
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರನ್ನು ಇಡುವ ಮೂಲಕ ಗೌರವಿಸಲಾಗಿದೆ. ಫೆಬ್ರವರಿ 13, 2024 ರಂದು ನಡೆದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಈ ನಾಮಕರಣವನ್ನು ಅಧಿಕೃತಗೊಳಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣ ಮಹೋತ್ಸವದ (50 ವರ್ಷಗಳು) ಸಂಭ್ರಮದ ಭಾಗವಾಗಿದ್ದ ಈ ಕಾರ್ಯಕ್ರಮದ ಮೂಲಕ ಮೂರು ಸ್ಟ್ಯಾಂಡ್‌ಗಳಿಗೆ ಮಾಜಿ ಕ್ರಿಕೆಟರುಗಳ ಹೆಸರಿಡುವುದಾಗಿ ಘೋಷಿಸಲಾಯಿತು.
ಈ ಸಂತಸದ ಕ್ಷಣಗಳ ನಡುವೆ ಮಾತನಾಡಿದ ರಾಹುಲ್ ದ್ರಾವಿಡ್, ಈ ಮೈದಾನವು ತಮ್ಮ “ಎರಡನೇ ಮನೆ” ಇದ್ದಂತೆ. ಉಲ್ಲೇ ಆಡಿ ಬೆಳೆದ ನನಗೆ ಇದೀಗ ಅದೇ ಮೈದಾನದಲ್ಲಿ ಗೌರವ ಸಿಕ್ಕಿರುವುದು ಹೆಮ್ಮೆಯ ವಿಷಯ. ಇದಕ್ಕೆ ನಾನು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಅನಿಲ್ ಕುಂಬ್ಳೆ, 9ನೇ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಬಂದಿದ್ದ ಕ್ರೀಡಾಂಗಣದಲ್ಲಿ ಇಂದು ತನ್ನ ಹೆಸರಿನ ಸ್ಟ್ಯಾಂಡ್ ಇರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ನಮ್ಮ ಹೆಸರುಗಳೊಂದಿಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರ ಹೆಸರನ್ನೂ ಸಹ ಒಂದು ಸ್ಟ್ಯಾಂಡ್‌ಗೆ ನಾಮಕರಣ ಮಾಡಿರುವುದು ಅತ್ಯಂತ ಖುಷಿಯ ವಿಚಾರ. ಇದು ಮಹಿಳಾ ಕ್ರಿಕೆಟ್‌ಗೆ ಸಿಕ್ಕ ಗೌರವ ಎಂದು ಅನಿಲ್ ಕುಂಬ್ಳೆ ಬಣ್ಣಿಸಿದರು.
ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ಅರ್ಧದಲ್ಲೇ ಚೆಂಡೆಸೆದು ಸಿಕ್ಕಿ ಬಿದ್ದ ಎರಾಸ್ಮಸ್..!
Published On - 10:44 am, Sat, 14 February 26