AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಡಿಗೆ ಕಟ್ಟಲಾಗದೇ ಕೊಹ್ಲಿ ಒಡೆತನದಲ್ಲಿದ್ದ ಬ್ರ್ಯಾಂಡ್ ರೆಸ್ಟೋರೆಂಟ್​ ಬಂದ್​!

ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳ ಹಾಟ್ ಫೇವರೆಟ್ ಆಗಿದ್ದ ವಿರಾಟ್ ಕೊಹ್ಲಿ ಸಹ-ಮಾಲೀಕತ್ವದ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಈಗ ಇತಿಹಾಸದ ಪುಟ ಸೇರಿದೆ. ಕಳೆದ ಹಲವು ತಿಂಗಳಿಂದ ಕೋಟ್ಯಂತರ ರೂಪಾಯಿ ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಈ ಐಷಾರಾಮಿ ರೆಸ್ಟೋರೆಂಟ್ ಅನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ.

ಬಾಡಿಗೆ ಕಟ್ಟಲಾಗದೇ ಕೊಹ್ಲಿ ಒಡೆತನದಲ್ಲಿದ್ದ ಬ್ರ್ಯಾಂಡ್ ರೆಸ್ಟೋರೆಂಟ್​ ಬಂದ್​!
Virat Kohli
ಝಾಹಿರ್ ಯೂಸುಫ್
|

Updated on: Apr 22, 2026 | 5:02 PM

Share

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಸ್ತೂರ್​ಬಾ ರಸ್ತೆಯಲ್ಲಿದ್ದ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರ ಒಡೆತನದ (ಹಿಂದಿನ ಪಾಲುದಾರಿಕೆ) ‘ಒನ್8 ಕಮ್ಯೂನ್’ (One8 Commune) ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದೆ. ಸುಮಾರು ₹2 ಕೋಟಿಗೂ ಅಧಿಕ ಬಾಡಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ಈ ಜನಪ್ರಿಯ ಹ್ಯಾಂಗೌಟ್ ತಾಣಕ್ಕೆ ಈಗ ಬೀಗ ಬಿದ್ದಿದೆ.

ಬಾಡಿಗೆ ಬಾಕಿ ಮತ್ತು ಕೋರ್ಟ್ ಆದೇಶ:

ಕಸ್ತೂರ್​ಬಾ ರಸ್ತೆ ರಸ್ತೆಯಲ್ಲಿರುವ ರತ್ನಂ ಕಾಂಪ್ಲೆಕ್ಸ್‌ನಲ್ಲಿ ಈ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿತ್ತು. ಆದರೆ, ರೆಸ್ಟೋರೆಂಟ್ ನಡೆಸುತ್ತಿದ್ದ ‘ಟ್ರಿಯೊ ಹಿಲ್ಸ್ ಹಾಸ್ಪಿಟಾಲಿಟಿ’ ಸಂಸ್ಥೆಯು ಕಳೆದ ಸುಮಾರು ಆರು ತಿಂಗಳಿನಿಂದ ಕಟ್ಟಡದ ಮಾಲೀಕರಿಗೆ ಬಾಡಿಗೆ ಪಾವತಿಸಿರಲಿಲ್ಲ. ಈ ಬಾಕಿ ಮೊತ್ತ ಸುಮಾರು ₹2 ಕೋಟಿಗೂ ಹೆಚ್ಚು ದಾಟಿತ್ತು ಎನ್ನಲಾಗಿದೆ. ಮಾಲೀಕರು ಸಿವಿಲ್ ಕೋರ್ಟ್ ಮೊರೆ ಹೋದ ನಂತರ, ನ್ಯಾಯಾಲಯವು ರೆಸ್ಟೋರೆಂಟ್ ಅನ್ನು ತೆರವುಗೊಳಿಸುವಂತೆ ಆದೇಶ ನೀಡಿತು.

ವಿರಾಟ್ ಕೊಹ್ಲಿ ಸಂಬಂಧ ಕಡಿದುಕೊಂಡಿದ್ದೇಕೆ?

ಈ ಔಟ್‌ಲೆಟ್ ಆರಂಭದಲ್ಲಿ ವಿರಾಟ್ ಕೊಹ್ಲಿ ಅವರ ‘One8’ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಈ ರೆಸ್ಟೋರೆಂಟ್ ಹಲವು ವಿವಾದಗಳಿಗೆ ಸಿಲುಕಿತ್ತು. ಮೂಲಗಳ ಪ್ರಕಾರ, ರೆಸ್ಟೋರೆಂಟ್ ನಿರ್ವಹಣೆಯಲ್ಲಿನ ಲೋಪದೋಷಗಳು ಮತ್ತು ಸತತವಾಗಿ ಬರುತ್ತಿದ್ದ ನೋಟಿಸ್‌ಗಳಿಂದ ಬೇಸತ್ತ ಕೊಹ್ಲಿ, ಈ ನಿರ್ದಿಷ್ಟ ಔಟ್‌ಲೆಟ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡು ಪಾಲುದಾರಿಕೆಯನ್ನು ಕಡಿದುಕೊಂಡಿದ್ದರು.

ಇತರೆ ಕಾನೂನು ಸಮಸ್ಯೆಗಳು!

ಬಾಡಿಗೆ ಬಾಕಿ ಮಾತ್ರವಲ್ಲದೆ, ಈ ರೆಸ್ಟೋರೆಂಟ್ ಬಿಬಿಎಂಪಿ (BBMP) ಮತ್ತು ಅಗ್ನಿಶಾಮಕ ದಳದಿಂದಲೂ ತೀವ್ರ ವಿರೋಧ ಎದುರಿಸುತ್ತಿತ್ತು:

  • ಅಗ್ನಿಶಾಮಕ ಎನ್‌ಒಸಿ ಇಲ್ಲದಿರುವುದು: ಕಟ್ಟಡದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಅಗ್ನಿಶಾಮಕ ಇಲಾಖೆ ಎನ್‌ಒಸಿ (NOC) ನೀಡಿರಲಿಲ್ಲ.
  • ಸಮಯ ಮೀರಿದ ವಹಿವಾಟು: ನಿಗದಿಗಿಂತ ಹೆಚ್ಚು ಸಮಯದವರೆಗೆ ರೆಸ್ಟೋರೆಂಟ್ ತೆರೆದಿಡಲಾಗುತ್ತಿತ್ತು ಎಂಬ ದೂರಿನ ಮೇರೆಗೆ ಪೊಲೀಸರು ಈ ಹಿಂದೆ ಪ್ರಕರಣ ದಾಖಲಿಸಿದ್ದರು.
  • ಧೂಮಪಾನ ವಲಯ: ಸರಿಯಾದ ಧೂಮಪಾನ ವಲಯ (Smoking Zone) ಇಲ್ಲದಿದ್ದರೂ ನಿಯಮ ಉಲ್ಲಂಘಿಸುತ್ತಿದ್ದ ಆರೋಪವಿತ್ತು.

ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದಲ್ಲಿದ್ದ ಈ ರೆಸ್ಟೋರೆಂಟ್ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ತಾಣವಾಗಿತ್ತು. ಆದರೆ ವಿರಾಟ್ ಕೊಹ್ಲಿ ಬ್ರ್ಯಾಂಡ್‌ನಿಂದ ಹೊರಬಂದ ನಂತರ ಮತ್ತು ಬಾಡಿಗೆ ಸಮಸ್ಯೆಯಿಂದಾಗಿ ಗ್ರಾಹಕರ ಸಂಖ್ಯೆಯೂ ಕ್ಷೀಣಿಸಿತ್ತು.

ಪ್ರಸ್ತುತ, ಕೋರ್ಟ್ ಆದೇಶದಂತೆ ರೆಸ್ಟೋರೆಂಟ್‌ನಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ: RCB ವಿರುದ್ಧ ಹೀರೋ SRH ವಿರುದ್ಧ ಝೀರೋ!

ಬೆಂಗಳೂರಿನ ಈ ಒಂದು ಶಾಖೆ ಮುಚ್ಚಿದ್ದರೂ, ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಂತಹ ನಗರಗಳಲ್ಲಿ ‘ಒನ್8 ಕಮ್ಯೂನ್’ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

Follow Us
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!