ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಕರ್ನಾಟಕವನ್ನು ಕಾಡಿದ ಅರ್ಜುನ್ ತೆಂಡೂಲ್ಕರ್
Arjun Tendulkar All-Round Heroics: 2025-26 ರ ರಣಜಿ ಟ್ರೋಫಿಯಲ್ಲಿ ಗೋವಾ ಪರ ಅರ್ಜುನ್ ತೆಂಡೂಲ್ಕರ್ ಕರ್ನಾಟಕ ವಿರುದ್ಧ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್‌ನಲ್ಲಿ 3 ವಿಕೆಟ್ ಕಬಳಿಸಿದ ಅರ್ಜುನ್, ಬ್ಯಾಟಿಂಗ್‌ನಲ್ಲಿ ಗೋವಾ ಸಂಕಷ್ಟದಲ್ಲಿದ್ದಾಗ ಅಜೇಯ 43 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಅವರ ಹೋರಾಟದ ಇನ್ನಿಂಗ್ಸ್ ತಂಡಕ್ಕೆ ಭರವಸೆ ಮೂಡಿಸಿದೆ. ಇದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ.

2025-26 ರ ರಣಜಿ ಟ್ರೋಫಿಯ (Ranji Trophy) ಎರಡನೇ ಸುತ್ತಿನಲ್ಲಿ ಗೋವಾ ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ (Arjun Tendulkar), ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ತಮ್ಮ ಅದ್ಭುತ ಆಲ್‌ರೌಂಡ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮೊದಲು ಬೌಲಿಂಗ್‌ನಲ್ಲಿ ಕಮಾಲ್ ಮಾಡಿದ್ದ ಅರ್ಜುನ್, ಇದೀಗ ಬ್ಯಾಟಿಂಗ್‌ನಲ್ಲಿ ಕರ್ನಾಟಕ ತಂಡವನ್ನು ಕಾಡುತ್ತಿದ್ದಾರೆ. ಮೊದಲು ಬೌಲಿಂಗ್‌ನಲ್ಲಿ ಪ್ರಮುಖ 3 ವಿಕೆಟ್ ಉರುಳಿಸಿದ್ದ ಅರ್ಜುನ್, ಇದೀಗ ಬ್ಯಾಟಿಂಗ್‌ನಲ್ಲಿ ಗೋವಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಮೂರನೇ ದಿನದಾಟದಂತ್ಯಕ್ಕೆ ಅರ್ಜುನ್ ಅಜೇಯ 43 ರನ್ ಬಾರಿಸಿ ತಂಡದ ಪರ ಹೋರಾಟದ ಇನ್ನಿಂಗ್ಸ್ ಕಟ್ಟಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿದ ಅರ್ಜುನ್
ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ತಮ್ಮ ಆಲ್‌ರೌಂಡರ್ ಪ್ರದರ್ಶನದ ಮೂಲಕ ಕರ್ನಾಟಕ ತಂಡವನ್ನು ಕಾಡಿದ್ದಾರೆ. ಮೊದಲು ಬೌಲಿಂಗ್‌ನಲ್ಲಿ 29 ಓವರ್‌ಗಳನ್ನು ಬೌಲಿಂಗ್ ಮಾಡಿದ ಅರ್ಜುನ್ 100 ರನ್ ನಿಡಿ ಮೂರು ವಿಕೆಟ್‌ಗಳನ್ನು ಪಡೆದರು. ಅರ್ಜುನ್ ಬೌಲಿಂಗ್‌ನಲ್ಲಿ ಬಲಿಯಾದವರಲ್ಲಿ ಕರ್ನಾಟಕದ ಆರಂಭಿಕ ಆಟಗಾರರಾದ ನಿಕ್ಕಿನ್ ಜೋಸ್, ಶ್ರೀಜಿತ್ ಮತ್ತು ಅಭಿನವ್ ಮನೋಹರ್ ಸೇರಿದ್ದರು.
ಅಜೇಯ 43 ರನ್ ಬಾರಿಸಿರುವ ಅರ್ಜುನ್
ನಂತರ, ಗೋವಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಸಂಕಷ್ಟದಲ್ಲಿದ್ದಾಗ, ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಗೋವಾ ಕೇವಲ 100 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು ಮತ್ತು ಕರ್ನಾಟಕದ ಬೌಲರ್‌ಗಳು ಪ್ರಾಬಲ್ಯ ಸಾಧಿಸುತ್ತಿರುವಂತೆ ತೋರುತ್ತಿತ್ತು. ಆದರೆ ಈ ವೇಳೆ ಬ್ಯಾಟಿಂಗ್ಗೆ ಇಳಿದ ಅರ್ಜುನ್ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಮೂರನೇ ದಿನದ ಆಟದ ಅಂತ್ಯದ ವೇಳೆಗೆ, ಅವರು 115 ಎಸೆತಗಳಲ್ಲಿ 43 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಅವರ ಇನ್ನಿಂಗ್ಸ್‌ನಲ್ಲಿ ಐದು ಅದ್ಭುತ ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸೇರಿವೆ. ದಿನದ ಅಂತ್ಯದ ವೇಳೆಗೆ ಗೋವಾ ಆರು ವಿಕೆಟ್‌ಗಳ ನಷ್ಟಕ್ಕೆ 171 ರನ್‌ಗಳಿಸಿದೆ. ಗೋವಾ ಇನ್ನೂ ಕರ್ನಾಟಕಕ್ಕಿಂತ 200 ರನ್‌ಗಳ ಹಿಂದಿದ್ದರೂ, ಅರ್ಜುನ್ ಅವರ ಅಜೇಯ ಇನ್ನಿಂಗ್ಸ್ ತಂಡಕ್ಕೆ ಭರವಸೆಯ ಬೆಳಕನ್ನು ನೀಡಿದೆ.
Ranji Trophy: 540 ಎಸೆತಗಳಲ್ಲಿ ಮುಗಿದ ರಣಜಿ ಪಂದ್ಯ; 63 ವರ್ಷಗಳ ಹಳೆಯ ದಾಖಲೆ ಪುಡಿಪುಡಿ
ಅರ್ಜುನ್ ತೆಂಡೂಲ್ಕರ್ ಈಗ ತಮ್ಮ ಅಜೇಯ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಿ ಗೋವಾದ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸಲಿದ್ದಾರೆ. ಕರ್ನಾಟಕದ ಬಲಿಷ್ಠ ಬೌಲಿಂಗ್ ಲೈನ್ ಅಪ್ ವಿರುದ್ಧದ ಸವಾಲು ಸುಲಭವಲ್ಲ, ಆದರೆ ಅರ್ಜುನ್ ಅವರ ಆತ್ಮವಿಶ್ವಾಸ ಮತ್ತು ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
