ಶ್ರೇಯಸ್ ಅಯ್ಯರ್ ಇಂಜುರಿ! ಸೂರ್ಯಕುಮಾರ್​ ಯಾದವ್​​ಗೆ ಅವಕಾಶ? ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ಯಾರಾಗಬಹುದು?

ಮಾರ್ಚ್ 23 ರಂದು ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಸಮಯದಲ್ಲಿ ಅಯ್ಯರ್ ಗಾಯಗೊಂಡರು.

  • TV9 Web Team
  • Published On - 11:21 AM, 25 Mar 2021
1/7
Shreyas-Iyer
ಇಂಜುರಿಯಿಂದಾಗಿ ಶ್ರೇಯಸ್​ ಅಯ್ಯರ್ ಈ ಬಾರಿಯ ಐಪಿಎಲ್​ನಿಂದ ಹೊರಗುಳಿಯಲ್ಲಿದ್ದಾರೆ
2/7
ಭಾರತೀಯ ತಂಡಕ್ಕೆ ಆಯ್ಕೆಗಳ ಕೊರತೆಯಿಲ್ಲ. ಶ್ರೇಯಸ್ ಬದಲಿಗೆ ಉತ್ತಮ ಹೆಸರು ಸೂರ್ಯಕುಮಾರ್ ಯಾದವ್, ಮೂರನೆಯ ಅಥವಾ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡುವ ಸಾಮಥ್ರ್ಯ ಯಾದವ್​ಗಿದೆ. ಸೂರ್ಯಕುಮಾರ್ ಕೂಡ ಟಿ 20 ಸರಣಿಯ ಮೂಲಕ ಪಾದಾರ್ಪಣೆ ಮಾಡಿ ಮಿಂಚಿದರು. ಹೀಗಾಗಿ ಏಕದಿನ ಸರಣಿಯಲ್ಲಿಯೂ ಅವಕಾಶ ಪಡೆಯಬಹುದು.
3/7
ವಿಶ್ವಕಪ್‌ನ ಹೊರತಾಗಿ ಇತರ ಸಂದರ್ಭಗಳಲ್ಲಿ ಈ ಸ್ಥಳದಲ್ಲಿ ಭಾರತ ಪರ ಆಡಿದ ರಿಷಭ್ ಪಂತ್ ಕೂಡ ಸ್ಪರ್ಧಿಯಾಗಿದ್ದಾರೆ. ಕಳೆದ ಪಂದ್ಯದಲ್ಲಿ ಹನ್ನೊಂದರೊಳಗೆ ಪಂತ್‌ಗೆ ಸ್ಥಾನ ಸಿಗಲಿಲ್ಲ. ಪಂತ್ ಅವರ ಇತ್ತೀಚಿನ ಪ್ರದರ್ಶನವು ಉತ್ತಮವಾಗಿದೆ.
4/7
ನಾಯಕತ್ವದ ಜೊತೆಗೆ ತಂಡದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಪಾತ್ರವನ್ನು ನಿರ್ವಹಿಸಬಲ್ಲ ಧವನ್ ನಂತರ ತಂಡಕ್ಕೆ ಮತ್ತೊಂದು ಬಲವಾದ ಆಯ್ಕೆ ಎಂದರೆ ಅದು ಅಜಿಂಕ್ಯ ರಹಾನೆ. ರಹಾನೆ ಉತ್ತಮ ನಾಯಕ ಮತ್ತು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಬ್ಯಾಟ್ಸ್‌ಮನ್‌ ಆಗಿ, ಅವರು ಶ್ರೇಯಸ್‌ನಂತೆ ಮಧ್ಯಮ ಕ್ರಮಾಂಕದ ಪಾತ್ರವನ್ನು ನಿರ್ವಹಿಸುವ ಸಾಮಥ್ರ್ಯ ಹೊಂದಿದ್ದಾರೆ.
5/7
Ashwin
ರವಿಚಂದ್ರನ್ ಅಶ್ವಿನ್
Ravichandran Ashwin ipl 2021 DC team player profile stats icc ranking photos videos indian cricket players latest news in kannada psr
6/7
ಮತ್ತೊಂದೆಡೆ, ದೆಹಲಿ ಕ್ಯಾಪಿಟಲ್ಸ್ ಹೆಚ್ಚು ದೊಡ್ಡ ಸವಾಲನ್ನು ಹೊಂದಿದೆ. ಏಕೆಂದರೆ ಅಯ್ಯರ್ ತಂಡದ ನಾಯಕ ಮಾತ್ರವಲ್ಲ, ಭಾರತೀಯ ಬ್ಯಾಟ್ಸ್‌ಮನ್‌ ಆಗಿ ತಂಡದ ಬ್ಯಾಟಿಂಗ್ ಶ್ರೇಣಿಯ ಪ್ರಮುಖ ಸದಸ್ಯರೂ ಆಗಿದ್ದಾರೆ. ನಾಯಕತ್ವಕ್ಕೆ ಸಂಬಂಧಿಸಿದಂತೆ, ಕಳೆದ ಆವೃತ್ತಿಯಲ್ಲಿ ಕೆಲವು ಪಂದ್ಯಗಳ ನಾಯಕತ್ವ ವಹಿಸಿದ್ದ ಶಿಖರ್ ಧವನ್ ಈ ಸಲ ತಂಡದ ನಾಯಕತ್ವವಹಿಸಬಹುದು.
7/7
ದೆಹಲಿ ತಂಡದಲ್ಲಿ ಆಸ್ಟ್ರೇಲಿಯಾದ ಅನುಭವಿ ಸ್ಟೀವ್ ಸ್ಮಿತ್ ಕೂಡ ಇದ್ದಾರೆ, ಅವರನ್ನು ಈ ವರ್ಷ ಖರೀದಿಸಲಾಗಿದೆ. ಐಪಿಎಲ್‌ನಲ್ಲಿ ಸ್ಮಿತ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ, ಅವರಿಗೆ ತಂಡದಲ್ಲಿ ಸ್ಥಾನವಿರಬಹುದು. ಆದರೆ, ಸ್ಮಿತ್​ಗೆ ತಂಡದ ನಾಯಕತ್ವವಹಿಸುವುದು ಅನುಮಾನಕರವಾಗಿದೆ.