AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ajinkya Rahane: ನಾನು ಹೇಳಿದರೆ ವಿವಾದವಾಗುತ್ತೆ: ಪೋಸ್ಟ್ ಮ್ಯಾಚ್​ನಲ್ಲಿ ಕೋಪಗೊಂಡ ಅಜಿಂಕ್ಯಾ ರಹಾನೆ

KKR vs LSG, IPL 2025: ಈ ಪಂದ್ಯದಲ್ಲಿ ಸೂಪರ್ ಜೈಂಟ್ಸ್ ತಂಡವು ಮೂರು ವಿಕೆಟ್ ನಷ್ಟಕ್ಕೆ 238 ರನ್ ಗಳಿಸುವ ಮೂಲಕ ಕೆಕೆಆರ್ ತಂಡವನ್ನು ಏಳು ವಿಕೆಟ್ ನಷ್ಟಕ್ಕೆ 234 ರನ್ ಗಳಿಗೆ ಸೀಮಿತಗೊಳಿಸಿತು. ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜಿಂಕ್ಯಾ ರಹಾನೆ ತವರಿನ ಲಾಭದ ಬಗ್ಗೆ ಕೇಳಿದಾಗ ಕೋಪಗೊಂಡ ಘಟನೆ ನಡೆದಿದೆ.

Ajinkya Rahane: ನಾನು ಹೇಳಿದರೆ ವಿವಾದವಾಗುತ್ತೆ: ಪೋಸ್ಟ್ ಮ್ಯಾಚ್​ನಲ್ಲಿ ಕೋಪಗೊಂಡ ಅಜಿಂಕ್ಯಾ ರಹಾನೆ
Ajinkya Rahane Pressmeet
Vinay Bhat
|

Updated on: Apr 09, 2025 | 9:45 AM

Share

ಬೆಂಗಳೂರು (ಏ. 09): ಈಡನ್ ಗಾರ್ಡನ್ಸ್ ಪಿಚ್ ನ ಸ್ವರೂಪ ನೋಡಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಮತ್ತೊಮ್ಮೆ ನಿರಾಶೆಗೊಂಡಿದ್ದಾರೆ. ತವರಿನಲ್ಲಿ ಎರಡನೇ ಸೋಲಿನ ನಂತರ, ಕೆಕೆಆರ್ ನಾಯಕ ಸ್ಪಿನ್ನರ್‌ಗಳಿಗೆ ಯಾವುದೇ ಸಹಾಯ ಮಾಡದ ಪಿಚ್ ಬಗ್ಗೆ ಕೋಪಗೊಂಡರು. ಕೆಕೆಆರ್ ತಂಡ ತಮ್ಮ ತವರು ನೆಲಸ ಪಿಚ್‌ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತೆ ಎಂದು ನಿರೀಕ್ಷಿಸಿತ್ತು ಆದರೆ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಹಾಲಿ ಚಾಂಪಿಯನ್‌ಗಳನ್ನು ನಾಲ್ಕು ರನ್‌ಗಳಿಂದ ಸೋಲಿಸಿತು. ಈ ಪಂದ್ಯದ ನಂತರ ಕೆಕೆಆರ್ ನಾಯಕ ರಹಾನೆ, ‘ಮೊದಲನೆಯದಾಗಿ ಸ್ಪಿನ್ನರ್‌ಗಳಿಗೆ ಯಾವುದೇ ಸಹಾಯವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ’ ಎಂದು ಹೇಳಿದರು.

ಈ ಪಂದ್ಯದಲ್ಲಿ ಸೂಪರ್ ಜೈಂಟ್ಸ್ ತಂಡವು ಮೂರು ವಿಕೆಟ್ ನಷ್ಟಕ್ಕೆ 238 ರನ್ ಗಳಿಸುವ ಮೂಲಕ ಕೆಕೆಆರ್ ತಂಡವನ್ನು ಏಳು ವಿಕೆಟ್ ನಷ್ಟಕ್ಕೆ 234 ರನ್ ಗಳಿಗೆ ಸೀಮಿತಗೊಳಿಸಿತು. ಕೆಕೆಆರ್ ಬೌಲರ್‌ಗಳ ವಿರುದ್ಧ ಎದುರಾಳಿ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ರನ್ ಗಳಿಸಿದ್ದರಿಂದ ರಹಾನೆ ಮೊದಲು ಬೌಲಿಂಗ್ ಮಾಡುವ ನಿರ್ಧಾರವು ತಿರುಗುಬಾಣವಾಯಿತು.

ಈ ಋತುವಿನಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಎರಡನೇ ಸೋಲು ಅನುಭವಿಸಿತು:

ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜಿಂಕ್ಯಾ ರಹಾನೆ, ‘ಅವರು ಬೌಂಡರಿಗಳನ್ನು ಚೆನ್ನಾಗಿ ಬಳಸಿಕೊಂಡರು, ನಮ್ಮ ಬೌಲರ್‌ಗಳು ಸಹ ಅವರನ್ನು ಕಟ್ಟಿ ಹಾಕಲು ಸಾಕಷ್ಟು ಪ್ರಯತ್ನಿಸಿದರು ಆದರೆ (ನಿಕೋಲಸ್) ಪೂರನ್ ಮತ್ತು ಮಿಚೆಲ್ ಮಾರ್ಷ್ ಮಧ್ಯದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಅವರು ತಮ್ಮ ಅವಕಾಶಗಳನ್ನು ಬಳಸಿಕೊಂಡರು. ಇದು ಒಂದು ಉತ್ತಮ ವಿಕೆಟ್, ನಾವೆಲ್ಲರೂ ನೋಡಿದ್ದೇವೆ, ಈ ವಿಕೆಟ್‌ನಲ್ಲಿ ಸುಮಾರು 500 ರನ್ ಗಳಿಸಲಾಗಿದೆ, ಬೌಲರ್‌ಗಳಿಗೆ ಇದು ಕಷ್ಟಕರವಾಗಿತ್ತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಗಲ್ಲಿ ಕ್ರಿಕೆಟ್‌ನಲ್ಲೂ ಹೀಗೆ ಆಗಲ್ಲ: PBKS vs CSK ಪಂದ್ಯದಲ್ಲಿ ಏನಾಯಿತು?
Image
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
Image
ಐಪಿಎಲ್ 2025 ರ ಅತ್ಯಂತ ವೇಗದ ಶತಕ ಬಾರಿಸಿದ ಪ್ರಿಯಾಂಶ್ ಆರ್ಯ
Image
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್

PBKS vs CSK, IPL 2025: ಗಲ್ಲಿ ಕ್ರಿಕೆಟ್‌ನಲ್ಲೂ ಹೀಗೆ ಆಗಲ್ಲ: ಪಂಜಾಬ್-ಸಿಎಸ್‌ಕೆ ಪಂದ್ಯದಲ್ಲಿ ಊಹಿಸಲಾಗದ ಘಟನೆ

ಸೂಪರ್ ಜೈಂಟ್ಸ್ ತಂಡದ ಸ್ಪಿನ್ ಜೋಡಿ ದಿಗ್ವೇಶ್ ರಾಥಿ ಮತ್ತು ರವಿ ಬಿಷ್ಣೋಯ್ ತಮ್ಮ ಎಂಟು ಓವರ್‌ಗಳಲ್ಲಿ ಒಟ್ಟು 80 ರನ್‌ಗಳನ್ನು ಬಿಟ್ಟುಕೊಟ್ಟರು ಆದರೆ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಕೆಕೆಆರ್‌ನ ಸ್ಪಿನ್‌ ಜೋಡಿ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಯಾವುದೇ ವಿಕೆಟ್ ಪಡೆಯಲಿಲ್ಲ ಮತ್ತು ಪ್ರತಿ ಓವರ್‌ಗೆ ಒಂಬತ್ತು ರನ್‌ಗಳಿಗಿಂತ ಹೆಚ್ಚು ರನ್‌ಗಳನ್ನು ನೀಡಿದರು.

ಸುದ್ದಿಗೋಷ್ಠಿಯಲ್ಲಿ ತವರಿನ ಲಾಭದ ಬಗ್ಗೆ ಕೇಳಿದಾಗ ಕೋಪಗೊಂಡ ರಹಾನೆ, ‘ನೋಡಿ, ವಿಕೆಟ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಹಾಗಾಗಿ ನಾನು ಈಗ ಏನಾದರೂ ಹೇಳಿದರೆ ಅದು ವಿವಾದ ಆಗುತ್ತದೆ’ ಎಂದಿದ್ದಾರೆ. ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ಮೇಲೆ ಪರೋಕ್ಷ ದಾಳಿ ನಡೆಸಿದ ರಹಾನೆ, ‘ನಮ್ಮ ಕ್ಯುರೇಟರ್‌ಗೆ ಸಾಕಷ್ಟು ಪ್ರಚಾರ ಸಿಕ್ಕಿದೆ. ಈ ಪ್ರಚಾರದಿಂದ ಅವರು ಸಂತೋಷಪಟ್ಟಿದ್ದಾರೆಂದು ನಾನು ಭಾವಿಸುತ್ತೇನೆ. ದೇಶೀಯ ಪ್ರಯೋಜನಗಳ ಬಗ್ಗೆ ನೀವು ಏನು ಬೇಕಾದರೂ ಬರೆಯಬಹುದು, ನಿಮಗೆ ಏನು ಅನಿಸಿತು ಎಂಬುದನ್ನು ಬರೆಯಬಹುದು. ನನಗೆ ಏನಾದರೂ ಅನುಮಾನ ಇದ್ದರೆ ನಾನು ಇಲ್ಲಿ ಮಾತನಾಡುವ ಬದಲು ನೇರವಾಗಿ ಐಪಿಎಲ್‌ಗೆ ಹೇಳುತ್ತೇನೆ’ ಎಂದು ಕಿಡಿಕಾರಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ