AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Australia vs England: ರಿಷಭ್ ಪಂತ್ ದಾಖಲೆ ಪುಡಿ ಪುಡಿ ಮಾಡಿದ ಅಲೆಕ್ಸ್ ಕ್ಯಾರಿ: ಚೊಚ್ಚಲ ಟೆಸ್ಟ್​ನಲ್ಲೇ ವಿಶೇಷ ಸಾಧನೆ

Alex Carey: ಅಲೆಕ್ಸ್ ಕ್ಯಾರಿ ಪದಾರ್ಪಣೆ ಮಾಡಿದ ಟೆಸ್ಟ್ ಪಂದ್ಯದಲ್ಲೇ ಎಂಟು ಅಥವಾ ಅದಕ್ಕಿಂತ ಅಧಿಕ ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದಾರೆ. ಈ ಮೂಲಕ 7 ಕ್ಯಾಚ್ ಪಡೆದಿದ್ದ ಇಂಗ್ಲೆಂಡ್​ನ ಕ್ರಿಸ್ ರೀಡ್ ಮತ್ತು ಆಸ್ಟ್ರೇಲಿಯಾದ ಬ್ರಿಯಾನ್ ಟಬೆರ್ ದಾಖಲೆ ಹಿಂದಿಕ್ಕಿದ್ದಾರೆ.

Australia vs England: ರಿಷಭ್ ಪಂತ್ ದಾಖಲೆ ಪುಡಿ ಪುಡಿ ಮಾಡಿದ ಅಲೆಕ್ಸ್ ಕ್ಯಾರಿ: ಚೊಚ್ಚಲ ಟೆಸ್ಟ್​ನಲ್ಲೇ ವಿಶೇಷ ಸಾಧನೆ
Alex Carey AUS vs ENG
TV9 Web
| Edited By: |

Updated on:Dec 11, 2021 | 11:56 AM

Share

ಬ್ರಿಸ್ಬೇನ್​ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2021-22ನೇ ಸಾಲಿನ ಪ್ರತಿಷ್ಠಿತ ಆ್ಯಶಸ್ ಸರಣಿಯ (Ashes Series) ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia vs England) 9 ವಿಕೆಟ್​ಗಳ ಅಮೋಘ ಗೆಲುವು ಕಂಡಿದೆ. ಚೊಚ್ಚಲ ಬಾರಿಗೆ ಪ್ಯಾಟ್ ಕಮಿನ್ಸ್ (Pat Cummins) ನಾಯಕತ್ವದಲ್ಲಿ ಕಾಂಗರೂ ಪಡೆ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಐದು ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆಸೀಸ್ ಬೌಲಿಂಗ್ ಬಿರುಗಾಳಿಗೆ ತತ್ತರಿಸಿ ಹೋದ ಇಂಗ್ಲೆಂಡ್ ಹೀನಾಯ ಸೋಲು ಕಂಡಿದೆ. ಈ ಆ್ಯಶಸ್ ಸರಣಿಯ ಮೊದಲ ಪಂದ್ಯ ಹಲವು ಮಹತ್ವದ ದಾಖಲೆಗಳಿಗೆ ಸಾಕ್ಷಿಯಾಯಿತು. ಅದರಲ್ಲೂ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ (Alex Carey) ತಮ್ಮ ಚೊಚ್ಚಲ ಪಂದ್ಯದಲ್ಲೇ ವಿಶೇಷ ಸಾಧನೆ ಮಾಡಿದ್ದಾರೆ.

ಅಲೆಕ್ಸ್ ಕ್ಯಾರಿ ಪದಾರ್ಪಣೆ ಮಾಡಿದ ಟೆಸ್ಟ್ ಪಂದ್ಯದಲ್ಲೇ ಎಂಟು ಅಥವಾ ಅದಕ್ಕಿಂತ ಅಧಿಕ ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದಾರೆ. ಈ ಮೂಲಕ 7 ಕ್ಯಾಚ್ ಪಡೆದಿದ್ದ ಇಂಗ್ಲೆಂಡ್​ನ ಕ್ರಿಸ್ ರೀಡ್ ಮತ್ತು ಆಸ್ಟ್ರೇಲಿಯಾದ ಬ್ರಿಯಾನ್ ಟಬೆರ್ ದಾಖಲೆ ಹಿಂದಿಕ್ಕಿದ್ದಾರೆ. ಜೊತೆಗೆ ಭಾರತ ಪರ  ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ 7 ಕ್ಯಾಚ್ ಪಡೆದಿದ್ದ ರಿಷಭ್ ಪಂತ್ ದಾಖಲೆಯನ್ನೂ ಪುಡಿ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಚೊಚ್ಚಲ ಟೆಸ್ಟ್​ನಲ್ಲೇ 9 ಡಿಸ್​ಮಿಸ್ ಮಾಡಿದ ದಾಖಲೆ ಹೊಂದಿದ್ದಾರೆ. ಆದರೆ, ಇವರು ವಿಕೆಟ್ ಕೀಪರ್ ಬಿಟ್ಟು ಫೀಲ್ಡ್ ಕೂಡ ಮಾಡಿದ್ದಾರೆ.

ನೇಥನ್ ಲ್ಯಾನ್ ದಾಖಲೆ:

ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನೇಥನ್ ಲ್ಯಾನ್ ಟೆಸ್ಟ್ ಕ್ರಿಕೆಟ್​ನಲ್ಲಿ 400 ವಿಕೆಟ್ ಪಡೆದು ನೂತನ ದಾಖಲೆ ಬರೆದರು. ಪುರುಷರ ಟೆಸ್ಟ್ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ 17ನೇ ಆಟಗಾರ ಎಂದೆನಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ಪರ ಶೆನ್ ವಾರ್ನ್ ಮತ್ತು ಗ್ಲೆನ್ ಮೆಕ್​ಗ್ರಾತ್ ಬಳಿಕ 400 ವಿಕೆಟ್ ದಾಟಿದ ಬೌಲರ್ ಆಗಿದ್ದಾರೆ. ಅಲ್ಲದೆ ಭಾರತದ ಹರ್ಭಜನ್ ಸಿಂಗ್ ಸಾಧನೆ ಮುರಿಯಲು ಇವರಿಗೆ 15 ವಿಕೆಟ್​ಗಳ ಬೇಕಾಗಿವೆಯಷ್ಟೆ. ಆಫ್ ಸ್ಪಿನ್ನರ್​ಗಳ ಸಾಲಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ನೇಥನ್ 4ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೆ ರವಿಚಂದ್ರನ್ ಅಶ್ವಿನ್ 427 ವಿಕೆಟ್ ಕಬಳಿಸಿದ್ದರು.

ಈ ಪಂದ್ಯದಲ್ಲಿ ಮೊದಲ ದಿನ ಇಂಗ್ಲೆಂಡ್ ತಂಡ ಪ್ಯಾಟ್ ಕಮಿನ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ 147 ರನ್​ಗೆ ಸರ್ವಪತನ ಕಂಡಿತು. ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಎರಡನೇ ವಿಕೆಟ್​ಗೆ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬುಶೇನ್ ಭರ್ಜರಿ ಜೊತೆಯಾಟ ಆಡಿದರು. ನಂತರ ಟ್ರಾವಿಸ್ ಹೆಡ್‌ ಇಂಗ್ಲೆಂಡಿಗೆ ತಲೆನೋವಾಗಿ ಪರಿಣಮಿಸಿದರು. ಬರೋಬ್ಬರಿ 2 ವರ್ಷಗಳ ಬಳಿಕ ಮೊದಲ ಶತಕ ಸಿಡಿಸಿದ ಇವರು ತಂಡಕ್ಕೆ ಆಸರೆಯಾಗಿ ನಿಂತರು. ಇವರು 148 ಎಸೆತಗಳಲ್ಲಿ 14 ಬೌಂಡರಿ, 4 ಸಿಕ್ಸರ್​ನೊಂದಿಗೆ 152 ರನ್ ಸಿಡಿಸಿ ಔಟ್ ಆಗುವ ಮೂಲಕ ಆಸ್ಟ್ರೇಲಿಯಾ 425 ರನ್​ಗೆ ಆಲೌಟ್ ಆಯಿತು.

ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಮೂರನೇ ವಿಕೆಟ್​ಗೆ ಜೊತೆಯಾದ ಡೇವಿಡ್ ಮಲನ್ ಹಾಗೂ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾಗಿ ನಿಂತರು. ಇಬ್ಬರೂ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಇಂಗ್ಲೆಂಡ್ 103 ಓವರ್​ಗಳಲ್ಲಿ 297 ರನ್​ಗೆ ಆಲೌಟ್ ಆಯಿತು. 20 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 5.1 ಓವರ್​ನಲ್ಲಿ ಗೆಲುವು ಸಾಧಿಸಿತು.

Australia vs England: ಗಬ್ಬಾದಲ್ಲಿ ಅಬ್ಬರಿಸಿದ ಆಸ್ಟ್ರೇಲಿಯಾ, ನೇಥನ್ ಲ್ಯಾನ್ ನೂತನ ದಾಖಲೆ: ಮೊದಲ ಟೆಸ್ಟ್​ನಲ್ಲಿ ಭರ್ಜರಿ ಜಯ

Virat Kohli and Anushka Sharma: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

Published On - 10:22 am, Sat, 11 December 21