2024 | 2:59 PM

Share

ಕ್ರಿಕೆಟ್ ಲೋಕದಲ್ಲಿ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದ ಕ್ರಿಕೆಟಿಗರಲ್ಲಿ ಆರ್​ಸಿಬಿ (RCB) ಆಪತ್ಭಾಂಧವ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಕೂಡ ಒಬ್ಬರು. ಕ್ರೀಸ್​ನಲ್ಲಿ ಇರುವಷ್ಟು ಹೊತ್ತು ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಅಭಿಮಾನಿಗಳು ಹುಚ್ಚೆದ್ದು ಕುಣಿಯುಂತೆ ಮಾಡುತ್ತಿದ್ದ ಎಬಿ ಡಿವಿಲಿಯರ್ಸ್ ಇದೀಗ ಕ್ರಿಕೆಟ್​ನ ಬಿಗ್ ಬಾಸ್ ಐಸಿಸಿಗೆ (ICC) ಸಲಹೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ಡಿವಿಲಿಯರ್ಸ್ ಸಲಹೆಯನ್ನು ಐಸಿಸಿ ಪುರಸ್ಕರಿಸಿ ಅದನ್ನು ಕ್ರಿಕೆಟ್​ಗೆ ಅಳವಡಿಸಿದರೆ, ಕ್ರಿಕೆಟ್ ಲೋಕದಲ್ಲಿ ಸಂಚಲವನ್ನೇ ಸೃಷ್ಟಿಸಲಿದೆ. ಮೈದಾನದಲ್ಲಿ ಇರುವಷ್ಟು ಹೊತ್ತು ಬಿಗ್ ಬಿಗ್ ಸಿಕ್ಸರ್ ಬಾರಿಸಿ ಚೆಂಡನ್ನು ಮೈದಾನದಿಂದ ಹೊರಕ್ಕೆ ಕಳುಹಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಮಿ. 360, ಇದೀಗ 100 ಮೀಟರ್​ಗೂ ಅಧಿಕ ಉದ್ದದ ಸಿಕ್ಸರ್ ಬಾರಿಸಿದರೆ, ಅದಕ್ಕೆ 6 ರನ್ ಬದಲು 8 ರಿಂದ 9 ರನ್​ಗಳನ್ನು ನೀಡಬೇಕು ಎಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.

8 ರಿಂದ 9 ರನ್​ಗಳನ್ನು ನೀಡಬೇಕು

ವಾಸ್ತವವಾಗಿ ನಿನ್ನೆ ಅಂದರೆ ಜನವರಿ 21 ರಂದು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೂಡ ಈ ಬಗ್ಗೆ ಸಲಹೆ ನೀಡಿದ್ದರು. ಕೇವಿನ್ ಪ್ರಕಾರ 100 ಮೀಟರ್‌ಗಿಂತ ಹೆಚ್ಚು ದೂರ ಹೊಡೆಯುವ ಸಿಕ್ಸರ್‌ಗಳಿಗೆ 6 ರನ್‌ಗಳ ಬದಲಿಗೆ 12 ರನ್‌ಗಳನ್ನು ನೀಡಬೇಕು ಎಂದಿದ್ದರು. ಇದೀಗ ಕೆವಿನ್ ಪೀಟರ್ಸನ್ ಅವರ ಈ ಪೋಸ್ಟ್ ಬಗ್ಗೆ ಎಬಿ ಡಿವಿಲಿಯರ್ಸ್ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದು, 12 ರನ್‌ಗಳು ಕೊಂಚ ಹೆಚ್ಚಾಗಬಹುದು. 6 ರನ್ ಬದಲಿಗೆ 12 ರನ್ ನೀಡುವುದು ಸರಿಯಲ್ಲ. 100 ಮೀಟರ್‌ಗಿಂತ ಹೆಚ್ಚು ದೂರ ಸಿಕ್ಸ್‌ ಬಾರಿಸಿದರೆ 8 ರಿಂದ 9 ರನ್ ನೀಡಬಹುದು ಎಂದು ಡಿವಿಲಿಯರ್ಸ್ ಸಲಹೆ ನೀಡಿದ್ದಾರೆ.

‘ಅದೊಂದು ಅಚಾತುರ್ಯದಿಂದಾಗಿ ನಾನು ಕ್ರಿಕೆಟ್​ಗೆ ವಿದಾಯ ಹೇಳಿಬೇಕಾಯ್ತು’; ಎಬಿ ಡಿವಿಲಿಯರ್ಸ್

ಪೀಟರ್ಸನ್ ಹೇಳಿದ್ದೇನು?

ವಾಸ್ತವವಾಗಿ, ಮಾಜಿ ಲೆಜೆಂಡರಿ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದು ಅದರಲ್ಲಿ, ‘ಎರಡು ವರ್ಷಗಳ ಹಿಂದೆ ನಾನು ಕಾಮೆಂಟರಿ ಮಾಡುವ ಸಮಯದಲ್ಲಿ ಒಬ್ಬ ಬ್ಯಾಟ್ಸ್‌ಮನ್ 100 ಮೀಟರ್ ಅಥವಾ ಅದಕ್ಕಿಂತಲೂ ಉದ್ದದ ಸಿಕ್ಸರ್ ಬಾರಿಸಿದರೆ, ಅವನಿಗೆ 6 ರನ್ ಬದಲು 12 ರನ್ ನೀಡಬೇಕು ಎಂದು ನಾನು ಹೇಳಿದ್ದೆ. ಈ ನಿಯಮ ಶೀಘ್ರದಲ್ಲೇ ಬರಲಿದೆ ಎಂದು ಬರೆದುಕೊಂಂಡಿದ್ದರು.

ಇದೇ ಬೇಡಿಕೆ ಇಟ್ಟಿದ್ದ ರೋಹಿತ್

ಕೆವಿನ್ ಪೀಟರ್ಸನ್ ಇಂತಹ ಬೇಡಿಕೆ ಇಟ್ಟ ಮೊದಲ ವ್ಯಕ್ತಿ ಅಲ್ಲ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಇದೇ ಬೇಡಿಕೆ ಇಟ್ಟಿದ್ದರು. ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ, ಒಬ್ಬ ಬ್ಯಾಟ್ಸ್‌ಮನ್ 80 ಮೀಟರ್ ಅಥವಾ 100 ಮೀಟರ್ ಮತ್ತು ಅದಕ್ಕಿಂತ ಹೆಚ್ಚು ಉದ್ದದ ಸಿಕ್ಸರ್‌ಗಳನ್ನು ಹೊಡೆದರೆ ಅವನಿಗೆ 8, 10 ಅಥವಾ 12 ರನ್ ನೀಡಬೇಕು ಎಂದಿದ್ದರು.

ಐಪಿಎಲ್​ನಲ್ಲಿ ಪ್ರಯೋಗ?

ಸದ್ಯ ಐಸಿಸಿ ನಿಯಮದ ಪ್ರಕಾರ ಒಬ್ಬ ಬ್ಯಾಟ್ಸ್​ಮನ್ ಎಷ್ಟೇ ಉದ್ದದ ಸಿಕ್ಸರ್ ಬಾರಿಸಿದರೂ ಸಿಗುವುದು 6 ರನ್ ಮಾತ್ರ. ವಿಶ್ವದ ಅತ್ಯಂತ ದುಬಾರಿ ಲೀಗ್ ಐಪಿಎಲ್‌ನಲ್ಲಿ 100 ಮೀಟರ್‌ ಉದ್ದದ ಸಿಕ್ಸರ್‌ಗಳನ್ನು ಬಹಳ ಕಷ್ಟದಿಂದ ಬಾರಿಸಲಾಗುತ್ತದೆ. ಮಾರ್ಚ್‌ನಲ್ಲಿ ಐಪಿಎಲ್ ಕೂಡ ನಡೆಯಲಿದ್ದು, ಇಂತಹ ನಿಯಮ ರೂಪಿಸಿದರೆ ಕ್ರಿಕೆಟ್‌ನ ರೋಚಕತೆ ಮತ್ತಷ್ಟು ಹೆಚ್ಚಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್