IND vs ENG: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್
England Announces Squad: ಜೂನ್ 20, 2025 ರಿಂದ ಆರಂಭವಾಗುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತನ್ನ 14 ಆಟಗಾರರ ತಂಡವನ್ನು ಪ್ರಕಟಿಸಿದೆ. ಬೆನ್ ಸ್ಟೋಕ್ಸ್ ನಾಯಕತ್ವದ ತಂಡದಲ್ಲಿ ಜೋ ರೂಟ್, ಓಲಿ ಪೋಪ್, ಮತ್ತು ಬೆನ್ ಡಕೆಟ್‌ರಂತಹ ಹಿರಿಯ ಆಟಗಾರರು ಸೇರಿದ್ದಾರೆ. ಗಾಯದಿಂದ ಬಳಲುತ್ತಿರುವ ಗಸ್ ಅಟ್ಕಿನ್ಸನ್ ಇಲ್ಲದಿರುವುದು ಇಂಗ್ಲೆಂಡ್‌ಗೆ ಹಿನ್ನಡೆಯಾಗಿದೆ. ಮೂರು ವರ್ಷಗಳ ನಂತರ ಜೇಮೀ ಓವರ್ಟನ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಈ ಸರಣಿಯು ಇಂಗ್ಲೆಂಡ್‌ಗೆ ಬಹಳ ಮುಖ್ಯವಾಗಿದೆ.

ಜೂನ್ 20 ರಿಂದ ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಭಾಗವಾಗಿದ್ದು ಎರಡೂ ತಂಡಗಳು ಸರಣಿ ಗೆಲುವಿನೊಂದಿಗೆ ನಾಲ್ಕನೇ ಆವೃತ್ತಿಯನ್ನು ಆರಂಭಿಸುವ ಇರಾದೆಯಲ್ಲಿವೆ. ಇದೀಗ ಈ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ತನ್ನ ತಂಡವನ್ನು ಪ್ರಕಟಿಸಿದೆ. ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ಒಟ್ಟು 14 ಆಟಗಾರರನ್ನು ಆಯ್ಕೆ ಮಾಡಿದ್ದು, ಈ ಟೆಸ್ಟ್ ಜೂನ್ 20, 2025 ರಂದು ಹೆಡಿಂಗ್ಲಿಯಲ್ಲಿ ಪ್ರಾರಂಭವಾಗಲಿದೆ. ಎಂದಿನಂತೆ ತಂಡದ ನಾಯಕತ್ವ ಬೆನ್ ಸ್ಟೋಕ್ಸ್ ಬಳಿ ಇರಲಿದ್ದು, ಜೋ ರೂಟ್, ಓಲಿ ಪೋಪ್ ಮತ್ತು ಬೆನ್ ಡಕೆಟ್‌ರಂತಹ ಹಿರಿಯ ಆಟಗಾರರು ತಂಡದಲ್ಲಿ ಸೇರಿದ್ದಾರೆ. ಹಿರಿಯರ ಜೊತೆಗೆ, ಕೆಲವು ಯುವ ಆಟಗಾರರನ್ನು ಸಹ ತಂಡದಲ್ಲಿ ಆಯ್ಕೆ ಮಾಡಲಾಗಿದೆ.
ತಂಡದಲ್ಲಿ ಮತ್ತ್ಯಾರಿಗೆಲ್ಲ ಸ್ಥಾನ?
ವೇಗದ ಬೌಲರ್ ಜೇಮೀ ಓವರ್ಟನ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದು, ಮತ್ತೊಬ್ಬ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಗಾಯದ ಕಾರಣದಿಂದಾಗಿ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಜ್ಯಾಕ್ ಕ್ರೌಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕುಕ್ ಮತ್ತು ಜಾಕೋಬ್ ಬೆಥೆಲ್ ಅವರಂತಹ ಸ್ಟಾರ್ ಆಟಗಾರರು ಸಹ ಈ ತಂಡದಲ್ಲಿದ್ದಾರೆ. ಅದೇ ಸಮಯದಲ್ಲಿ, ಸ್ಪಿನ್ ಬೌಲಿಂಗ್ ಜವಾಬ್ದಾರಿ ಶೋಯೆಬ್ ಬಶೀರ್ ಮೇಲಿದ್ದು, ವೇಗದ ಬೌಲಿಂಗ್ ದಾಳಿಯಲ್ಲಿ ಜೇಮೀ ಓವರ್ಟನ್ ಜೊತೆಗೆ ಜೋಶ್ ಟಂಗ್, ಕ್ರಿಸ್ ವೋಕ್ಸ್ ಮತ್ತು ಬ್ರೈಡನ್ ಕಾರ್ಸ್ ಸೇರಿದ್ದಾರೆ. ಜಾನಿ ಸ್ಮಿತ್ ಅವರನ್ನು ಈ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಜೇಮೀ ಓವರ್ಟನ್‌ಗೆ ಇದು ಒಂದು ದೊಡ್ಡ ಅವಕಾಶ. ಅವರು ಮೂರು ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಆದರೆ ಗಸ್ ಅಟ್ಕಿನ್ಸನ್ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕಳೆದ ತಿಂಗಳು ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಟ್ಕಿನ್ಸನ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಪ್ರಸ್ತುತ ಫಿಟ್ ಆಗಿಲ್ಲ.
Series Loading : ◼◼◼◻
Who is the first name in your XI?
🏴 #ENGvIND 🇮🇳 pic.twitter.com/YxUeU4Vv3z
— England Cricket (@englandcricket) June 5, 2025
ಹಿಂದಿನ ಸೋಲಿನ ಸೇಡು
ಭಾರತ ವಿರುದ್ಧದ ಕೊನೆಯ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವು ಹೀನಾಯ ಸೋಲನ್ನು ಎದುರಿಸಬೇಕಾಗಿ ಬಂದ ಕಾರಣ ಈ ಸರಣಿಯು ಇಂಗ್ಲೆಂಡ್‌ಗೆ ಬಹಳ ಮುಖ್ಯವಾಗಿದೆ. ಆದಾಗ್ಯೂ, ಈ ಬಾರಿ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ, ತಂಡವು ತವರಿನ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಬಲವಾದ ಆರಂಭವನ್ನು ಪಡೆಯಲು ಬಯಸುತ್ತದೆ. ಮತ್ತೊಂದೆಡೆ, ಭಾರತೀಯ ತಂಡವು ಈ ಸರಣಿಗೆ ಸಿದ್ಧವಾಗಿದ್ದು, ಇತ್ತೀಚೆಗೆ ಭಾರತ ‘ಎ’ ತಂಡವು ಲಯನ್ಸ್ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡಿತು, ಇದರಲ್ಲಿ ಕರುಣ್ ನಾಯರ್ ಅದ್ಭುತ ದ್ವಿಶತಕ ಬಾರಿಸಿದ್ದರು. ಹೀಗಾಗಿ ಇಂಗ್ಲೆಂಡ್‌ಗೆ ತವರಿನ ಲಾಭವಿದ್ದರೂ, ಭಾರತ ಯುವ ಪಡೆಯನ್ನು ಅಷ್ಟು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ.
ಭಾರತ ಟೆಸ್ಟ್ ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ
ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ
ಬೆನ್ ಸ್ಟೋಕ್ಸ್ (ನಾಯಕ), ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಂಗ್, ಕ್ರಿಸ್ ವೋಕ್ಸ್.
Published On - 3:04 pm, Thu, 5 June 25
