India vs New zealand 2nd Test: ಕ್ಲೀನ್ ಬೌಲ್ಡ್​ಗೆ ರಿವ್ಯೂ ಕೇಳಿ ನಗೆಪಾಟಲಿಗೀಡಾದ ಅಶ್ವಿನ್

India vs New zealand 2nd Test: ಕ್ಲೀನ್ ಬೌಲ್ಡ್​ಗೆ ರಿವ್ಯೂ ಕೇಳಿ ನಗೆಪಾಟಲಿಗೀಡಾದ ಅಶ್ವಿನ್
Ashwin

India vs New zealand 2nd Test: ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 325 ರನ್​ಗಳನ್ನು ಕಲೆಹಾಕಿದೆ. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ ಕೇವಲ 62 ರನ್​ಗಳಿಗೆ ಆಲೌಟ್ ಮಾಡಿ ಎರಡನೇ ಇನಿಂಗ್ಸ್ ಆರಂಭಿಸಿದೆ.

TV9kannada Web Team

| Edited By: Zahir PY

Dec 04, 2021 | 10:06 PM

ಮುಂಬೈನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಹಲವು ರೋಚಕತೆಗಳಿಗೆ ಸಾಕ್ಷಿಯಾಗಿತ್ತು. ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾವನ್ನು 325 ರನ್​ಗೆ ಆಲೌಟ್ ಮಾಡಿದ ಎಜಾಝ್ ಪಟೇಲ್ 10 ವಿಕೆಟ್ ಉರುಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಕೇವಲ 62 ರನ್​ಗಳಿಗೆ ನ್ಯೂಜಿಲೆಂಡ್ ಅನ್ನು ಆಲೌಟ್ ಮಾಡಿ ದಾಖಲೆ ಬರೆದರು. ಇನ್ನು ಈ ಪಂದ್ಯದಲ್ಲಿ ಕೈಲ್ ಜೇಮಿಸನ್ ಅವರ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಶ್ರೇಯಸ್ ಅಯ್ಯರ್ ಗಮನ ಸೆಳೆದರು. ಇನ್ನೊಂದೆಡೆ ಮೊದಲ ಇನಿಂಗ್ಸ್​ನಲ್ಲಿ ರಿವ್ಯೂ ಪಡೆದು ರವಿಚಂದ್ರನ್ ಅಶ್ವಿನ್ ನಗೆಪಾಟಲಿಗೀಡಾದರು.

ಎಜಾಝ್ ಪಟೇಲ್ ಎಸೆತದ 72ನೇ ಓವರ್​ನಲ್ಲಿ ಅಶ್ವಿನ್ ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ ಇತ್ತ ಅಶ್ವಿನ್ ಬೇಲ್ಸ್ ಬಿದ್ದಿರುವುದು ಗಮನಿಸದೇ ನೇರವಾಗಿ ಅಂಪೈರ್​​ಗೆ ರಿವ್ಯೂ ಮನವಿ ಸಲ್ಲಿಸಿದರು. ಅತ್ತ ನ್ಯೂಜಿಲೆಂಡ್ ಕ್ರಿಕೆಟಿಗರಿಗೂ ಶಾಕ್. ಏಕೆಂದರೆ ಬೌಲ್ಡ್ ಆದರೆ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸುವಂತಿಲ್ಲ. ಅಷ್ಟರಲ್ಲಾಗಲೇ ನಾನ್ ಸ್ಟ್ರೈಕ್​ನಲ್ಲಿದ್ದ ಮಯಾಂಕ್ ಅಗರ್ವಾಲ್ ಅಶ್ವಿನ್​ಗೆ ಕ್ಲೀನ್ ಬೌಲ್ಡ್ ಆಗಿದ್ದೀರಿ ಎಂಬುದನ್ನು ತಿಳಿಸಿದರು. ಆ ಬಳಿಕವಷ್ಟೇ ಅಶ್ವಿನ್​ಗೆ ತಾನು ಬೌಲ್ಡ್ ಆಗಿರುವುದು ಗೊತ್ತಾಗಿದ್ದದು. ಇದೀಗ ಅಶ್ವಿನ್ ಅವರ ರಿವ್ಯೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 325 ರನ್​ಗಳನ್ನು ಕಲೆಹಾಕಿದೆ. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ ಕೇವಲ 62 ರನ್​ಗಳಿಗೆ ಆಲೌಟ್ ಮಾಡಿ ಎರಡನೇ ಇನಿಂಗ್ಸ್ ಆರಂಭಿಸಿದೆ. 2ನೇ ದಿನದಾಟದ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 69 ರನ್​ಗಳಿಸಿದೆ. ಕ್ರೀಸ್​ನಲ್ಲಿ 332 ರನ್​ಗಳ ಮುನ್ನಡೆಯೊಂದಿಗೆ ಮಯಾಂಕ್ ಅರ್ಗವಾಲ್ ಹಾಗೂ ಚೇತೇಶ್ವರ ಪೂಜಾರಾ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್

ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(Ashwin comically reviews after being bowled)

Follow us on

Most Read Stories

Click on your DTH Provider to Add TV9 Kannada