ಬಿಸಿಎನಲ್ಲಿ ಇಬ್ಬರು ಬಿಜೆಪಿ ನಾಯಕರ ಒಳಜಗಳ: ಎರಡು ತಂಡಗಳಾದ ಬಿಹಾರ್ ಕ್ರಿಕೆಟ್
ಬಿಹಾರ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಕೇಶ್ ತಿವಾರಿ, ನಾವು 135 ಕಿರಿಯ ಆಟಗಾರರನ್ನು ಶಾರ್ಟ್ ಲಿಸ್ಟ್ ಮಾಡಿದ್ದು ಸೆಪ್ಟೆಂಬರ್ 14ರ ಕ್ಯಾಂಪ್ ಮುಗಿದ ಬಳಿಕ ತಂಡವನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೂ ಮುನ್ನವೇ ಪಟೇಲ್ ಬಿಹಾರ್ ಅಂಡರ್-19 ತಂಡವನ್ನು ಬಿಸಿಸಿಐಗೆ ಮೇಲ್ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿನೂ ಮಂಕಡ್ ಟ್ರೋಫಿಗೆ (Vinoo Mankad Trophy) ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಬಿಹಾರ್ ಕ್ರಿಕೆಟ್ ಸಂಸ್ಥೆ ರಾಜಕೀಯ ನಾಯಕರ ಗಾಳಕ್ಕೆ ಸಿಲುಕಿದೆ. ಬಿಹಾರದ ಮಾಜಿ ಬಿಜೆಪಿ ಖಜಾಂಚಿ ಮತ್ತು ಬಿಹಾರ್ ಕ್ರಿಕೆಟ್ (Bihar cricket) ಸಂಸ್ಥೆಯ ಅಧ್ಯಕ್ಷ ರಾಕೇಶ್ ತಿವಾರಿ ಮತ್ತು ಮಾಜಿ ಶಾಸಕ ಹಾಗೂ ಬಿಹಾರ್ ಬಿಜೆಪಿ ವಕ್ತಾರ ಪ್ರೇಮ್ ರಂಜನ್ ಪಟೇಲ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಆಟಗಾರರ ಆಯ್ಕೆ ಪ್ರಕ್ರಿಯೆ ಗೊಂದಲವಾಗಿ ಉಳಿದಿದೆ.
ಬಿಹಾರ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಕೇಶ್ ತಿವಾರಿ, ಈಗಾಗಲೇ ನಾವು 135 ಕಿರಿಯ ಆಟಗಾರರನ್ನು ಶಾರ್ಟ್ ಲಿಸ್ಟ್ ಮಾಡಿದ್ದು ಸೆಪ್ಟೆಂಬರ್ 14ರ ಕ್ಯಾಂಪ್ ಮುಗಿದ ಬಳಿಕ ತಂಡವನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೂ ಮುನ್ನವೇ ಪ್ರೇಮ್ ರಂಜನ್ ಪಟೇಲ್ ಬಿಹಾರ್ ಅಂಡರ್-19 ತಂಡವನ್ನು ಬಿಸಿಸಿಐಗೆ ಮೇಲ್ ಮಾಡಿದ್ದಾರೆ.
ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿರುವ ತಿವಾರಿ, “ಬಿಹಾರ್ ಕ್ರಿಕೆಟ್ ಸಂಸ್ಥೆಗೂ ಪ್ರೇಮ್ ರಂಜನ್ಗೂ ಯಾವುದೇ ಸಂಬಂಧವಿಲ್ಲ. ಅವರು ಹೆಸರಿಸಿದ ಆಟಗಾರನ್ನು ಬಿಸಿಎ ನೋಂದಾಯಿಲ್ಲ. ಅವರಿಗೆ ಯಾವುದೇ ಮಾನ್ಯತೆ ಇಲ್ಲ, ಕಚೇರಿ ಇಲ್ಲ ಮತ್ತು ಅಧಿಕೃತ ಇಮೇಲ್ ವಿಳಾಸ ಕೂಡ ಇಲ್ಲ. ಅವರ ಚುನಾವಣೆ ಯಾವಾಗ ನಡೆಯಿತು? ಅವರ ಸದಸ್ಯರು ಯಾರು? ಇಲ್ಲಿ ಕೇವಲ ಗೊಂದಲಗಳನ್ನು ಸೃಷ್ಟಿಸಲು ಅಂತವರಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಇನ್ನೂ ಇದರ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಪಟೇಲ್, “ಕಳೆದ ವರ್ಷ 38 ಜಿಲ್ಲೆಗಳಿಂದ 28 ಸದಸ್ಯರು ಒಟ್ಟುಗೂಡಿ ತುರ್ತು ಸಭೆ ನಡೆಸಿದ್ದೆವು. ಆ ಸಭೆಯಲ್ಲಿ ತಿವಾರಿ ಅವರನ್ನು ಬಿಸಿಎ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದೇವೆ. ಮತ್ತು ನನ್ನನ್ನು ಬಿಹಾರ್ ಕ್ರಿಕೆಟ್ನ ಅಧ್ಯಕ್ಷನಾಗಿ ನೇಮಿಸಲಾಗಿತ್ತು” ಎಂದು ಹೇಳಿದ್ದಾರೆ.
“ನಾವು ಪ್ರತಿ ಜಿಲ್ಲೆಯಿಂದ ಆಟಗಾರರನ್ನು ಕರೆದು ಟ್ರಯಲ್ ಮಾಡಿ ಮುಗಿಸಿದ್ದೇವೆ. ನಮ್ಮ ಎಲ್ಲ ಕಾರ್ಯದ ಬಗ್ಗೆ ಬಿಸಿಸಿಐಗೂ ಮಾಹಿತಿಯನ್ನು ನೀಡಿದ್ದೇವೆ. ನಾನು ಬಿಸಿಎ ಅಧ್ಯಕ್ಷ, ಇದು ನನ್ನ ಕೆಲಸ, ಅದನ್ನು ನಾನು ಮಾಡುತ್ತಿದ್ದೇನೆ. ಬಿಹಾರ್ ಅಂಡರ್-19 ತಂಡವನ್ನು ಬಿಸಿಸಿಐಗೆ ಕಳುಹಿಸಿದ್ದೇನೆ. ಅವರು ಏನು ತೀರ್ಮಾನ ಮಾಡುತ್ತಾರೆ ಎಂಬುದು ಕಾದುನೋಡಬೇಕಿದೆ” ಎಂದು ಪ್ರೇಮ್ ರಂಜನ್ ಪಟೇಲ್ ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ನಾವು ಈ ವಿಚಾರದ ಬಗ್ಗೆ ಗಮನ ಹರಿಸುತ್ತೇವೆ ಎಂದಿದ್ದಾರೆ.
Virat Kohli: ‘ಬಾಲ್ ಟರ್ನ್ ಆಗಲು ಶುರುವಾದಾಗ ಆತ ಬಂದು ನಾನು ಬೌಲಿಂಗ್ ಮಾಡುತ್ತೇನೆ ಎಂದ’: ವಿರಾಟ್ ಕೊಹ್ಲಿ
(Ahead of Vinoo Mankad Trophy two BJP leaders queer Bihar cricket pitch My team vs your team)
