IPL 2025: ರಿವ್ಯೂ ತೆಗೆದುಕೊಳ್ಳದೇ ಪಂದ್ಯ ಸೋತ ಡೆಲ್ಲಿ ಕ್ಯಾಪಿಟಲ್ಸ್

IPL 2025 KKR vs DC: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 48ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 204 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 190 ರನ್​ಗಳಿಸಲಷ್ಟೇ ಶಕ್ತರಾದರು.

IPL 2025: ರಿವ್ಯೂ ತೆಗೆದುಕೊಳ್ಳದೇ ಪಂದ್ಯ ಸೋತ ಡೆಲ್ಲಿ ಕ್ಯಾಪಿಟಲ್ಸ್
Kkr Vs Dc

Updated on: Apr 30, 2025 | 8:32 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-18ರ 48ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ ಸೋಲನುಭವಿಸಿದೆ. ಈ ಸೋಲಿಗೆ ಪ್ರಮುಖ ಕಾರಣ ರಿವ್ಯೂ ತೆಗೆದುಕೊಳ್ಳದಿರುವುದು ಎಂದರೆ ತಪ್ಪಾಗಲಾರದು. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 113 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.

ಈ ಹಂತದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಇದೇ ರಿಂಕು ಸಿಂಗ್ ಕೇವಲ 13 ರನ್​ಗಳಿಸಿದಾಗ ಪೆವಿಲಿಯನ್​ ಸೇರಬೇಕಿತ್ತು. ಅಕ್ಷರ್ ಪಟೇಲ್ ಎಸೆದ 14ನೇ  ಓವರ್‌ನ ನಾಲ್ಕನೇ ಎಸೆತವನ್ನು ಲೆಗ್ ಸೈಡ್​ನತ್ತ ಬಾರಿಸಲು ರಿಂಕು ಸಿಂಗ್ ಪ್ರಯತ್ನಿಸಿದರು.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಆದರೆ ಬ್ಯಾಟ್​ನ ಅಂಚಿನಿಂದ ಸಾಗಿದ ಚೆಂಡು ವಿಕೆಟ್ ಕೀಪರ್ ಕೈ ಸೇರಿದೆ. ಇತ್ತ ಚೆಂಡು ಬ್ಯಾಟ್​ಗೆ ತಾಗಿದೆಯಾ ಎಂಬ ಸಂಶಯವೊಂದು ಅಕ್ಷರ್ ಪಟೇಲ್​ಗೆ ಮೂಡಿತ್ತು. ಆದರೆ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಚೆಂಡು ಬ್ಯಾಟ್​ಗೆ ತಾಗಿಲ್ಲ, ಡಿಆರ್​ಎಸ್​ ತೆಗೆದುಕೊಳ್ಳುವುದು ಬೇಡ ಎಂದರು. ಹೀಗಾಗಿ ಅಕ್ಷರ್ ಪಟೇಲ್ ವಿಮರ್ಶೆಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದರು.

ಇದಾದ ಬಳಿಕ ತೋರಿಸಲಾದ ರಿಪ್ಲೇನಲ್ಲಿ ರಿಂಕು ಸಿಂಗ್ ಅವರ ಬ್ಯಾಟ್ ಚೆಂಡಿಗೆ ತಗುಲಿರುವುದು ಸ್ಪಷ್ಟವಾಗಿತ್ತು. ಅಲ್ಲದೆ ಅಕ್ಷರ್ ಪಟೇಲ್ ರಿವ್ಯೂ ತೆಗೆದುಕೊಂಡಿದ್ದರೆ, ಮೂರನೇ ಅಂಪೈರ್ ಔಟ್ ನೀಡುತ್ತಿದ್ದರು. ಆದರೆ ಅಭಿಷೇಕ್ ಪೊರೆಲ್ ಅವರ ಅತಿಯಾದ ಆತ್ಮ ವಿಶ್ವಾಸದಿಂದಾಗಿ ರಿಂಕು ಸಿಂಗ್​​ಗೆ ಜೀವದಾನ ಲಭಿಸಿತು.

ರಿಂಕು ಸಿಂಗ್ ಬ್ಯಾಟ್ ಎಡ್ಜ್​ ಆಗಿರುವ ಫೋಟೋ:

13 ರನ್​ಗಳಿಸಿದ್ದಾಗ ಸಿಕ್ಕ ಜೀವದಾನವನ್ನು ಬಳಸಿಕೊಂಡ ರಿಂಕು ಸಿಂಗ್ 25 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 35 ರನ್ ಕಲೆಹಾಕಿದರು. ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಜೀವದಾನದಿಂದಾಗಿ ರಿಂಕು ಸಿಂಗ್ ಹೆಚ್ಚುವರಿ 22 ರನ್ ಗಳಿಸಿದ್ದರು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಕೋರ್ 200ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ: VIDEO: ಪಂದ್ಯದ ಬಳಿಕ ರಿಂಕು ಸಿಂಗ್ ಕಪಾಳಕ್ಕೆ ಬಾರಿಸಿದ ಕುಲ್ದೀಪ್ ಯಾದವ್

ಅದರಂತೆ 205 ರನ್​ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 190 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 14 ರನ್​ಗಳಿಂದ ಸೋಲೊಪ್ಪಿಕೊಂಡಿತು. ಅಂದರೆ ಇಲ್ಲಿ ರಿಂಕು ಸಿಂಗ್ ಗಳಿಸಿದ ಹೆಚ್ಚುವರಿ 22 ರನ್​ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಇದುವೇ ಸೋಲಿಗೆ ಕಾರಣವಾಯಿತು ಎಂದರೆ ತಪ್ಪಾಗಲಾರದು.