AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ಬಾಬರ್ ಆಝಂ

England vs Pakistan: ಇಂಗ್ಲೆಂಡ್ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 164 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 19.1 ಓವರ್​ಗಳಲ್ಲಿ 166 ರನ್ ಬಾರಿಸಿ 2 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಂಗ್ಲ ಪಡೆ ಸೆಮಿಫೈನಲ್​ಗೇರಿದೆ.

ಪಾಕಿಸ್ತಾನದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ಬಾಬರ್ ಆಝಂ
Babar Azam
ಝಾಹಿರ್ ಯೂಸುಫ್
|

Updated on: Feb 25, 2026 | 11:09 AM

Share

T20 World Cup 2026: ಪಲ್ಲೆಕೆಲೆ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ತಂಡ ಅರ್ಧ ಪಂದ್ಯವನ್ನೇ ಗೆದ್ದಂತೆ. ಹೀಗಾಗಿಯೇ ಈ ಮೈದಾನದಲ್ಲಿ ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್ ಆಯ್ದುಕೊಳ್ಳುತ್ತೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಮರು ಯೋಚಿಸದೇ ಬ್ಯಾಟಿಂಗ್ ಎಂದಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ತಂಡಕ್ಕೆ ಸಾಹಿಬ್​ಝಾದ ಫರ್ಹಾನ್ ಉತ್ತಮ ಆರಂಭ ಒದಗಿಸಿದ್ದರು. ಪರಿಣಾಮ ಪವರ್​ಪ್ಲೇನಲ್ಲಿ ಪಾಕ್ ತಂಡವು 46 ರನ್​ಗಳಿಸಲು ಸಾಧ್ಯವಾಯಿತು. ಇದರ ನಡುವೆ 6 ಎಸೆತಗಳಲ್ಲಿ ಬಾಬರ್ ಆಝಂ 10 ರನ್​ ಬಾರಿಸಿದ್ದರು.

ಆದರೆ ಪವರ್​ಪ್ಲೇ ಮುಕ್ತಾಯದ ಬಳಿಕ ಬಾಬರ್ ಟೆಸ್ಟ್ ಆಟ ಶುರು ಮಾಡಿಕೊಂಡರು. ಅಂದರೆ ಮೊದಲ 6 ಎಸೆತಗಳಲ್ಲಿ 10 ರನ್​ಗಳಿಸಿದ್ದ ಬಾಬರ್ ಉಳಿದ 18 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 15 ರನ್​ಗಳು ಮಾತ್ರ. ಈ ಹದಿನೈದು ರನ್​ಗಳಲ್ಲಿ 2 ರನ್ ಓವರ್ ಥ್ರೋನಿಂದ ಸಿಕ್ಕಿದ್ದು ಎಂಬುದು ಇಲ್ಲಿ ಉಲ್ಲೇಖಾರ್ಹ.

ಅಂದರೆ ಪವರ್​ಪ್ಲೇ ಬಳಿಕ ಬಾಬರ್ ಆಝಂ ಎದುರಿಸಿದ 18 ಎಸೆತಗಳಲ್ಲಿ ಕೇವಲ 13 ರನ್​ ಮಾತ್ರ ಕಲೆಹಾಕಿದ್ದರು. ಇದರಲ್ಲಿ ಒಂದೇ ಒಂದು ಫೋರ್ ಕೂಡ ಇರಲಿಲ್ಲ.

4ನೇ ಓವರ್ ವೇಳೆ ಕ್ರೀಸ್​ಗೆ ಆಗಮಿಸಿ 11ನೇ ಓವರ್​ ತನಕ ಬ್ಯಾಟ್ ಬೀಸಿದ ಬಾಬರ್ ಆಝಂ ಕಲೆಹಾಕಿದ್ದು 24 ಎಸೆತಗಳಲ್ಲಿ 25 ರನ್​ಗಳು ಮಾತ್ರ. ಈ 24 ಎಸೆತಗಳು ಪಾಕ್ ಪಾಲಿಗೆ ದುಬಾರಿಯಾಯಿತು ಎಂದರೆ ತಪ್ಪಾಗಲಾರದು.

ಏಕೆಂದರೆ ಬೃಹತ್ ಮೊತ್ತದ ಟಾರ್ಗೆಟ್​ನೊಂದಿಗೆ ಕಣಕ್ಕಿಳಿದಿದ್ದ ಪಾಕ್ ತಂಡವು 11 ಓವರ್​ಗಳ ಮುಕ್ತಾಯದ ವೇಳೆಗೆ ಗಳಿಸಿದ್ದು ಕೇವಲ 73 ರನ್​ಗಳು ಮಾತ್ರ.

ಇತ್ತ ಬಾಬರ್ ಆಝಂ ಔಟಾಗುತ್ತಿದ್ದಂತೆ ಪಾಕಿಸ್ತಾನ್ ತಂಡವು ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡುವ ಪ್ರಯತ್ನಕ್ಕೆ ಕೈ ಹಾಕಿತು. ಈ ಪ್ರಯತ್ನದ ಫಲವಾಗಿ 20 ಓವರ್​ಗಳಲ್ಲಿ 164 ರನ್​ ಕಲೆಹಾಕಿತು.

ಸಾಮಾನ್ಯವಾಗಿ ಪಲ್ಲೆಕೆಲೆ ಪಿಚ್​ನಲ್ಲಿ 170 ರಿಂದ 180 ರನ್​ಗಳಿಸಿದರೆ ಮೊದಲು ಬ್ಯಾಟ್ ಮಾಡುವ ತಂಡ ಗೆಲ್ಲುತ್ತದೆ. ಇದೇ ಲೆಕ್ಕಾಚಾರದೊಂದಿಗೆ ಪಾಕಿಸ್ತಾನ್ ತಂಡ ಕೂಡ ಮೊದಲು ಬ್ಯಾಟ್ ಮಾಡಿ 180 ರಿಂದ 190 ರನ್​ಗಳಿಸುವ ಇರಾದೆಯಲ್ಲಿತ್ತು.

ಆದರೆ ಪವರ್​ಪ್ಲೇ ಬಳಿಕ ಬಾಬರ್ ಆಡಿ ಟುಕ್ ಟುಕ್ ಆಟದಿಂದಾಗಿ ಪಾಕಿಸ್ತಾನ್ ತಂಡದ ಲೆಕ್ಕಾಚಾರಗಳೇ ಬುಡಮೇಲಾಯಿತು. ಇದೀಗ ಬಾಬರ್ ಆಝಂ ಅವರ ಕಳಪೆ ಬ್ಯಾಟಿಂಗ್ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಅಳಿಯಲಿದೆಯಾ, ಉಳಿಯಲಿದೆಯಾ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ

ಅದರಲ್ಲೂ ಅನುಭವಿ ದಾಂಡಿಗನಾಗಿರುವ ಬಾಬರ್ ಆಝಂ ಈ ಬಾರಿಯ ವಿಶ್ವಕಪ್​ನಲ್ಲಿ ಕಲೆಹಾಕಿರುವ ಒಟ್ಟು ರನ್ 91 ಮಾತ್ರ. ಈ 91 ರನ್​ಗಳಿಸಲು ಬಾಬರ್ ಬರೋಬ್ಬರಿ 81 ಎಸೆತಗಳನ್ನು ಎದುರಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ.

Follow Us
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?