AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

13 ವರ್ಷಗಳ ಕಾಯುವಿಕೆಗೆ ಅಂತ್ಯ: ದುಲೀಪ್ ಟ್ರೋಫಿ ಫೈನಲ್‌ಗೆ ಈಸ್ಟ್ ಝೋನ್!

Duleep Trophy 2026: ದೇಶಿ ಕ್ರಿಕೆಟ್‌ನ ಜಿದ್ದಾಜಿದ್ದಿನ ಹೋರಾಟದಲ್ಲಿ ಹಾಲಿ ಚಾಂಪಿಯನ್ನರಿಗೆ ಶಾಕ್ ನೀಡಿರುವ ಈಸ್ಟ್ ಝೋನ್ ತಂಡವು, ಬರೋಬ್ಬರಿ 13 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆದು ಪ್ರತಿಷ್ಠಿತ ದುಲೀಪ್ ಟ್ರೋಫಿ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬೆಂಗಳೂರಿನಲ್ಲಿ ನಡೆದ ರೋಚಕ ಸೆಮಿಫೈನಲ್ ಹಣಾಹಣಿಯಲ್ಲಿ ಸೆಂಟ್ರಲ್ ಝೋನ್ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿ ಇಶಾನ್ ಕಿಶನ್ ಸಾರಥ್ಯದ ಈಸ್ಟ್ ಝೋನ್ ಪ್ರಶಸ್ತಿ ಸುತ್ತಿಗೆ ತಲುಪಿದೆ.

13 ವರ್ಷಗಳ ಕಾಯುವಿಕೆಗೆ ಅಂತ್ಯ: ದುಲೀಪ್ ಟ್ರೋಫಿ ಫೈನಲ್‌ಗೆ ಈಸ್ಟ್ ಝೋನ್!
East ZoneImage Credit source: BCCI
ಝಾಹಿರ್ ಯೂಸುಫ್
|

Updated on: Sep 02, 2026 | 9:11 AM

Share

ದೇಶಿ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿ ದುಲೀಪ್ ಟ್ರೋಫಿಯ ಮೊದಲ ಸೆಮಿಫೈನಲ್​ನಲ್ಲಿ ಈಸ್ಟ್ ಝೋನ್ (ಪೂರ್ವ ವಲಯ) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಈಸ್ಟ್ ಝೋನ್ ತಂಡವು 13 ವರ್ಷಗ ಬಳಿಕ ದುಲೀಪ್ ಟ್ರೋಫಿ ಟೂರ್ನಿಯ ಫೈನಲ್​ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಈಸ್ಟ್ ಝೋನ್ ಕೊನೆಯ ಬಾರಿ ಫೈನಲ್ ಆಡಿದ್ದು 2012-13 ಸೀಸನ್​ನಲ್ಲಿ. ಅಂದು ನಟರಾಜ್ ಬೆಹೆರಾ ಮುಂದಾಳತ್ವದಲ್ಲಿ ಕಣಕ್ಕಿಳಿದಿದ್ದ ಈಸ್ಟ್ ಝೋನ್ ಫೈನಲ್ ಪಂದ್ಯದಲ್ಲಿ ಸೆಂಟ್ರಲ್ ಝೋನ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಹದಿಮೂರು ವರ್ಷಗಳ ಬಳಿಕ ಮತ್ತೊಮ್ಮೆ ಈಸ್ಟ್ ಝೋನ್ ಫೈನಲ್​ಗೆ ಲಗ್ಗೆಯಿಟ್ಟಿದೆ.

4 ವಿಕೆಟ್​ಗಳ ಜಯ:

ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ಮತ್ತು ಸೆಂಟ್ರಲ್ ಝೋನ್ ತಂಡಗಳು ತಮ್ಮ ಮೊದಲ ಇನಿಂಗ್ಸ್‌ನಲ್ಲಿ ಸಮಾನವಾಗಿ 266 ರನ್ ಗಳಿಸಿ ಟೈ ಸಾಧಿಸಿದವು. ಬಳಿಕ ಎರಡನೇ ಇನಿಂಗ್ಸ್‌ನಲ್ಲಿ ಸೆಂಟ್ರಲ್ ಝೋನ್ ತಂಡವನ್ನು 158 ರನ್‌ಗಳಿಗೆ ಕಟ್ಟಿಹಾಕಿದ ಈಸ್ಟ್ ಝೋನ್, 162/6 ರನ್ ಗಳಿಸಿ 4 ವಿಕೆಟ್‌ಗಳ ಜಯದೊಂದಿಗೆ ಫೈನಲ್ ಪ್ರವೇಶಿಸಿದೆ.

ಈಸ್ಟ್ ಝೋನ್ ಗೆಲುವಿನ ರೂವಾರಿಗಳು:

  • ಮುಖೇಶ್  ಮಾರಕ ದಾಳಿ: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವೇಗಿ ಮುಖೇಶ್ ಕುಮಾರ್ ಒಟ್ಟು 7 ವಿಕೆಟ್ (3/56 ಮತ್ತು 4/44) ಕಬಳಿಸುವ ಮೂಲಕ ಸೆಂಟ್ರಲ್ ಝೋನ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅವರ ಈ ಘಾತಕ ಬೌಲಿಂಗ್ ನೆರವಿನಿಂದ ಸೆಂಟ್ರಲ್ ಝೋನ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 158 ರನ್‌ಗಳಿಗೆ ಆಲೌಟ್ ಆಯಿತು.
  • ವೈಭವ್ ಆರ್ಭಟ: ಯುವ ದಾಂಡಿಗ ವೈಭವ್ ಸೂರ್ಯವಂಶಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 81 ಎಸೆತಗಳಲ್ಲಿ 92 ರನ್ ಚಚ್ಚಿ ತಂಡಕ್ಕೆ ಬಲ ತುಂಬಿದ್ದರು. ಬಳಿಕ 159 ರನ್‌ಗಳ ಗುರಿ ಬೆನ್ನಟ್ಟಿದಾಗಲೂ ಕೇವಲ 43 ಎಸೆತಗಳಲ್ಲಿ 40 ರನ್ ಸಿಡಿಸಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿದ್ದರು.
  • ಇಶಾನ್ ಕಿಶನ್ ಜವಾಬ್ದಾರಿಯುತ ಆಟ: ದ್ವಿತೀಯ ಇನಿಂಗ್ಸ್​ನಲ್ಲಿ ದಿಢೀರ್ ಕುಸಿತ ಕಂಡಿದ್ದ ತಂಡಕ್ಕೆ ನಾಯಕ ಇಶಾನ್ ಕಿಶನ್ ಆಸರೆಯಾಗಿ ನಿಂತರು. ಅಂತಿಮವಾಗಿ ಅಜೇಯ 39 ರನ್* ಗಳಿಸಿ ಈಸ್ಟ್ ಝೋನ್​ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು.

ಸೆಂಟ್ರಲ್ ಝೋನ್ ಪ್ಲೇಯಿಂಗ್ 11: ಅಮನ್ ಮೊಖಡೆ , ಆರ್ಯನ್ ಜುಯಲ್ (ವಿಕೆಟ್ ಕೀಪರ್) , ಕುನಾಲ್ ಚಾಂಡೇಲಾ , ಯಶ್ ರಾಥೋಡ್ , ರಜತ್ ಪಾಟಿದಾರ್ (ನಾಯಕ) , ರಿಂಕು ಸಿಂಗ್ , ಸರಾಂಶ್ ಜೈನ್ , ಹರ್ಷ್ ದುಬೆ , ಅರ್ಷದ್ ಖಾನ್ , ಯಶ್ ಠಾಕೂರ್ , ಆರ್ಯನ್ ಪಾಂಡೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ಹೊಸ ಷರತ್ತು ವಿಧಿಸಿದ ಮುಂಬೈ ಇಂಡಿಯನ್ಸ್

ಈಸ್ಟ್ ಝೋನ್ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ವೈಭವ್ ಸೂರ್ಯವಂಶಿ , ಕುಮಾರ್ ಕುಶಾಗ್ರ , ಸುದೀಪ್ ಕುಮಾರ್ ಘರಾಮಿ , ಇಶಾನ್ ಕಿಶನ್ (ನಾಯಕ) , ವಿರಾಟ್ ಸಿಂಗ್ , ಮುಹಮ್ಮದ್ ಖುರೈಶಿ , ಅನುಕೂಲ್ ರಾಯ್ , ಅಭಿಜಿತ್ ಕೆ ಸರ್ಕಾರ್ , ಮೊಹಮ್ಮದ್ ಶಮಿ , ಮುಖೇಶ್ ಕುಮಾರ್.

ಚೆನ್ನೈನಲ್ಲಿ ಫೈನಲ್ ಫೈಟ್:

ಹಾಲಿ ಚಾಂಪಿಯನ್ನರನ್ನೇ ಟೂರ್ನಿಯಿಂದ ಹೊರಹಾಕಿರುವ ಈಸ್ಟ್ ಝೋನ್ ಈಗ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ಈ ಆತ್ಮ ವಿಶ್ವಾಸದೊಂದಿಗೆ ಫೈನಲ್​ನಲ್ಲೂ ಕಣಕ್ಕಿಳಿಯಲಿದೆ. ದುಲೀಪ್ ಟ್ರೋಫಿ ಫೈನಲ್ ಪಂದ್ಯವು ಸೆಪ್ಟೆಂಬರ್ 6 ರಿಂದ 10 ರವರೆಗೆ ಚೆನ್ನೈನ  ಎಂ. ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಈಸ್ಟ್ ಝೋನ್ ತಂಡವು ಸೌತ್ ಝೋನ್ ಅಥವಾ ನಾರ್ತ್ ಝೋನ್ ತಂಡವನ್ನು ಎದುರಿಸಲಿದೆ.

Follow Us
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್